ಬುಧವಾರ, ಮಾರ್ಚ್ 27, 2019

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು

Nimbehannu and kamakasthuri seeds juice recipe in Kannada

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ 



ಹೆಸರುಕಾಳು ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ನಿಂಬೆಹಣ್ಣು 
  2. 2 ಟೇಬಲ್ ಚಮಚ ಕಾಮಕಸ್ತುರಿ ಬೀಜ ಅಥವಾ ಸಬ್ಜ ಬೀಜ
  3. 1/2 ಕಪ್ ಸಕ್ಕರೆ ಅಥವಾ ಬೆಲ್ಲ 
  4. ಅಗತ್ಯವಿದ್ದಷ್ಟು ನೀರು
  5. ಐಸ್ ಕ್ಯೂಬ್ಸ್

ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ ಉಪಯೋಗಿಸಿ):

  1. 1 ಏಲಕ್ಕಿ
  2. ಸ್ವಲ್ಪ ಕಿತ್ತಳೆ ಹಣ್ಣಿನ ರಸ
  3. ಜಜ್ಜಿದ ಶುಂಠಿ ಮತ್ತು ಪುದಿನ 
  4. ಸ್ವಲ್ಪ ಅನಾನಸ್ ಹಣ್ಣಿನ ರಸ

ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ:

  1. 1/2 ಕಪ್ ಸಕ್ಕರೆ (ಅಥವಾ ಬೆಲ್ಲ) ಮತ್ತು 1/2 ಕಪ್ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಸಕ್ಕರೆ ಅಥವಾ ಬೆಲ್ಲ ಕರಗುವವರೆಗೆ ಬಿಸಿ ಮಾಡಿ. ಸ್ಟವ್ ಆಫ್ ಮಾಡಿ, ಬಿಸಿಆರಲು ಬಿಡಿ. 
  3. ಒಂದು ಬಟ್ಟಲಿನಲ್ಲಿ ಕಾಮಕಸ್ತುರಿ ಬೀಜವನ್ನು ಅರ್ಧ ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಸಿಡಿ. 
  4. ಒಂದು ಬಾಟಲಿ ಅಥವಾ ಮುಚ್ಚಳ ಗಟ್ಟಿ ಇರುವ ಪಾತ್ರೆಯಲ್ಲಿ, ನೆನೆಸಿದ ಕಾಮಕಸ್ತುರಿ ಬೀಜ, ಸಕ್ಕರೆ ನೀರು, ನಿಂಬೆಹಣ್ಣಿನ ರಸ, ಅರ್ಧ ಕಪ್ ಐಸ್ ಕ್ಯೂಬ್ಸ್ ಮತ್ತು ಅರ್ಧ ಕಪ್ ನೀರು ತೆಗೆದುಕೊಳ್ಳಿ. 
  5. ಬೇಕಾದಲ್ಲಿ ಏಲಕ್ಕಿ ಅಥವಾ ಕಿತ್ತಳೆ ಹಣ್ಣಿನ ರಸ ಅಥವಾ ಜಜ್ಜಿದ ಶುಂಠಿ-ಪುದಿನ ಅಥವಾ ಅನಾನಸ್ ಹಣ್ಣಿನ ರಸ ಸೇರಿಸಬಹುದು. 
  6. ನಂತ್ರ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಕುಡಿಯಲು ನೀಡಿ. 

ಸೋಮವಾರ, ಮಾರ್ಚ್ 25, 2019

Pop corn recipe in Kannada | ಪಾಪ್ ಕಾರ್ನ್ ಮಾಡುವ ವಿಧಾನ

Pop corn recipe in Kannada

Pop corn recipe in Kannada | ಪಾಪ್ ಕಾರ್ನ್ ಮಾಡುವ ವಿಧಾನ 

ಪಾಪ್ ಕಾರ್ನ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಒಣಗಿದ ಮೆಕ್ಕೆಜೋಳ
  2. 1/4 ಟೀಸ್ಪೂನ್ ಉಪ್ಪು 
  3. ದೊಡ್ಡ ಚಿಟಿಕೆ ಅರಿಶಿನ
  4. 1 ಟೇಬಲ್ ಚಮಚ ಎಣ್ಣೆ
  5. ಚಿಟಿಕೆ ಅಚ್ಚಖಾರದ ಪುಡಿ (ಬೇಕಾದಲ್ಲಿ)
  6. ಚಿಟಿಕೆ ಚಾಟ್ ಮಸಾಲಾ (ಬೇಕಾದಲ್ಲಿ)

ಪಾಪ್ ಕಾರ್ನ್ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿಮಾಡಿ.
  2. ಅದಕ್ಕೆ ಒಣಗಿದ ಜೋಳವನ್ನು ಸೇರಿಸಿ. 
  3. ಜೊತೆಗೆ ಉಪ್ಪು ಮತ್ತು ಅರಿಶಿನ ಸೇರಿಸಿ. 
  4. ದೊಡ್ಡ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಜೊತೆಯಲ್ಲೇ, ಕುಕ್ಕರ್ ಮುಚ್ಚಳವನ್ನು ವೆಯಿಟ್ ಮತ್ತು ಗ್ಯಾಸ್ಕೆಟ್ ತೆಗೆದು ಹತ್ತಿರ ಇಟ್ಟುಕೊಳ್ಳಿ.  
  5. ಜೋಳ ಅರಳಲು ಅಥವಾ ಪಾಪ್ ಆಗಲು ಪ್ರಾರಂಭವಾದ ಕೂಡಲೇ, ಮುಚ್ಚಳ ಮುಚ್ಚಿ. ಸ್ಟವ್ ಮಧ್ಯಮ ಉರಿಯಲ್ಲಿಡಿ. ಗಮನಿಸಿ... ವೆಯಿಟ್ ಇಲ್ಲ ಮತ್ತು ಗ್ಯಾಸ್ಕೆಟ್ ಇಲ್ಲ. 
  6. ಜೋಳ ಅರಳುವ ಸದ್ದು ಕಡಿಮೆ ಆದ ಕೂಡಲೇ ಸ್ಟವ್ ಆಫ್ ಮಾಡಿ. 
  7. ಮುಚ್ಚಳ ತೆಗೆದು, ಬೇಕಾದಲ್ಲಿ ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಅಥವಾ ಇನ್ನಾವುದೇ ಮಸಾಲಾ ಸೇರಿಸಿ. ಸವಿದು ಆನಂದಿಸಿ.

ಶುಕ್ರವಾರ, ಮಾರ್ಚ್ 22, 2019

Genasale recipe in Kannada | ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ

Genasale recipe in Kannada

Genasale recipe in Kannada | ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ

ಗೆಣಸಾಲೆ ಅಥವಾ ಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
  2. 0.5 ಕಪ್ ತೆಂಗಿನ ತುರಿ
  3. ಉಪ್ಪು ರುಚಿಗೆ ತಕ್ಕಷ್ಟು.
  4. 0.5 ಕಪ್ ಉದ್ದಿನಬೇಳೆ 
  5. 2 ಸೆಮೀ ಉದ್ದದ ಶುಂಠಿ
  6. 2 - 3 ಹಸಿರುಮೆಣಸಿನಕಾಯಿ
  7. ದೊಡ್ಡ ಚಿಟಿಕೆ ಇಂಗು
  8. ಬಾಳೆಎಲೆ

ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 0.5 ಕಪ್ ತೆಂಗಿನ ತುರಿ
  2. 1/4 ಕಪ್ ಬೆಲ್ಲ

ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು 2 - 3 ಘಂಟೆ ಕಾಲ ನೆನೆಸಿ.
  2. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು 2 - 3 ಘಂಟೆ ಕಾಲ ನೆನೆಸಿ.
  3. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಟ್ಟುಕೊಳ್ಳಿ. 
  4. ಅಕ್ಕಿ ನೆನೆದ ಮೇಲೆ, ತೆಂಗಿನಕಾಯಿ ಮತ್ತು ಉಪ್ಪಿನೊಂದಿಗೆ, ಅಗತ್ಯವಿರುವಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಅರೆಯಿರಿ. 
  5. ಹಿಟ್ಟು ಮಿಲ್ಕ್ ಶೇಕ್ ಗಿಂತ ಸ್ವಲ್ಪ ಗಟ್ಟಿ ಇರಲಿ. ಒಂದು ಪಾತ್ರೆಗೆ ಬಗ್ಗಿಸಿಡಿ.
  6. ಉದ್ದಿನಬೇಳೆಯನ್ನು, ಶುಂಠಿ, ಹಸಿಮೆಣಸು ಮತ್ತು ಉಪ್ಪಿನ ಜೊತೆ, ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  7. ಹಿಟ್ಟು ದಪ್ಪ ದೋಸೆ ಹಿಟ್ಟಿನಂತಿರಲಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಇಂಗು ಸೇರಿಸಿ ಕಲಸಿಟ್ಟುಕೊಳ್ಳಿ. 
  8. ನಂತ್ರ ಇಡ್ಲಿ ಪಾತ್ರೆಯಲ್ಲಿ ನೀರು ಕಾಯಲು ಇಡೀ. 
  9. ಆಮೇಲೆ ಬಾಳೆಎಲೆ ತೆಗೆದುಕೊಂಡು, ಒಂದು ಸೌಟು ಅಕ್ಕಿ ಹಿಟ್ಟನ್ನು ಹರಡಿ. 
  10. ಮೇಲಿನಿಂದ ಉದ್ದಿನಹಿಟ್ಟನ್ನು ಹರಡಿ. 
  11. ಬಾಳೆಎಲೆಯನ್ನು ಮಡಚಿ, ಇಡ್ಲಿ ಪಾತ್ರೆಯಲ್ಲಿಡಿ.
  12. ಸಿಹಿ ಮಾಡಲು, ಅಕ್ಕಿ ಹಿಟ್ಟಿನ ಮೇಲೆ ಪುಡಿಮಾಡಿದ ಬೆಲ್ಲ ಮತ್ತು ತೆಂಗಿನತುರಿಯ ಮಿಶ್ರಣ ಹರಡಿ. 
  13. ಹೀಗೆ ಎಲ್ಲ ಕಡುಬನ್ನು ಬಾಳೆಎಲೆಯಲ್ಲಿ ಮಡಚಿ ಇಟ್ಟು, 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. 
  14. ಖಾರ ಕಡುಬನ್ನು ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ. ಸಿಹಿಯನ್ನು ತುಪ್ಪದೊಂದಿಗೆ ಬಡಿಸಿ.

ಸೋಮವಾರ, ಮಾರ್ಚ್ 18, 2019

Uppu kadlekai recipe in Kannada | ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ಮಾಡುವ ವಿಧಾನ

Uppu kadlekai recipe in Kannada

Uppu kadlekai recipe in Kannada | ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ಮಾಡುವ ವಿಧಾನ 

ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡ್ಲೆಕಾಯಿ ಅಥವಾ ಶೇಂಗಾ
  2. 1 ಕಪ್ ಉಪ್ಪು, ಹುರಿಯಲು

ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ಮಾಡುವ ವಿಧಾನ:

  1. ಶೇಂಗಾ ಅಥವಾ ಕಡಲೆ ಕಾಯಿಯನ್ನು ಒಂದು ನಿಮಿಷ ನೀರಿನಲ್ಲಿ ನೆನೆಸಿ. 
  2. ನಂತ್ರ ನೀರನ್ನು ಸಂಪೂರ್ಣ ಬಗ್ಗಿಸಿ.
  3. ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದು ಕಪ್ ಉಪ್ಪನ್ನು ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಬಿಸಿ ಮಾಡಿ. 
  4. ಅದಕ್ಕೆ ನೆನೆಸಿ (ಒಂದು ನಿಮಿಷ), ನೀರುಬಗ್ಗಿಸಿದ ಕಾಳುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಕಾಳಿನಲ್ಲಿರುವ ನೀರಿನಂಶ ಉಪ್ಪು ಅಂಟಲು ಸಹಾಯವಾಗುತ್ತದೆ. 
  5. ಮೊದಲಿಗೆ ಕಾಳುಗಳು ಒದ್ದೆಯಾಗಿರುತ್ತದೆ. 
  6. ಸ್ವಲ್ಪ ಸಮಯದ ನಂತ್ರ ಒಣಗುತ್ತದೆ. ಹುರಿಯುವುದನ್ನ ಮುಂದುವರೆಸಿ. 
  7. ಕಂದು ಬಣ್ಣ ಬಂದಾಗ ಕಾಳುಗಳನ್ನು ತೆಗೆಯಬೇಕು. ಒಂದು ಕಡ್ಲೆಕಾಯಿಯನ್ನು ತಿಂದು ನೋಡಿ. 
  8. ನಂತ್ರ ನೆಟ್ ಅಥವಾ ಬಲೆಯಂತಿರುವ ಸೌಟಿನಿಂದ ತೆಗೆಯಿರಿ. ಇದರಿಂದ ಕಡ್ಲೆಕಾಯಿ ಮಾತ್ರ ತೆಗೆಯಲು ಅನುಕೂಲವಾಗುತ್ತದೆ.
  9. ಬಿಸಿ ಕಡಿಮೆ ಆದ ಮೇಲೆ ಮೇಲೆ ಸವಿದು ಆನಂದಿಸಿ.

Uppu kadle recipe in Kannada | ಉಪ್ಪು ಕಡ್ಲೆ ಅಥವಾ ಹುರಿಗಡಲೆ ಮಾಡುವ ವಿಧಾನ

Uppu kadle recipe in Kannada

Uppu kadle recipe in Kannada | ಉಪ್ಪು ಕಡ್ಲೆ ಅಥವಾ ಹುರಿಗಡಲೆ ಮಾಡುವ ವಿಧಾನ 

ಉಪ್ಪು ಕಡ್ಲೆ ಅಥವಾ ಹುರಿಗಡಲೆ  ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆ ಕಾಳು ಅಥವಾ ಕೆಂಪು ಕಡ್ಲೆ
  2. 1 ಕಪ್ ಉಪ್ಪು, ಹುರಿಯಲು

ಉಪ್ಪು ಕಡ್ಲೆ ಅಥವಾ ಹುರಿಗಡಲೆ ಮಾಡುವ ವಿಧಾನ:

  1. ಕಡಲೆ ಕಾಳನ್ನು ತೊಳೆದು, ನೀರನ್ನು ಸಂಪೂರ್ಣ ಬಗ್ಗಿಸಿ. ನೆನೆಸುವ ಅವಶ್ಯಕತೆ ಇಲ್ಲ. 
  2. ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದು ಕಪ್ ಉಪ್ಪನ್ನು ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಬಿಸಿ ಮಾಡಿ. 
  3. ಅದಕ್ಕೆ ಒಂದು ಮುಷ್ಠಿ ತೊಳೆದ ಕಾಳುಗಳನ್ನು ಹಾಕಿ ದೊಡ್ಡ ಉರಿಯಲ್ಲಿ ಹುರಿಯಬೇಕು. ಕಾಳಿನಲ್ಲಿರುವ ನೀರಿನಂಶ ಉಪ್ಪು ಅಂಟಲು ಸಹಾಯವಾಗುತ್ತದೆ. 
  4. ಒಂದೆರಡು ನಿಮಿಷ ಹುರಿಯುವಾಗ, ಕಾಳುಗಳು ಅರಳಿ ಚಟಪಟ ಎನ್ನುತ್ತದೆ. ಒಂದು ಹತ್ತು ಸೆಕೆಂಡ್ ಹುರಿಯುವುದನ್ನ ಮುಂದುವರೆಸಿ. 
  5. ನೆಟ್ ಅಥವಾ ಬಲೆಯಂತಿರುವ ಸೌಟಿನಿಂದ ತೆಗೆಯಿರಿ. ಇದರಿಂದ ಕಡ್ಲೆ ಮಾತ್ರ ತೆಗೆಯಲು ಅನುಕೂಲವಾಗುತ್ತದೆ.
  6. ಹೀಗೆ ಒಂದೊಂದೇ ಮುಷ್ಟಿ ಕಾಳುಗಳನ್ನು ಹಾಕುತ್ತ, ಎಲ್ಲ ಕಡ್ಲೆಯನ್ನು ಹುರಿದು ಮುಗಿಸಿ.  
  7. ಬಿಸಿ ಆರಿದ ಮೇಲೆ ಸವಿದು ಆನಂದಿಸಿ.

ಬುಧವಾರ, ಮಾರ್ಚ್ 13, 2019

Benne kadubu recipe in Kannada | ಬೆಣ್ಣೆ ಕಡುಬು ಮಾಡುವ ವಿಧಾನ

Benne kadubu recipe in Kannada

Benne kadubu recipe in Kannada | ಬೆಣ್ಣೆ ಕಡುಬು ಮಾಡುವ ವಿಧಾನ 

ಬೆಣ್ಣೆ ಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/2 ಕಪ್ ತೆಂಗಿನ ತುರಿ
  3. ಅಗತ್ಯವಿದ್ದಷ್ಟು ನೀರು 
  4. ಉಪ್ಪು ರುಚಿಗೆ ತಕ್ಕಷ್ಟು
  5. 1 ಟೇಬಲ್ ಚಮಚ ಬೆಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1.  2 ಟೇಬಲ್ ಚಮಚ ಎಣ್ಣೆ
  2. 2 ಟೇಬಲ್ ಚಮಚ ನೆಲಗಡಲೆ 
  3. 1/2 ಚಮಚ ಸಾಸಿವೆ
  4. 1 ಚಮಚ ಕಡ್ಲೆಬೇಳೆ
  5. 1 ಚಮಚ ಉದ್ದಿನಬೇಳೆ
  6. 1 - 2 ಹಸಿಮೆಣಸಿನಕಾಯಿ ಅಥವಾ ಒಣಮೆಣಸು ಅಥವಾ ಕರಿಮೆಣಸು
  7. ಸ್ವಲ್ಪ ಕರಿಬೇವು
  8. 1/4 ಕಪ್ ತೆಂಗಿನ ತುರಿ
  9. ಸ್ವಲ್ಪ ಕೊತ್ತಂಬರಿ ಸೊಪ್ಪು
  10. ಉಪ್ಪು ರುಚಿಗೆ ತಕ್ಕಷ್ಟು

ಬೆಣ್ಣೆ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
  2. ಅಕ್ಕಿ ನೆನೆದ ನಂತ್ರ ನೀರು ಬಗ್ಗಿಸಿ. ನೆನೆಸಿದ ಅಕ್ಕಿಯನ್ನು ತೆಂಗಿನತುರಿ ಮತ್ತು ಉಪ್ಪಿನೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.   
  3. ಅರೆದ ಹಿಟ್ಟನ್ನು ಒಂದು ದಪ್ಪ ತಳದ ಬಾಣಲೆಯಲ್ಲಿ ತೆಗೆದುಕೊಳ್ಳಿ. 
  4.  ಅಗತ್ಯವಿದ್ದಷ್ಟು ನೀರು ಸೇರಿಸಿ, ನೀರು ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. 
  5. ಬೆಣ್ಣೆಯನ್ನು ಸೇರಿಸಿ. 
  6. ಸ್ಟವ್ ಹಚ್ಚಿ ಮಧ್ಯಮ ಉರಿಯಲ್ಲಿ ಮಗುಚಿ. 
  7. ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ. ಗಟ್ಟಿಯಾದರೂ ಹಿಟ್ಟು ಮೆತ್ತಗಿರಬೇಕು. ತುಂಬ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ. 
  8. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ.
  9. ಇಡ್ಲಿ ಪ್ಲೇಟ್ ನಲ್ಲಿಟ್ಟು, ಸೆಕೆಯಲ್ಲಿ (ಆವಿಯಲ್ಲಿ) 10 - 15 ನಿಮಿಷ ಬೇಯಿಸಿ.. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
  10. ಅಥವಾ ಒಗ್ಗರಣೆ ಮಾಡಿ ತಿನ್ನಬಹುದು. ಒಂದು ಬಾಣಲೆಯಲ್ಲಿ ಎಣ್ಣೆ, ನೆಲಗಡಲೆ, ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ. 
  11. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. 
  12. ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  13. ಆಮೇಲೆ ಬೇಯಿಸದ ಉಂಡೆಗಳು ಮತ್ತು ಕಾಯಿ ತುರಿ ಹಾಕಿ, ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು ಸೇರಿಸಿ. 
  14. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ, ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.

ಮಂಗಳವಾರ, ಮಾರ್ಚ್ 12, 2019

Hesaru kaalu juice recipe in Kannada | ಹೆಸರುಕಾಳು ಜ್ಯೂಸು ಮಾಡುವ ವಿಧಾನ

Hesaru kaalu juice recipe in Kannada

Hesaru kaalu juice recipe in Kannada | ಹೆಸರುಕಾಳು ಜ್ಯೂಸು ಮಾಡುವ ವಿಧಾನ 

ಹೆಸರುಕಾಳು ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರುಕಾಳು
  2. 1/4 ಕಪ್ ತೆಂಗಿನತುರಿ
  3. 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  4. ಸುಮಾರು 3 ಕಪ್ ನೀರು
  5. 2 ಏಲಕ್ಕಿ

ಹೆಸರುಕಾಳು ಜ್ಯೂಸು ಮಾಡುವ ವಿಧಾನ:

  1. ಹೆಸರುಕಾಳನ್ನು ಮಧ್ಯಮ ಉರಿಯಲ್ಲಿ ಹಸಿವಾಸನೆ ಹೋಗುವವವರೆಗೆ ಹುರಿಯಿರಿ.
  2. ಬಿಸಿ ಆರಿದ ಮೇಲೆ, ನುಣ್ಣನೆ ಪುಡಿ ಮಾಡಿ. 
  3. ಅದಕ್ಕೆ ತೆಂಗಿನತುರಿ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಪುನಃ ನುಣ್ಣಗೆ ಅರೆಯಿರಿ. 
  4. ಒಂದು ಪಾತ್ರೆಗೆ ಹಾಕಿ, ಉಳಿದ ನೀರು ಮತ್ತು ಪುಡಿ ಮಾಡಿದ ಬೆಲ್ಲ ಸೇರಿಸಿ. 
  5. ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ. ಬೇಕಾದಲ್ಲಿ ಸೋಸಿ. ನಾನು ಸೋಸುವುದಿಲ್ಲ. 
  6. ಬೇಕಾದಲ್ಲಿ ಫ್ರಿಡ್ಜ್ನಲ್ಲಿಟ್ಟು ತಂಪು ಮಾಡಿ. ಕುಡಿಯಲು ನೀಡಿ. 
  7. ಫ್ರಿಡ್ಜ್ ನಲ್ಲಿ ಒಂದು ವಾರದವರೆಗೆ ಇಟ್ಟು ಬೇಕಾದಾಗ ಕುಡಿಯಬಹುದು. 

ಶನಿವಾರ, ಮಾರ್ಚ್ 9, 2019

Halasina hannina panaka or changuli recipe in Kannada | ಹಲಸಿನ ಹಣ್ಣಿನ ಪಾನಕ ಅಥವಾ ಚಂಗುಳಿ ಮಾಡುವ ವಿಧಾನ

Halasina hannina panaka or changuli recipe in Kannada

Halasina hannina panaka or changuli recipe in Kannada | ಹಲಸಿನ ಹಣ್ಣಿನ ಪಾನಕ ಅಥವಾ ಚಂಗುಳಿ ಮಾಡುವ ವಿಧಾನ

ಚಂಗುಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 - 3/4 ಕಪ್ ಹಲಸಿನ ಹಣ್ಣು 
  2. ನಿಂಬೆ ಹಣ್ಣಿನ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  3. 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  4. 1/4 - 1/2 ಟೀಸ್ಪೂನ್ ಕಾಳುಮೆಣಸಿನ ಪುಡಿ
  5. 1 ಏಲಕ್ಕಿ (ಬೇಕಾದಲ್ಲಿ)

ಹಲಸಿನ ಹಣ್ಣಿನ ಪಾನಕ ಅಥವಾ ಚಂಗುಳಿ ಮಾಡುವ ವಿಧಾನ:

  1. ಹಲಸಿನ ಹಣ್ಣನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ಹೆಚ್ಚಿದ ಹಲಸಿನ ಹಣ್ಣು, ಒಂದು ಕಪ್ ನೀರು, ಉಪ್ಪು ಮತ್ತು ಬೆಲ್ಲ ತೆಗೆದುಕೊಳ್ಳಿ. 
  3. ಹಲಸಿನ ಹಣ್ಣು ಮೆತ್ತಗೆ ಬೇಯುವವರೆಗೆ ಅಥವಾ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  4. ಕೊನೆಯಲ್ಲಿ ಜಜ್ಜಿದ ಕಾಳುಮೆಣಸು ಮತ್ತು ಏಲಕ್ಕಿ ಸೇರಿಸಿ ಕುದಿಸಿ.  ಉಪ್ಪು, ಸಿಹಿ ಮತ್ತು ಖಾರ ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  5. ಒಂದು ನಿಮಿಷದ ನಂತರ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ. 

ಶುಕ್ರವಾರ, ಮಾರ್ಚ್ 1, 2019

Hesarukalu chapathi recipe in Kannada | ಹೆಸರುಕಾಳು ಚಪಾತಿ ಮಾಡುವ ವಿಧಾನ

Hesarukalu chapathi recipe in Kannada

Hesarukalu chapathi recipe in Kannada | ಹೆಸರುಕಾಳು ಚಪಾತಿ ಮಾಡುವ ವಿಧಾನ 

ಹೆಸರುಕಾಳು ಚಪಾತಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಸುಮಾರು 1 ಕಪ್ ಗೋಧಿ ಹಿಟ್ಟು
  2. 1 ಕಪ್ ನೆನೆಸಿದ ಹೆಸರುಕಾಳು
  3. 1ಸೆಮೀ ಉದ್ದದ ಶುಂಠಿ
  4. 4 ಬೇಳೆ ಬೆಳ್ಳುಳ್ಳಿ
  5.  1 - 2 ಹಸಿರು ಮೆಣಸಿನಕಾಯಿ 
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1/4 ಟೀಸ್ಪೂನ್ ಜೀರಿಗೆ ಪುಡಿ
  8. ದೊಡ್ಡ ಚಿಟಿಕೆ ಅರಿಶಿನ
  9. 1/2 ಟೀಸ್ಪೂನ್ ಗರಂ ಮಸಾಲಾ
  10. ಎಣ್ಣೆ ಚಪಾತಿ ಮಾಡಲು
  11. ಉಪ್ಪು ರುಚಿಗೆ ತಕ್ಕಷ್ಟು

ಹೆಸರುಕಾಳು ಚಪಾತಿ ಮಾಡುವ ವಿಧಾನ:

  1. ನೆನೆಸಿದ ಹೆಸರುಕಾಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
  3. ಎರಡರಿಂದ ಮೂರು ಟೇಬಲ್ ಚಮಚ ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  4. ನಂತರ ಬಟ್ಟಲಿನಲ್ಲಿ ತೆಗೆದುಕೊಳ್ಳಿ.
  5. ಜೀರಿಗೆ ಪುಡಿ, ಉಪ್ಪು, ಅರಿಶಿನ ಮತ್ತು ಗರಂ ಮಸಾಲಾ ಪುಡಿಹಾಕಿ. 
  6. ಅದಕ್ಕೆ ಗೋಧಿ ಹಿಟ್ಟು ಹಾಕಿ ಕಲಸಿ. 
  7. ಕೊನೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ.
  8. ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
  9. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. 
  10. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

Related Posts Plugin for WordPress, Blogger...