ಗುರುವಾರ, ಫೆಬ್ರವರಿ 21, 2019

Onion coriander leaves chutney recipe in Kannada | ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಚಟ್ನಿ ಮಾಡುವ ವಿಧಾನ

Onion coriander leaves chutney recipe in Kannada

Onion coriander leaves chutney recipe in Kannada | ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಚಟ್ನಿ ಮಾಡುವ ವಿಧಾನ


ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಈರುಳ್ಳಿ
  2. 1 ಟೀಸ್ಪೂನ್ ಕಡ್ಲೆಬೇಳೆ 
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 - 4 ಹಸಿರು ಮೆಣಸಿನಕಾಯಿ 
  5. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  6. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು
  8. 2 ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 4 - 5 ಕರಿಬೇವಿನ ಎಲೆ
  5. 2 ಟೇಬಲ್ ಚಮಚ ಅಡುಗೆ ಎಣ್ಣೆ

ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಚಟ್ನಿ ಮಾಡುವ ವಿಧಾನ:

  1. ಈರುಳ್ಳಿ ಮತ್ತು ಹಸಿರುಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. 
  3. ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಹುರಿಯಿರಿ. 
  4. ನಂತ್ರ ಕತ್ತರಿಸಿದ ಈರುಳ್ಳಿ ಮತ್ತು ಹಸಿರುಮೆಣಸಿನಕಾಯಿ ಹಾಕಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ಆಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ.
  6. ಕೊನೆಯಲ್ಲಿ ತೆಂಗಿನತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ. 
  7. ಉಪ್ಪು ಮತ್ತು ಹುಣಿಸೇಹಣ್ಣು ಸೇರಿಸಿ. 
  8. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. 
  9. ಕೊನೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಾಡಿ. 
  10. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 

ಮಂಗಳವಾರ, ಫೆಬ್ರವರಿ 19, 2019

Molake kalu gravy recipe in Kannada | ಮೊಳಕೆಕಾಳು ಗಸಿ ಮಾಡುವ ವಿಧಾನ

Molake kalu gravy recipe in Kannada

Molake kalu gravy recipe in Kannada | ಮೊಳಕೆಕಾಳು ಗಸಿ ಮಾಡುವ ವಿಧಾನ 

ಮೊಳಕೆಕಾಳು ಗಸಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 2 ಕಪ್ ಮೊಳಕೆ ಕಟ್ಟಿದ ಕಾಳುಗಳು
  2. 1 ಸಣ್ಣ ಆಲೂಗಡ್ಡೆ
  3. 1/2 ಕತ್ತರಿಸಿದ ಈರುಳ್ಳಿ
  4. 1/2 ಕತ್ತರಿಸಿದ ಟೊಮೆಟೊ
  5. ದೊಡ್ಡ ಚಿಟಿಕೆ ಅರಿಶಿನ
  6. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ನಿಮ್ಮ ರುಚಿ ಪ್ರಕಾರ ಉಪ್ಪು

ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1/2 ಕಪ್ ತೆಂಗಿನ ತುರಿ
  2. 1/2 ಕತ್ತರಿಸಿದ ಈರುಳ್ಳಿ
  3. 1/2 ಕತ್ತರಿಸಿದ ಟೊಮೆಟೊ
  4. 2 - 4 ಒಣಮೆಣಸಿನಕಾಯಿ
  5. 2 ಟೀಸ್ಪೂನ್ ಕೊತ್ತಂಬರಿ ಬೀಜ
  6. 1 ಟೀಸ್ಪೂನ್ ಜೀರಿಗೆ 
  7. 4 ಬೇಳೆ ಬೆಳ್ಳುಳ್ಳಿ
  8. ಸ್ವಲ್ಪ ಶುಂಠಿ
  9. ಸ್ವಲ್ಪ ಚಕ್ಕೆ 
  10. ಸ್ವಲ್ಪ ಲವಂಗ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಮೊಳಕೆಕಾಳು ಗಸಿ ಮಾಡುವ ವಿಧಾನ:

  1. ಒಂದು ಕಪ್ ಬೆರಕೆ ಕಾಳನ್ನು ನೆನೆಸಿ, ಮೊಳಕೆ ಕಟ್ಟಿಸಿಕೊಳ್ಳಿ. ಆಗ ಎರಡು ಕಪ್ ಆಗುವುದು. 
  2. ಮೊಳಕೆ, ಕತ್ತರಿಸಿದ ಆಲೂಗಡ್ಡೆ, 1/2 ಈರುಳ್ಳಿ ಮತ್ತು 1/2 ಟೊಮೇಟೊ ಕುಕ್ಕರ್ ನಲ್ಲಿ ತೆಗೆದುಕೊಳ್ಳಿ. 
  3. ಅದಕ್ಕೆ ಉಪ್ಪು ಅರಿಶಿನ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.  
  4. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ. 
  5. ಬೇಯಿಸಿದ ಕಾಳು ಮತ್ತು ತರಕಾರಿಗೆ, ಅರೆದ ಮಸಾಲೆ ಸೇರಿಸಿ. 
  6. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಕುದಿಸಿ. 
  7. ಒಂದೈದು ನಿಮಷ ಸಣ್ಣ ಉರಿಯಲ್ಲಿ, ಅಥವಾ ಹಸಿವಾಸನೆ ಹೋಗುವವರೆಗೆ ಕುದಿಸಿ. 
  8.  ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. ಸ್ಟವ್ ಆಫ್ ಮಾಡಿ.
  9. ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  10. ಅನ್ನ, ಚಪಾತಿ, ರೊಟ್ಟಿ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಶನಿವಾರ, ಫೆಬ್ರವರಿ 16, 2019

How to store leaves in kannada | ಸೊಪ್ಪನ್ನು ತುಂಬ ದಿನ ಇಡುವುದು ಹೇಗೆ?

How to store leaves in kannada

How to store leaves in kannada | ಸೊಪ್ಪನ್ನು ತುಂಬ ದಿನ ಇಡುವುದು ಹೇಗೆ?

ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು:

  1. ಕರಿಬೇವನ್ನು ಆಯ್ದು, ಎಲೆಗಳನ್ನು ತೆಗೆದುಕೊಳ್ಳಿ.
  2. ನಂತ್ರ ಚೆನ್ನಾಗಿ ತೊಳೆದು ಒಂದು ಬಟ್ಟೆಯ ಮೇಲೆ ಹರಡಿ ನೀರಾರಲು ಬಿಡಿ. 
  3. ನೀರಾರಿದ ಮೇಲೆ, ಒಂದು ಬಾಕ್ಸ್ ನ ತಳಕ್ಕೆ ಟಿಶ್ಯೂ ಪೇಪರ್ ಹಾಕಿ, ಕರಿಬೇವನ್ನು ತುಂಬಿಸಿ ಫ್ರಿಡ್ಜ್ ನಲ್ಲಿಡಿ. ಒಂದು ತಿಂಗಳು ಹಾಳಾಗುವುದಿಲ್ಲ. 
  4. ಕೊತ್ತಂಬರಿ ಸೊಪ್ಪನ್ನು ಆರಿಸಿ. ಕೊಳೆತ, ಹಣ್ಣಾದ ಮತ್ತು ಹಾಳಾದ ಸೊಪ್ಪು ಬೇರ್ಪಡಿಸಿ. ಹಣ್ಣಾದ ಸೊಪ್ಪನ್ನು ಒಂದೆರಡು ದಿನಗಳಲ್ಲಿ ಉಪಯೋಗಿಸಿ ಬಿಡಿ. 
  5. ಬೇರಿನ ಭಾಗವನ್ನೂ ತೆಗೆಯಿರಿ. 
  6. ಒಳ್ಳೆ ಸೊಪ್ಪನ್ನು ಪೇಪರ್ ನಲ್ಲಿ ಸುತ್ತಿ. ನೀರಿನ ಪಸೆ ಇರಬಾರದು. 
  7. ಆಮೇಲೆ ಪೇಪರ್ ಸಹಿತ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಮೂರು ವಾರ ಹಾಳಾಗುವುದಿಲ್ಲ. 

ಶುಕ್ರವಾರ, ಫೆಬ್ರವರಿ 15, 2019

Quinoa upma recipe in Kannada | ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ

Quinoa upma recipe in Kannada

Quinoa upma recipe in Kannada | ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ 

ಕಿನ್ವಾ ಉಪ್ಪಿಟ್ಟು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಕಿನ್ವಾ
  2. 2 ಕಪ್ ನೀರು + 1/4 ಕಪ್ ತರಕಾರಿ ಬೇಯಿಸಲು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ
  7. 1 ಟೊಮ್ಯಾಟೋ 
  8. 1 ಸಣ್ಣ ಕ್ಯಾರಟ್
  9. 5 - 6 ಬೀನ್ಸ್
  10. 1/4 ಕಪ್ ಹಸಿ ಬಟಾಣಿ
  11. 1-2 ಹಸಿರು ಮೆಣಸಿನಕಾಯಿ
  12. 7 - 8 ಕರಿ ಬೇವಿನ ಎಲೆ
  13. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  14. 1/4 ಟೀಸ್ಪೂನ್ ಅರಶಿನ ಪುಡಿ
  15. 2 ಟೇಬಲ್ ಚಮಚ ಅಡುಗೆ ಎಣ್ಣೆ
  16. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
  17. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  18. 1/4 ಕಪ್ ತೆಂಗಿನತುರಿ

ಕಿನ್ವಾ ಉಪ್ಪಿಟ್ಟು ಮಾಡುವ ವಿಧಾನ:

  1. ತರಕಾರಿಗಳನ್ನು ತೊಳೆದು, ಕತ್ತರಿಸಿಟ್ಟುಕೊಳ್ಳಿ. ಹಾಗೇ ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್, ಕ್ಯಾರಟ್  ಮತ್ತು ಹಸಿ ಬಟಾಣಿಯನ್ನು 1/4 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ.  
  3. ಕಿನ್ವಾ ವನ್ನು ಐದು ನಿಮಿಷ ನೀರಿನಲ್ಲಿ ನೆನೆಸಿ, ಚೆನ್ನಾಗಿ ತೊಳೆದು, ನೀರು ಬಸಿದಿಟ್ಟುಕೊಳ್ಳಿ.
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. 
  6. ನಂತರ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  7. ಇಂಗು ಮತ್ತು ಅರಶಿನ ಪುಡಿ ಸೇರಿಸಿ. 
  8. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. ಮತ್ತು  ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  9. ಸುಮಾರು 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ, ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ತೊಳೆದಿಟ್ಟ ಕಿನ್ವಾ ಹಾಕಿ ಮಗುಚಿ. 
  10. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  11. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ, ಬಡಿಸಿ.


ಮಂಗಳವಾರ, ಫೆಬ್ರವರಿ 12, 2019

Tomato bellulli gojju recipe in Kannada | ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ

Tomato bellulli gojju recipe in Kannada

Tomato bellulli gojju recipe in Kannada | 5 ನಿಮಿಷದಲ್ಲಿ ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ

ಟೊಮೇಟೊ ಬೆಳ್ಳುಳ್ಳಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ದೊಡ್ಡ ಟೊಮ್ಯಾಟೋ
  2. 1/2 ಟೀಸ್ಪೂನ್ ಜೀರಿಗೆ
  3. 1/2 ಟೀಸ್ಪೂನ್ ಸಾಸಿವೆ
  4. 4-5 ಕರಿಬೇವಿನ ಎಲೆ
  5. 6 - 7 ಬೇಳೆ ಜಜ್ಜಿದ ಬೆಳ್ಳುಳ್ಳಿ
  6. 1 - 2 ಹಸಿರು ಮೆಣಸಿನಕಾಯಿ
  7. ದೊಡ್ಡ ಚಿಟಿಕೆ ಅರಿಶಿನ
  8. 1 ಗೋಲಿ ಗಾತ್ರದ ಹುಣಿಸೆಹಣ್ಣು
  9. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  10. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  11. 1/4 - 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  12. 1 ಟೇಬಲ್ ಚಮಚ ಅಡುಗೆ ಎಣ್ಣೆ
  13. ಉಪ್ಪು ರುಚಿಗೆ ತಕ್ಕಷ್ಟು.

ಟೊಮೇಟೊ ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ:

  1. ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಬೇರೆ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ ಮತ್ತು  ಜೀರಿಗೆ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ, ಜಜ್ಜಿದ ಬೆಳ್ಳಿಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. 
  4. ನಂತರ ಕತ್ತರಿಸಿದ ಟೊಮೆಟೊ ಸೇರಿಸಿ. 
  5. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಒಂದು ನಿಮಿಷ ಮಗುಚಿ.
  6. ಆಮೇಲೆ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಕುದಿಸಿ. 
  7. ಮುಚ್ಚಳ ಮುಚ್ಚಿ ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  8. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ. 
  9. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  10. ಬಿಸಿ ಅನ್ನದೊಂದಿಗೆ ಬಡಿಸಿ. 

ಶುಕ್ರವಾರ, ಫೆಬ್ರವರಿ 8, 2019

Vanilla mug cake recipe in Kannada | ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ

Vanilla mug cake recipe in Kannada

Vanilla mug cake recipe in Kannada | ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ 

ವೆನಿಲ್ಲಾ ಮಗ್ ಕೇಕ್ ವಿಡಿಯೋ

ಬೇಕಾಗುವ ಪದಾರ್ಥಗಳು: (1 ಟೇಬಲ್ ಚಮಚ = 15ಎಂಎಲ್ )

  1. 4  ಟೇಬಲ್ ಚಮಚ ಮೈದಾ ಹಿಟ್ಟು
  2. 3 ಟೇಬಲ್ ಚಮಚ ಸಕ್ಕರೆ 
  3. 1/4 ಟೀಸ್ಪೂನ್ ಬೇಕಿಂಗ್ ಪೌಡರ್
  4. 3 ಟೇಬಲ್ ಚಮಚ ಹಾಲು
  5. 2 ಟೇಬಲ್ ಕರಗಿಸಿದ ಚಮಚ ಬೆಣ್ಣೆ
  6. 1/4 ಟೀಸ್ಪೂನ್ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)

ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಬೇಕಿಂಗ್ ಪೌಡರ್ ತೆಗೆದುಕೊಳ್ಳಿ.
  2. ಅದಕ್ಕೆ ಹಾಲು, ಕರಗಿಸಿದ ಬೆಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಕಲಸಿ. 
  3. ವಿಸ್ಕ್ ಅಥವಾ ಫೋರ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರ ಮಾಡಿ.
  4. ಅದನ್ನು ಬೆಣ್ಣೆ ಸವರಿದ ಮಗ್ ಗೆ ಹಾಕಿ ಮೈಕ್ರೋವೇವ್ ಓವೆನ್ ನಲ್ಲಿ ಒಂದು ನಿಮಿಷ ಹೈ ಪವರ್ (700w) ನಲ್ಲಿ ಬೇಯಿಸಿ. ಓವೆನ್ ನಿಂದ ಓವೆನ್ ಗೆ ಸಮಯ ಬದಲಾಗಬಹುದು. 
  5. ಒಂದು ಕಡ್ಡಿ ಅಥವಾ ಫೋರ್ಕ್ ನ್ನು ಚುಚ್ಚಿ ಕೇಕ್ ಸಂಪೂರ್ಣ ಬೆಂದಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಚುಚ್ಚಿದ ಕಡ್ಡಿಗೆ ಹಸಿ ಹಿಟ್ಟು ಅಂಟಿರಬಾರದು. 
  6. ಬೇಯಿಸಿದ ಕೇಕ್ ಸ್ವಲ್ಪ ಬಿಸಿ ಆರುವವರೆಗೆ ಕಾಯಿರಿ. ನಂತರ ನಿಮ್ಮಿಷ್ಟದಂತೆ ಅಲಂಕಾರ ಮಾಡಿ ಕೂಡಲೇ ತಿನ್ನಲು ಕೊಡಿ. 
  7. ಈ ಕೇಕ್ ನ್ನು ಸ್ವಲ್ಪ ಹೊತ್ತು ಬಿಟ್ಟು ತಿನ್ನುತ್ತೀರಾದರೆ, ಕೇಕ್ ನ್ನು ಮಗ್ ನಿಂದ ತೆಗೆದು, ಕೇಕ್ ನ ಸುತ್ತಲೂ ಸಕ್ಕರೆ ನೀರನ್ನು ಹಚ್ಚಿ.(ಸಕ್ಕರೆ ನೀರು ಮಾಡಲು, 1 ಚಮಚ ಸಕ್ಕರೆ ಯನ್ನು 2 ಚಮಚ ನೀರಿನಲ್ಲಿ ಕರಗಿಸಿ). ಇಲ್ಲವಾದಲ್ಲಿ ಕೇಕ್ ಸ್ವಲ್ಪ ಗಟ್ಟಿ ಎನಿಸಬಹುದು. 

ಬುಧವಾರ, ಫೆಬ್ರವರಿ 6, 2019

Jeera rice recipe in Kannada | ಜೀರಾ ರೈಸ್ ಮಾಡುವ ವಿಧಾನ

Jeera rice recipe in Kannada

Jeera rice recipe in Kannada | ಜೀರಾ ರೈಸ್ ಮಾಡುವ ವಿಧಾನ 

ಜೀರಾ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 2 ಟೇಬಲ್ ಚಮಚ ತುಪ್ಪ
  3. 2 ಚಮಚ ಜೀರಿಗೆ
  4. 1 ಸಣ್ಣ ಪುಲಾವ್ ಎಲೆ
  5. 1 ಏಲಕ್ಕಿ
  6. 1/2 ಬೆರಳುದ್ದ ಚಕ್ಕೆ 
  7. 5 - 6 ಲವಂಗ
  8. 1-2 ಹಸಿರುಮೆಣಸಿನಕಾಯಿ
  9. 1/2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  10. 4 ಕಪ್ ನೀರು
  11.  ಉಪ್ಪು ರುಚಿಗೆ ತಕ್ಕಷ್ಟು

ಅಲಂಕಾರಕ್ಕೆ ಬೇಕಾಗುವ ಪದಾರ್ಥಗಳು:

  1. 5 ಗೋಡಂಬಿ
  2. 1/4 ಈರುಳ್ಳಿ ಉದ್ದವಾಗಿ ಸೀಳಿದ್ದು

ಜೀರಾ ರೈಸ್ ಮಾಡುವ ವಿಧಾನ:

  1. ಅಕ್ಕಿ ತೊಳೆದು, ನೀರು ಬಗ್ಗಿಸಿ, 20 ನಿಮಿಷ ನೆನೆಸಿಡಿ. 
  2. ಕುಕ್ಕರ್ ನಲ್ಲಿ  ತುಪ್ಪ ತೆಗೆದುಕೊಂಡು ಬಿಸಿ ಮಾಡಿ.  ಅದಕ್ಕೆ  ಜೀರಿಗೆ ಹಾಕಿ. 
  3. ಕೂಡಲೇ ಪುಲಾವ್ ಎಲೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. 
  4. ಜೊತೆಯಲ್ಲಿ ಸಣ್ಣದಾಗಿ ಕತ್ತರಿಸಿದ ಶುಂಠಿ (ಬೇಕಾದಲ್ಲಿ) ಮತ್ತು ಸೀಳಿದ ಹಸಿಮೆಣಸನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ನಂತರ ತೊಳೆದಿಟ್ಟ ಅಕ್ಕಿ ಹಾಕಿ 10 - 15 ಸೆಕೆಂಡ್ ಕಾಲ ಹುರಿಯಿರಿ. 
  6. ನೀರು ಹಾಕಿ ಮಗುಚಿ.
  7. ಉಪ್ಪು ಸೇರಿಸಿ ಪುನಃ ಮಗುಚಿ. 
  8. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಮಾಡಿ. 
  9. ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ಅಥವಾ ಸಟ್ಟುಗ ತೆಗೆದುಕೊಂಡು ಮುದ್ದೆಯಾಗದಂತೆ ಬಿಡಿಸಿ ಅಥವಾ ಹರಡಿ. ಟೊಮೆಟೊ ಸಾಸ್, ಕೂರ್ಮ, ರಾಯಿತ ಅಥವಾ ಉಪ್ಪಿನಕಾಯಿ ಜೊತೆ ಬಡಿಸಿ.
  10. ಅಲಂಕಾರಕ್ಕೆ ಗೋಡಂಬಿ ಮತ್ತು ಈರುಳ್ಳಿ ಹುರಿದು, ಬಡಿಸುವ ಮೊದಲು ಹಾಕಿ ಕೊಡಬಹುದು. 

ಸೋಮವಾರ, ಫೆಬ್ರವರಿ 4, 2019

Rava bread toast recipe in Kannada | ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ

Rava bread toast recipe in Kannada

Rava bread toast recipe in Kannada | ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ 

ರವೇ ಟೋಸ್ಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 6- 8 ಬ್ರೆಡ್ ಸ್ಲೈಸ್
  2. 1/4 ಕಪ್ ಮೊಸರು 
  3. 1/4 ಕಪ್ ನೀರು
  4. 2 ಟೇಬಲ್ ಚಮಚ ಈರುಳ್ಳಿ
  5. 2 ಟೇಬಲ್ ಚಮಚ ದೊಣ್ಣೆಮೆಣಸು
  6. 2 ಟೇಬಲ್ ಚಮಚ ಟೊಮೇಟೊ
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  8. 1 ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ನಿಮ್ಮ ಖಾರಕ್ಕೆ ತಕ್ಕಂತೆ)
  9. ಸ್ವಲ್ಪ ಶುಂಠಿ ಅಥವಾ ಇಂಗು (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು.

ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರವೇ ತೆಗೆದುಕೊಂಡು, ಮೊಸರು ಮತ್ತು ನೀರು ಹಾಕಿ. 
  2. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸು, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸು ಸೇರಿಸಿ. ಬೇಕಾದಲ್ಲಿ ಶುಂಠಿ ಮತ್ತು ಇಂಗು ಸೇರಿಸಿ.
  3. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  4. ಚೆನ್ನಾಗಿ ಕಲಸಿ, ಬ್ರೆಡ್ ಮೇಲೆ ತೆಳುವಾಗಿ ಹರಡಿ. 
  5.  ತವಾ ಬಿಸಿ ಮಾಡಿ. ಸ್ವಲ್ಪ ಬೆಣ್ಣೆ ಬಿಸಿ ಮಾಡಿ, ಮೊದಲಿಗೆ ರವ ಮಿಶ್ರಣ ಹಚ್ಚಿದ ಬದಿ ಕಾಯಿಸಿ. 
  6. ಇನ್ನೊಂದು ಬದಿಗೆ ಬೆಣ್ಣೆ ಹಚ್ಚಿ, ಎರಡು ಬದಿ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ. ಸವಿದು ಆನಂದಿಸಿ. 


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಫೆಬ್ರವರಿ 1, 2019

Carrot uppinakayi recipe in Kannada | ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

Carrot uppinakayi recipe in Kannada

Carrot uppinakayi recipe in Kannada | ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಚ್ಚಿದ ಕ್ಯಾರಟ್
  2. 1 ದೊಡ್ಡ ನಿಂಬೆಹಣ್ಣು
  3. 5 - 6 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತೆ
  7. 12 ಟೇಬಲ್ ಚಮಚ ಉಪ್ಪು

ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಪಾತ್ರೆ ಯಲ್ಲಿ ಸಣ್ಣಗೆ ಕತ್ತರಿಸಿದ ಕ್ಯಾರಟ್ ತೆಗೆದುಕೊಳ್ಳಿ.  
  2. ಅದಕ್ಕೆ ಉಪ್ಪು ಮತ್ತು ನಿಂಬೆರಸ ಹಾಕಿ. ಚೆನ್ನಾಗಿ ಮಗುಚಿ ಐದು ನಿಮಿಷ ನೆನೆಯಲು ಬಿಡಿ. 
  3. ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  4. ಆ ಪುಡಿಯನ್ನು ಉಪ್ಪು ಮತ್ತು ನಿಂಬೆರಸ ಬೆರೆಸಿದ ಕ್ಯಾರಟ್ ಗೆ ಹಾಕಿ, ಚೆನ್ನಾಗಿ ಮಗುಚಿ. 
  5. ಕೊನೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. 
  6. ರುಚಿಕರ ಕ್ಯಾರಟ್ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಫ್ರಿಡ್ಜ್ ನಲ್ಲಿ ಒಂದು ವಾರ ಇಡಬಹುದು. 
Related Posts Plugin for WordPress, Blogger...