ಮಂಗಳವಾರ, ಡಿಸೆಂಬರ್ 25, 2018

Balehannina rasayana recipe in kannada | ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ

Balehannina rasayana recipe in kannada

Balehannina rasayana recipe in kannada | ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 10 ಸಣ್ಣ ಬಾಳೆಹಣ್ಣು
  2. 2 ಕಪ್ ತೆಂಗಿನತುರಿ ಅಥವಾ 1 ಕಪ್ ಗಟ್ಟಿ ತೆಂಗಿನಕಾಯಿ ಹಾಲು
  3. 1 ಕಪ್ ನೀರು (ಕಾಯಿಹಾಲು ತೆಗೆಯಲು)
  4. 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. ಚಿಟಿಕೆ ಉಪ್ಪು.
  6. ದೊಡ್ಡ ಚಿಟಿಕೆ ಏಲಕ್ಕಿ

ಬಾಳೆ ಹಣ್ಣಿನ ರಸಾಯನ ಮಾಡುವ ವಿಧಾನ:

  1. ಬಾಳೆ ಹಣ್ಣು ಸಿಪ್ಪೆ ತೆಗೆದು, ಸಣ್ಣದಾಗಿ ಕತ್ತರಿಸಿ.
  2. ಆಮೇಲೆ ಪುಡಿ ಮಾಡಿದ ಬೆಲ್ಲ ಸೇರಿಸಿ. 
  3. ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  4. ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಬಾಳೆಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ಏಲಕ್ಕಿ ಪುಡಿ ಹಾಕಿ ಕಲಸಿ.
  7. ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.

ಬುಧವಾರ, ಡಿಸೆಂಬರ್ 19, 2018

Menthe soppina pulav recipe in Kannada | ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ

Menthe soppina pulav recipe in Kannada

Menthe soppina pulav recipe in Kannada | ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ

ಮೆಂತೆಸೊಪ್ಪಿನ ಪಲಾವ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಸಣ್ಣ ಕಟ್ಟು ಅಥವಾ ಒಂದು ಕಪ್ ಮೆಂತೆ ಸೊಪ್ಪು
  3. 1/2 ಕಪ್ ಹಸಿ ಬಟಾಣಿ
  4. 1 ದೊಡ್ಡ ಈರುಳ್ಳಿ
  5. 1 ದೊಡ್ಡ ಟೊಮ್ಯಾಟೋ
  6. 1/2 ಟೀಸ್ಪೂನ್ ಜೀರಿಗೆ
  7. 1 ಪುಲಾವ್ ಎಲೆ
  8. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  9. 2 ಟೇಬಲ್ ಚಮಚ ಅಡುಗೆ ಎಣ್ಣೆ 
  10. 1 ಟೀಸ್ಪೂನ್ ತುಪ್ಪ
  11. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  12. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 2 ಸೆಮೀ ಉದ್ದದ ಶುಂಠಿ
  3. 4 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಸೋಂಪು / 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. 1/2 ಬೆರಳುದ್ದ ಚಕ್ಕೆ
  8. 7 - 8 ಲವಂಗ
  9. 1 ಏಲಕ್ಕಿ
  10. ಒಂದು ಹಿಡಿ ಕೊತ್ತಂಬರಿ ಸೊಪ್ಪು
  11. ಒಂದು ಹಿಡಿ ಪುದೀನಾ ಸೊಪ್ಪು
  12. 1/2 ಕಪ್ ನೀರು ಅರೆಯಲು

ಮೆಂತೆಸೊಪ್ಪಿನ ಪಲಾವ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಟೊಮ್ಯಾಟೋ, ಮೆಂತೆ ಸೊಪ್ಪು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ. 
  2. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  3. ಈಗ ಒಂದು ಕುಕ್ಕರ್ ತೆಗೆದುಕೊಂಡು ಎಣ್ಣೆ ಹಾಕಿ. 1/2 ಟೀಸ್ಪೂನ್ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ 
  6. ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಒಂದೆರಡು ನಿಮಿಷದ ನಂತರ ಹಸಿಬಟಾಣಿ ಮತ್ತು ಮೆಂತೆ ಸೊಪ್ಪು ಹಾಕಿ ಹುರಿಯಿರಿ.
  8. ಆಮೇಲೆ ಅರೆದ ಮಸಾಲೆ ಹಾಕಿ ಪುನಃ 5 ನಿಮಿಷಗಳ ಕಾಲ ಆಗಾಗ್ಯೆ ಮಗುಚುತ್ತಾ ಹುರಿಯಿರಿ.
  9. ನೆನೆಸಿಟ್ಟ 1 ಕಪ್ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2 ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  10. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  11. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

ಸೋಮವಾರ, ಡಿಸೆಂಬರ್ 17, 2018

Shunti saaru recipe in Kannada | ಶುಂಠಿ ಸಾರು ಮಾಡುವ ವಿಧಾನ

Shunti saaru recipe in Kannada

Shunti saaru recipe in Kannada | ಶುಂಠಿ ಸಾರು ಮಾಡುವ ವಿಧಾನ 

ಶುಂಠಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಒಣಮೆಣಸಿನಕಾಯಿ
  4.  5 - 6 ಕರಿಬೇವಿನ ಎಲೆ
  5. 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ 
  6. 1 ದೊಡ್ಡ ಟೊಮೆಟೋ 
  7. ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ 
  8. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  9. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  10. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  11. 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಟೀಸ್ಪೂನ್  ತೊಗರಿಬೇಳೆ
  2. 1 ಟೀಸ್ಪೂನ್  ಕಡ್ಲೆಬೇಳೆ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಕಾಳು ಮೆಣಸು
  5. 1 - 2 ಒಣ ಮೆಣಸಿನಕಾಯಿ
  6. 1 ಟೇಬಲ್ ಚಮಚ ಶುಂಠಿ


ಶುಂಠಿ ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಕಡ್ಲೆಬೇಳೆ, ಜೀರಿಗೆ, ಕಾಳುಮೆಣಸು ಮತ್ತು ಒಣಮೆಣಸಿನಕಾಯಿ ಹಾಕಿ ಹುರಿಯಿರಿ. 
  2. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಕತ್ತರಿಸಿದ ಶುಂಠಿ ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ
  3. ಬಿಸಿ ಆರಿದ ಮೇಲೆ, ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ. 
  6. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದಕ್ಕೆ ಹುಣಸೆರಸ, ಉಪ್ಪು ಮತ್ತು ಬೆಲ್ಲ ಸೇರಿಸಿ. 
  8. ಸ್ವಲ್ಪ ನೀರು ಹಾಕಿ ಕುದಿಸಿ
  9. ಪುಡಿಮಾಡಿದ ಮಸಾಲೆ ಸೇರಿಸಿ. 
  10. ಅಗತ್ಯವಿದ್ದಷ್ಟು ನೀರು (ಸುಮಾರು ಎರಡು ದೊಡ್ಡ ಲೋಟ) ಸೇರಿಸಿ. 
  11. ಕುದಿಸಿ, ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  12. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಡಿಸೆಂಬರ್ 11, 2018

Corn pulao recipe in Kannada | ಕಾರ್ನ್ ಪಲಾವ್ ಮಾಡುವ ವಿಧಾನ

 Corn pulao recipe in Kannada

Corn pulao recipe in Kannada | ಕಾರ್ನ್ ಪಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಕಪ್ ಸಿಹಿ ಮೆಕ್ಕೆಜೋಳ (ಕಾರ್ನ್)
  3. 1 ದೊಡ್ಡ ಈರುಳ್ಳಿ
  4. 1 ಟೊಮ್ಯಾಟೋ
  5. 1/2 ಬೆರಳುದ್ದ ಚಕ್ಕೆ
  6. 7 - 8 ಲವಂಗ
  7. 1 ಏಲಕ್ಕಿ
  8. 1 ಚಕ್ರ ಮೊಗ್ಗು 
  9. 1 ಪುಲಾವ್ ಎಲೆ
  10. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  11. 3 ಟೇಬಲ್ ಚಮಚ ಅಡುಗೆ ಎಣ್ಣೆ / ತುಪ್ಪ
  12. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  13. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 2ಸೆಮೀ ಉದ್ದದ ಶುಂಠಿ
  3. 5-6 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. ಒಂದು ಹಿಡಿ ಕೊತ್ತಂಬರಿ ಸೊಪ್ಪು
  8. 1/2 ಕಪ್ ನೀರು ಅರೆಯಲು

ಕಾರ್ನ್ ಪಲಾವ್ ಮಾಡುವ ವಿಧಾನ:

  1. ಮೊದಲಿಗೆ ಅಕ್ಕಿ ತೊಳೆದಿಟ್ಟುಕೊಳ್ಳಿ. 
  2. ಜೋಳ ತೆಗೆದಿಟ್ಟುಕೊಳ್ಳಿ. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
  3. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು 1/2 ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  4. ಈಗ ಒಂದು 5ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. ಚಕ್ಕೆ, ಲವಂಗ, ಏಲಕ್ಕಿ, ಚಕ್ರ ಮೊಗ್ಗು ಮತ್ತು ಪುಲಾವ್ ಎಲೆ ಹಾಕಿ ಹುರಿಯಿರಿ.
  5. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ನಿಂಬೆ ರಸ ಹಾಕುವುದಾದಲ್ಲಿ ಕೊನೆಯಲ್ಲಿ ಬಡಿಸುವ ಮುನ್ನ ಸೇರಿಸಿ. 
  7. ಈಗ ಬಿಡಿಸಿದ ಜೋಳ ಹಾಕಿ ಮಗುಚಿ. 
  8. ಆಮೇಲೆ ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಹುರಿಯಿರಿ.
  9. ತೊಳೆದಿಟ್ಟ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  10. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  11. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಟೊಮೇಟೊ ಬದಲಾಗಿ ನಿಂಬೆ ರಸ ಹಾಕುವುದಾದಲ್ಲಿ ಈಗ ಹಾಕಿ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

ಶುಕ್ರವಾರ, ಡಿಸೆಂಬರ್ 7, 2018

Plain ragi rotti recipe in Kannada | ಉಕ್ಕರಿಸಿದ ರಾಗಿ ರೊಟ್ಟಿ ಮಾಡುವ ವಿಧಾನ

Plain ragi rotti recipe in Kannada

Plain ragi rotti recipe in Kannada | ಉಕ್ಕರಿಸಿದ ರಾಗಿ ರೊಟ್ಟಿ ಮಾಡುವ ವಿಧಾನ

ಉಕ್ಕರಿಸಿದ ರಾಗಿರೊಟ್ಟಿ ಅಥವಾ ಉಬ್ಬುರೊಟ್ಟಿಯ ವಿಡಿಯೋವನ್ನು ಈ ಕೆಳಗೆ ನೀಡಿದ್ದೇನೆ. ಒಮ್ಮೆ ವೀಕ್ಷಿಸಿದಲ್ಲಿ ರೊಟ್ಟಿ ಮಾಡಲು ಅನುಕೂಲವಾಗಬಹುದು. 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರಾಗಿ ಹಿಟ್ಟು 
  2. 1/2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 1 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು


ಉಕ್ಕರಿಸಿದ ರಾಗಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ಎಣ್ಣೆ ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ  ರಾಗಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ. 
  3. ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ. 
  4. ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. 
  6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  7. ಒಂದು ಶುಭ್ರವಾದ ಬಟ್ಟೆಯಿಂದ ರೊಟ್ಟಿಯ ಮೇಲ್ಭಾಗಕ್ಕೆ ನೀರನ್ನು ಹಚ್ಚಿ. 
  8. ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ. 
  9. ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಗುರುವಾರ, ಡಿಸೆಂಬರ್ 6, 2018

Hesarukalu saaru recipe in Kannada | ಹೆಸರುಕಾಳು ಸಾರು ಮಾಡುವ ವಿಧಾನ

Hesarukalu saaru recipe in Kannada

Hesarukalu saaru recipe in Kannada | ಹೆಸರುಕಾಳು ಸಾರು ಮಾಡುವ ವಿಧಾನ 

ಹೆಸರುಕಾಳು ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1 ಕಪ್ ಮೊಳಕೆ ಕಟ್ಟಿದ ಹೆಸರುಕಾಳು
  2. 1 ಸಣ್ಣ ಆಲೂಗಡ್ಡೆ
  3. 1 ಕತ್ತರಿಸಿದ ಈರುಳ್ಳಿ
  4. 1 ಕತ್ತರಿಸಿದ ಟೊಮೆಟೊ
  5. 2 ಟೀಸ್ಪೂನ್ ಅಡುಗೆ ಎಣ್ಣೆ
  6. ಸಣ್ಣ ಗೋಲಿಗಾತ್ರದ ಬೆಲ್ಲ 
  7. ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  8. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. ನಿಮ್ಮ ರುಚಿ ಪ್ರಕಾರ ಉಪ್ಪು

ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1-2 ಒಣಮೆಣಸಿನಕಾಯಿ
  2. 2 ಟೀಸ್ಪೂನ್ ಕೊತ್ತಂಬರಿ ಬೀಜ
  3. 1/2 ಟೀಸ್ಪೂನ್ ಜೀರಿಗೆ 
  4. 2 ಬೇಳೆ ಬೆಳ್ಳುಳ್ಳಿ
  5. ಸ್ವಲ್ಪ ಶುಂಠಿ
  6. 1/2 ಕಪ್ ತೆಂಗಿನ ತುರಿ
  7. ಸ್ವಲ್ಪ ಚಕ್ಕೆ 
  8. ಸ್ವಲ್ಪ ಲವಂಗ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಹೆಸರುಕಾಳು ಸಾರು ಮಾಡುವ ವಿಧಾನ:

  1. ಅರ್ಧ ಕಪ್ ಹೆಸರುಕಾಳನ್ನು ನೆನೆಸಿ, ಮೊಳಕೆ ಕಟ್ಟಿಸಿಕೊಳ್ಳಿ. 
  2. ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಟ್ಟುಕೊಳ್ಳಿ. 
  3. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ. 
  4. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಹುರಿಯಿರಿ. 
  5. ನಂತರ ಟೊಮೇಟೊ ಹಾಕಿ ಹುರಿಯಿರಿ. 
  6. ಆಮೇಲೆ ಮೊಳಕೆ ಹೆಸರುಕಾಳು ಮತ್ತು ಆಲೂಗಡ್ಡೆ ಹಾಕಿ ಹುರಿಯಿರಿ. 
  7. ನಂತರ ಅರೆದ ಮಸಾಲೆ, ಅರ್ಧ ಕಪ್ ನೀರು ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. 
  8. ಪುನಃ ಅರ್ಧ ಕಪ್ ನೀರು ಹಾಕಿ  ಒಂದು ವಿಷಲ್ ಮಾಡಿ ಬೇಯಿಸಿ. 
  9. ಒತ್ತಡ ಇಳಿದ ಮೇಲೆ ಮುಚ್ಚಳ ತೆರೆದು, ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಒಂದು ಕಪ್) 
  10. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ ಕುದಿಸಿ. 
  11. ಸ್ಟವ್ ಆಫ್ ಮಾಡಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. 
  12. ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  13. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಮಂಗಳವಾರ, ಡಿಸೆಂಬರ್ 4, 2018

Cabbage chutney recipe in Kannada | ಎಲೆಕೋಸು ಚಟ್ನಿ ಮಾಡುವ ವಿಧಾನ

Cabbage chutney recipe in Kannada

Cabbage chutney recipe in Kannada | ಎಲೆಕೋಸು ಚಟ್ನಿ ಮಾಡುವ ವಿಧಾನ

ಎಲೆಕೋಸು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಕತ್ತರಿಸಿದ ಎಲೆಕೋಸು
  2. 1 ಈರುಳ್ಳಿ
  3. 1 ಟೊಮೇಟೊ ಅಥವಾ ಗೋಲಿಗಾತ್ರದ ಹುಣಿಸೇಹಣ್ಣು
  4. 1 ಚಮಚ ಕತ್ತರಿಸಿದ ಶುಂಠಿ
  5. 1/2 - 1 ಹಸಿರುಮೆಣಸಿನಕಾಯಿ
  6. 1 - 2 ಒಣಮೆಣಸಿನಕಾಯಿ 
  7. 2 ಟೇಬಲ್ ಚಮಚ ಉದ್ದಿನಬೇಳೆ
  8. 4 - 5 ಕರಿಬೇವಿನ ಎಲೆ
  9. ಒಂದು ದೊಡ್ಡ ಚಿಟಿಕೆ ಅರಿಶಿನ
  10. ಉಪ್ಪು ರುಚಿಗೆ ತಕ್ಕಷ್ಟು
  11. 1 ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 4 - 5 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ಎಲೆಕೋಸು ಚಟ್ನಿ ಮಾಡುವ ವಿಧಾನ:

  1. ಎಲೆಕೋಸು, ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ. 
  3. ಒಣಮೆಣಸು, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ ಬೇಳೆ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  4. ನಂತ್ರ ಕತ್ತರಿಸಿದ ಶುಂಠಿ, ಹಸಿರುಮೆಣಸು ಮತ್ತು ಕರಿಬೇವು ಹಾಕಿ ಹುರಿಯಿರಿ. 
  5. ಆಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ, ಅರಿಶಿನ ಸೇರಿಸಿ, ಹುರಿಯಿರಿ. ಟೊಮೇಟೊ ಬದಲು ಅರೆಯುವಾಗ ಹುಣಿಸೆಹಣ್ಣು ಹಾಕಬಹುದು. 
  7. ಉಪ್ಪು ಹಾಕಿ ಎಲೆಕೋಸು ಮೆತ್ತಗಾಗುವವರೆಗೆ ಬೇಯಿಸಿ. 
  8. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. 
  9. ಕೊನೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಾಡಿ. 
  10. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 
Related Posts Plugin for WordPress, Blogger...