ಗುರುವಾರ, ಜನವರಿ 31, 2019

Bood kumbalaki sambar recipe in Kannada | ಬೂದು ಕುಂಬಳಕಾಯಿ ಸಾಂಬಾರ್ ಮಾಡುವ ವಿಧಾನ

Bood kumbalaki sambar recipe in Kannada

Bood kumbalaki sambar recipe in Kannada | ಬೂದು ಕುಂಬಳಕಾಯಿ ಸಾಂಬಾರ್ ಮಾಡುವ ವಿಧಾನ

ಬೂದು ಕುಂಬಳಕಾಯಿ ಸಾಂಬಾರ್  ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 kg ಬೂದು ಕುಂಬಳಕಾಯಿ
  2. 1/4 ಕಪ್ ತೊಗರಿಬೇಳೆ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ಬೆಲ್ಲ
  6. ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 3/4 - 1 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. ಒಂದು ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬೂದು ಕುಂಬಳಕಾಯಿ ಸಾಂಬಾರ್ ಮಾಡುವ ವಿಧಾನ:

  1. ಬೂದು ಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಬೇಳೆಯನ್ನು ಬೇಯಿಸಿ.
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಬೂದು ಕುಂಬಳಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ. 1 ಲೋಟ ನೀರು ಹಾಕಿ ಬೇಯಿಸಿ. 
  4. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಬೆಲ್ಲ, ಉಪ್ಪು ಮತ್ತು ಹುಣಿಸೆ ರಸ ಸೇರಿಸಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ. 
  7. ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  8. ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಜನವರಿ 23, 2019

Sorekai halwa recipe in Kannada | ಸೋರೆಕಾಯಿ ಹಲ್ವಾ ಮಾಡುವ ವಿಧಾನ

Sorekai halwa recipe in Kannada

Sorekai halwa recipe in Kannada | ಸೋರೆಕಾಯಿ ಹಲ್ವಾ ಮಾಡುವ ವಿಧಾನ 

ಸೋರೆಕಾಯಿ ಹಲ್ವಾ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಸೋರೆಕಾಯಿ ತುರಿ
  2. 1 ಕಪ್ ಹಾಲು
  3. 1/2 ಕಪ್ ಸಕ್ಕರೆ
  4. 2 ಟೇಬಲ್ ಸ್ಪೂನ್ ತುಪ್ಪ
  5. 1 ಟೇಬಲ್ ಸ್ಪೂನ್ ಗೋಡಂಬಿ ಕತ್ತರಿಸಿದ್ದು
  6. 1/4 ಟೀಸ್ಪೂನ್ ಏಲಕ್ಕಿ ಪುಡಿ

ಸೋರೆಕಾಯಿ ಹಲ್ವಾ ಮಾಡುವ ವಿಧಾನ:

  1. ಸೋರೆಕಾಯಿ ಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಬೀಜ ಗಟ್ಟಿ ಇದ್ದರೆ, ಬೀಜ ತೆಗೆಯಬೇಕು. 
  2. ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಹಾಕಿ. ಬಿಸಿ ಮಾಡಿ. 
  3. ಸೋರೆಕಾಯಿ ತುರಿ ಹಾಕಿ, ಸೋರೆಕಾಯಿ ಮೆತ್ತಗಾಗುವವರೆಗೆ ಅಥವಾ ಒಂದೈದು ನಿಮಿಷ ಹುರಿಯಿರಿ.
  4. ನಂತರ ಹಾಲು ಸೇರಿಸಿ.
  5. ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
  6. ಹಾಲು ಕಡಿಮೆ ಆದಾಗ ಸಕ್ಕರೆ ಸೇರಿಸಿ. 
  7. ಹಲ್ವಾ ನೀರಾರುತ್ತ ಬಂದಾಗ ಕತ್ತರಿಸಿದ ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿ ಮಗುಚಿ.
  8. ಕೊನೆಯಲ್ಲಿ  ಇನ್ನೊಂದು ಟೇಬಲ್ ಚಮಚ ತುಪ್ಪ ಹಾಕಿ. ಉರಿ ಕಡಿಮೆ ಇರಲಿ. 
  9. ಒಮ್ಮೆ ಮಗುಚಿ ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

ಸೋಮವಾರ, ಜನವರಿ 21, 2019

Sajje (siridhanya) dose recipe in Kannada | ಸಜ್ಜೆ ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ

Sajje (siridhanya) dose recipe in Kannada

Sajje (siridhanya) dose recipe in Kannada | ಸಜ್ಜೆ ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಸಜ್ಜೆ ಅಥವಾ ಯಾವುದೇ ಸಿರಿಧಾನ್ಯ
  2. 1 ಕಪ್ ಅಕ್ಕಿ
  3. 1/2 ಕಪ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. ಉಪ್ಪು ರುಚಿಗೆ ತಕ್ಕಷ್ಟು.

ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ):

  1. 2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  2. 1/4 ಕಪ್ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
  3. 1 - 2 ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು

ಸಜ್ಜೆ ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ:

  1. ಸಜ್ಜೆ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ. ಸಜ್ಜೆ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  3.  ಒಂದು ಪಾತ್ರೆಗೆ ಹಾಕಿ. 
  4. ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. 
  5. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  6. ದೋಸೆ ಹೆಂಚು ಬಿಸಿಮಾಡಿ ಕೊಳ್ಳಿ. ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ. 
  7. ಬೇಕಾದಲ್ಲಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  8. ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಜನವರಿ 17, 2019

Hurigadale chutney pudi recipe in Kannada | ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ

Hurigadale chutney pudi recipe in Kannada

Hurigadale chutney pudi recipe in Kannada | ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ 

ಹುರಿಗಡಲೆ ಚಟ್ನಿ ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹುರಿಗಡಲೆ
  2. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  3. 1/2 ಟೀಸ್ಪೂನ್ ಕೊತ್ತಂಬರಿ ಬೀಜ
  4. ಒಂದು ಎಸಳು ಕರಿಬೇವು
  5. 1/2 ಟೀಸ್ಪೂನ್  ಬೆಲ್ಲ
  6. ಸಣ್ಣ ಗೋಲಿ ಹಣ್ಣಿನ ಗಾತ್ರದ ಹುಣಿಸೇಹಣ್ಣು
  7. 1.5 - 2 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/4 ಟೀಸ್ಪೂನ್ ಇಂಗು ಅಥವಾ 3 - 4 ಎಸಳು ಬೆಳ್ಳುಳ್ಳಿ
  9. ಉಪ್ಪು ರುಚಿಗೆ ತಕ್ಕಷ್ಟು
  10. 1 ಟೀಸ್ಪೂನ್ ಅಡುಗೆ ಎಣ್ಣೆ

ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಕೊತ್ತಂಬರಿ ಬೀಜ ಮತ್ತು ಕರಿಬೇವು ಹಾಕಿ. ಕರಿಬೇವು ಗರಿಗರಿಯಾಗುವವರೆಗೆ ಹುರಿಯಿರಿ. 
  2. ಆಮೇಲೆ ಕೊಬ್ಬರಿತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  3. ನಂತ್ರ ಅದಕ್ಕೆ ಹುರಿಗಡಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
  4. ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  5. ನಿಮ್ಮ ಖಾರಕ್ಕೆ ತಕ್ಕಂತೆ ಅಚ್ಚ ಖಾರದ ಪುಡಿ ಸೇರಿಸಿ. 
  6. ಇಂಗು ಅಥವಾ ಬೆಳ್ಳುಳ್ಳಿ ಸೇರಿಸಿ. 
  7. ಒಂದು ಸುತ್ತು ಮಗುಚಿ, ಸ್ಟವ್ ಆಫ್ ಮಾಡಿ. 
  8. ಬಿಸಿ ಆರಿದ ಮೇಲೆ ನುಣ್ಣನೆ ಪುಡಿಮಾಡಿಕೊಳ್ಳಿ.
  9. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 


ಶುಕ್ರವಾರ, ಜನವರಿ 11, 2019

Avarekalu bath recipe in Kannada | ಅವರೇಕಾಳು ಬಾತ್ ಮಾಡುವ ವಿಧಾನ

Avarekalu bath recipe in Kannada

Avarekalu bath recipe in Kannada | ಅವರೇಕಾಳು ಬಾತ್ ಮಾಡುವ ವಿಧಾನ 

ಅವರೇಕಾಳು ಬಾತ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1 ಕಪ್ ಅವರೇಕಾಳು
  3. 1 ಬದನೇಕಾಯಿ
  4. 3 ಟೇಬಲ್ ಚಮಚ ಅಡುಗೆ ಎಣ್ಣೆ 
  5. 1/2 ಚಮಚ ಸಾಸಿವೆ 
  6. 1 ಟೀಸ್ಪೂನ್ ಉದ್ದಿನ ಬೇಳೆ 
  7. 1 ಟೀಸ್ಪೂನ್ ಕಡಲೆಬೇಳೆ 
  8. 4 - 5 ಕರಿಬೇವಿನ ಎಲೆ 
  9. 2 ಟೇಬಲ್ ಚಮಚ ನೆಲಗಡಲೆ
  10. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  11. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  12. 1/4 ಟೀಸ್ಪೂನ್ ಅರಶಿನ ಪುಡಿ
  13. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 3 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಬೆರಳುದ್ದ ಚಕ್ಕೆ
  6. 4 - 5 ಲವಂಗ
  7. 7 - 8 ಕಾಳುಮೆಣಸು
  8. 1/4 ಕಪ್ ತೆಂಗಿನ ತುರಿ

ಅವರೇಕಾಳು ಬಾತ್ ಮಾಡುವ ವಿಧಾನ:

  1. ಮೊದಲಿಗೆ ಅವರೇಕಾಳು ಬಿಡಿಸಿಟ್ಟುಕೊಳ್ಳಿ. ಹಾಗೆ ಬದನೆಕಾಯಿಯನ್ನು ತೆಳುವಾಗಿ ಕತ್ತರಿಸಿ, ನೀರಿನಲ್ಲಿ ಹಾಕಿಡಿ. 
  2. ಆಮೇಲೆ ಒಂದು ಕುಕ್ಕರ್ ನಲ್ಲಿ ಅಕ್ಕಿಯನ್ನು ತೊಳೆದು, ಅವರೇಕಾಳು ಸೇರಿಸಿ, ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಉಪ್ಪು ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು (ಎರಡೂವರೆಯಿಂದ ಮೂರು ಕಪ್) ಸೇರಿಸಿ ಎರಡು ವಿಷಲ್ ಮಾಡಿ ಬೇಯಿಸಿಟ್ಟು ಕೊಳ್ಳಿ. 
  4. ನಂತರ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಬೇಕು. 
  5. ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕೊತ್ತಂಬರಿ ಬೀಜ ಹುರಿಯಿರಿ. 
  6. ಚಕ್ಕೆ, ಲವಂಗ, ಕಾಳುಮೆಣಸು ಮತ್ತು ಗಸಗಸೆ ಸೇರಿಸಿ ಹುರಿಯಿರಿ. 
  7. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಹುರಿದು, ಸ್ಟವ್ ಆಫ್ ಮಾಡಿ.
  8. ಬಿಸಿ ಆರಿದ ಮೇಲೆ, ಪುಡಿ ಮಾಡಿಟ್ಟುಕೊಳ್ಳಿ.  
  9. ಆಮೇಲೆ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  10. ನೆಲಗಡಲೆ ಹಾಕಿ ಹುರಿಯಿರಿ. 
  11. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  12. ಕರಿಬೇವು, ಕತ್ತರಿಸಿದ ಬದನೇಕಾಯಿ ಮತ್ತು ಅರಿಶಿನ ಪುಡಿ ಸೇರಿಸಿ, ಕೈಯಾಡಿಸಿ. 
  13. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  14. ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  15. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  16. ಬೇಯಿಸಿಟ್ಟ ಅನ್ನ ಮತ್ತು ಅವರೇಕಾಳು ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜನವರಿ 9, 2019

Ellu unde recipe in Kannada | ಎಳ್ಳು ಉಂಡೆ ಮಾಡುವ ವಿಧಾನ

Ellu unde recipe in Kannada

Ellu unde recipe in Kannada | ಎಳ್ಳು ಉಂಡೆ ಮಾಡುವ ವಿಧಾನ 

ಎಳ್ಳು ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಎಳ್ಳು
  2. 1/4 ಕಪ್ ಕೊಬ್ಬರಿ
  3. 1/2 ಕಪ್ ಬೆಲ್ಲ (ನಾನು ಸ್ವಲ್ಪ ಕಡಿಮೆ ಬಳಸಿದ್ದೇನೆ)
  4. ಒಂದು ಏಲಕ್ಕಿ

ಎಳ್ಳು ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬುವವರೆಗೆ ಅಥವಾ ಚಟಪಟ ಸಿಡಿಯುವವರೆಗೆ ಹುರಿಯಿರಿ. 
  2. ನಂತರ ತುರಿದ ಕೊಬ್ಬರಿ ಮತ್ತು ಏಲಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಸ್ಟವ್ ಆಫ್ ಮಾಡಿ. 
  3. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ.
  4. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪುಡಿ ಮಾಡಿ.
  5. ಒಂದು ಬಟ್ಟಲಿಗೆ ಪುಡಿ ಮಾಡಿದ ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಹಾಕಿ ಕಲಸಿ. 
  6. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಒತ್ತಿ ಉಂಡೆ ಮಾಡಿ. ಸವಿದು ಆನಂದಿಸಿ.


ಮಂಗಳವಾರ, ಜನವರಿ 8, 2019

Avarekalu soppu sambar recipe in Kannada | ಅವರೇಕಾಳು ಸೊಪ್ಪು ಸಾಂಬಾರ್ ಮಾಡುವ ವಿಧಾನ

Avarekalu soppu sambar recipe in Kannada

Avarekalu soppu sambar recipe in Kannada | ಅವರೇಕಾಳು ಸೊಪ್ಪು ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಬಸಳೆ ಸೊಪ್ಪು ಅಥವಾ ಪಾಲಕ್ ಸೊಪ್ಪು
  2. 1 ಕಪ್ ಅವರೇಕಾಳು
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 3/4 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಸಾಸಿವೆ
  5. 2 - 4 ಬೇಳೆ ಬೆಳ್ಳುಳ್ಳಿ 
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/2 ಟೀಸ್ಪೂನ್ ಸಾಸಿವೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ: 

  1. ಅವರೆಕಾಳನ್ನು ಬಿಡಿಸಿಟ್ಟುಕೊಳ್ಳಿ. 
  2. ಬಸಳೆ ಎಲೆ ಮತ್ತು ದಂಟನ್ನು ಬೇರೆ ಮಾಡಿ ತೊಳೆಯಿರಿ. ದಂಟನ್ನು ಬೆರಳುದ್ದ ಕತ್ತರಿಸಿ. ಸೊಪ್ಪನ್ನು ಸಣ್ಣಗೆ ಕತ್ತರಿಸಿ.
  3. ಒಂದು ಕುಕ್ಕರ್ ನಲ್ಲಿ ಅವರೆಕಾಳನ್ನು ತೆಗೆದುಕೊಂಡು, ಅದಕ್ಕೆ ಕತ್ತರಿಸಿದ ಬಸಳೆ ಸೊಪ್ಪಿನ ದಂಟನ್ನು ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ, ಎರಡು ವಿಷಲ್ ಮಾಡಿ. 
  4. ನಂತರ ಅದಕ್ಕೆ ಕತ್ತರಿಸಿದ ಸೊಪ್ಪು, ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ. 
  5. ಅರ್ಧ ಲೋಟ ನೀರು ಹಾಕಿ ಪುನಃ ಒಂದು ವಿಷಲ್ ಮಾಡಿ ಬೇಯಿಸಿ ಕೊಳ್ಳಿ. 
  6. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಸಾಸಿವೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  7. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  8. ಕೊನೆಯಲ್ಲಿ ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಅರೆದು ತೆಗೆಯಿರಿ. 
  9. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  10. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. 
  11. ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ಜನವರಿ 5, 2019

Badane bol koddel recipe in Kannada | ಬದನೆ ಬೋಳು ಕೊದ್ದೆಲ್ ಮಾಡುವ ವಿಧಾನ

Badane bol koddel recipe in Kannada

Badane bol koddel recipe in Kannada | ಬದನೆ ಬೋಳು ಕೊದ್ದೆಲ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಬದನೆಕಾಯಿ (ಉಡುಪಿ ಮಟ್ಟುಗುಳ್ಳ)
  2. 1/2 ಕಪ್ ತೊಗರಿಬೇಳೆ
  3. 1 - 2 ಹಸಿಮೆಣಸು
  4. 2 ಟೀಸ್ಪೂನ್ ಬೆಲ್ಲ
  5. ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
  6. 1/4 ಟೀಸ್ಪೂನ್ ಇಂಗು

ಬದನೆ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಮಾಡುವ ವಿಧಾನ:

  1. ಬದನೆಕಾಯಿಯನ್ನು ಕತ್ತರಿಸಿ 15 ನಿಮಿಷ ನೀರಿನಲ್ಲಿ ಹಾಕಿಡಿ. 
  2. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. 
  3. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿ. 
  4. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬದನೆಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. 
  5. ನೀರು ಸೇರಿಸಿ ಬದನೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  6. ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಹೊಂದಿಸಿ.
  7. ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

ಗುರುವಾರ, ಜನವರಿ 3, 2019

Potato rice recipe in Kannada | ಆಲೂಗಡ್ಡೆ ರೈಸ್ ಮಾಡುವ ವಿಧಾನ

Potato rice recipe in Kannada

Potato rice recipe in Kannada | ಆಲೂಗಡ್ಡೆ ರೈಸ್ ಮಾಡುವ ವಿಧಾನ

ಆಲೂಗಡ್ಡೆ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 2 ಆಲೂಗಡ್ಡೆ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಸಾಸಿವೆ 
  5. 1 ಟೇಬಲ್ ಚಮಚ ಶುಂಠಿ+ಬೆಳ್ಳುಳ್ಳಿ
  6. 2 ಈರುಳ್ಳಿ
  7. 1 - 2 ಹಸಿರುಮೆಣಸಿನಕಾಯಿ
  8. ಸ್ವಲ್ಪ ಕರಿಬೇವು
  9. 2 ಟೊಮ್ಯಾಟೋ
  10. 1/4 ಟೀಸ್ಪೂನ್ ಅರಶಿನ ಪುಡಿ
  11. ಒಂದು ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  12. ಒಂದು ಸಣ್ಣ ಹಿಡಿ ಮೆಂತೆ ಸೊಪ್ಪು
  13. ಒಂದು ಸಣ್ಣ ಹಿಡಿ ಪುದಿನ ಸೊಪ್ಪು
  14. 3 ಟೇಬಲ್ ಚಮಚ ಅಡುಗೆ ಎಣ್ಣೆ 
  15. 2.5 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  16. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಆಲೂಗಡ್ಡೆ ರೈಸ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. 
  2. ಟೊಮ್ಯಾಟೋ, ಆಲೂಗಡ್ಡೆ, ಸೊಪ್ಪುಗಳು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  3. ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಬಿಸಿಮಾಡಿ. ಜೀರಿಗೆ ಮತ್ತು ಸಾಸಿವೆ ಹಾಕಿ ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ. 
  5. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವು ಮತ್ತು ಹಸಿರುಮೆಣಸಿನಕಾಯಿ ಹಾಕಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ.
  7. ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  8. ನಂತರ ಕತ್ತರಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು ಮತ್ತು ಮೆಂತೆ ಸೊಪ್ಪು ಹಾಕಿ ಹುರಿಯಿರಿ.
  9. ಆಮೇಲೆ ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಗುಚಿ.
  10. ನೆನೆಸಿಟ್ಟ 1 ಕಪ್ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2.5 ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  11. ಉಪ್ಪು ಹಾಕಿ, ಸ್ವಲ್ಪ ನಿಂಬೆ ರಸ ಸೇರಿಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  12. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ, ಸವಿದು ಆನಂದಿಸಿ. 

Related Posts Plugin for WordPress, Blogger...