ಗುರುವಾರ, ನವೆಂಬರ್ 29, 2018

Instant chutney mix recipe in Kannada | ದಿಢೀರ್ ಚಟ್ನಿ ಮಿಕ್ಸ್ ಮಾಡುವ ವಿಧಾನ

Instant chutney mix recipe in Kannada

Instant chutney mix recipe in Kannada | ದಿಢೀರ್ ಚಟ್ನಿ ಮಿಕ್ಸ್ ಮಾಡುವ ವಿಧಾನ 

ದಿಢೀರ್ ಚಟ್ನಿ ಮಿಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಒಣ ಮೆಣಸಿನಕಾಯಿ
  2. 1/4 ಕಪ್ ನೆಲಗಡಲೆ ಅಥವಾ ಶೇಂಗಾ
  3. 1/2 ಕಪ್ ಹುರಿಗಡಲೆ
  4. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  5. 3 - 4 ಎಸಳು ಬೆಳ್ಳುಳ್ಳಿ
  6. 1 ಟೀಸ್ಪೂನ್ ಕೊತ್ತಂಬರಿ ಬೀಜ
  7. ಸ್ವಲ್ಪ ಕರಿಬೇವು
  8. ಸಣ್ಣ ಗೋಲಿ ಹಣ್ಣಿನ ಗಾತ್ರದ ಹುಣಿಸೇಹಣ್ಣು
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಒಣ ಮೆಣಸಿನಕಾಯಿ
  2. 1 ಚಮಚ ಸಾಸಿವೆ
  3. 1/4 ಟೀಸ್ಪೂನ್ ಇಂಗು
  4. ಸ್ವಲ್ಪ ಕರಿಬೇವು
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ದಿಢೀರ್ ಚಟ್ನಿ ಮಿಕ್ಸ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣಮೆಣಸು ಮತ್ತು ಶೇಂಗಾ ಹಾಕಿ, ಶೇಂಗಾ ಅಲ್ಲಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. 
  2. ನಂತ್ರ ಬೆಳ್ಳುಳ್ಳಿ ಎಸಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. 
  3. ಅದಕ್ಕೆ ಹುರಿಗಡಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
  4. ಆಮೇಲೆ ಕೊಬ್ಬರಿ, ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  5. ಉಪ್ಪು ಮತ್ತು ಹುಣಿಸೇಹಣ್ಣು ಸೇರಿಸಿ, ಮಗುಚಿ, ಸ್ಟವ್ ಆಫ್ ಮಾಡಿ. 
  6. ಬಿಸಿ ಆರಿದ ಮೇಲೆ ನುಣ್ಣನೆ ಪುಡಿಮಾಡಿಕೊಳ್ಳಿ.
  7. ನಂತರ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸು, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ. 
  8. ಸ್ಟವ್ ಆಫ್ ಮಾಡಿ, ಪುಡಿ ಮಡಿದ ಮಿಶ್ರಣ ಸೇರಿಸಿ, ಚೆನ್ನಾಗಿ ಕಲಸಿ. 
  9. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  10. ಚಟ್ನಿ ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ತೆಗೆದುಕೊಂಡು, ನೀರು ಸೇರಿಸಿ ಕಲಸಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 


ಸೋಮವಾರ, ನವೆಂಬರ್ 26, 2018

Southekai thirulina sasive in kannada | ಸೌತೆಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ

Southekai thirulina sasive in kannada

Southekai thirulina sasive in kannada | ಸೌತೆಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ


ಸೌತೆಕಾಯಿ ತಿರುಳಿನ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಸಾಂಬಾರ್ ಸೌತೆಕಾಯಿ ಯಿಂದ ತೆಗೆದ ತಿರುಳು
  2. 1/4 ಟೀಸ್ಪೂನ್ ಸಾಸಿವೆ
  3. 1/4 ಕಪ್ ತೆಂಗಿನತುರಿ
  4. 1/4 ಕಪ್ ಮೊಸರು ಅಥವಾ ಮಜ್ಜಿಗೆ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ
  4. 4 - 5 ಕರಿಬೇವಿನ ಎಲೆ

ಸೌತೆಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ:

  1. ಸೌತೆಕಾಯಿ ಯನ್ನು ಕತ್ತರಿಸಿ, ತಿರುಳನ್ನು ತೆಗೆಯಿರಿ. ತಿರುಳು ಕಹಿ ಇಲ್ಲವೆಂದು ಖಚಿತಪಡಿಸಿಕೊಳ್ಳಿ. 
  2. ಬೀಜ ಬೇರ್ಪಡಿಸಿ, ತಿರುಳನ್ನು ನೀರು ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. 
  3. ಬಿಸಿ ಆರಿದ ಮೇಲೆ ಬೇಯಿಸಿದ ತಿರುಳು, ಸಾಸಿವೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.  
  4. ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. 
  6. ಅಗತ್ಯವಿದ್ದಷ್ಟು ಉಪ್ಪು, ಮೊಸರು ಮತ್ತು ನೀರು ಹಾಕಿ. 
  7. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ನವೆಂಬರ್ 24, 2018

Thondekai masala recipe in Kannada | ತೊಂಡೆಕಾಯಿ ಮಸಾಲೆ ಮಾಡುವ ವಿಧಾನ

Thondekai masala recipe in Kannada

Thondekai masala recipe in Kannada | ತೊಂಡೆಕಾಯಿ ಮಸಾಲೆ ಮಾಡುವ ವಿಧಾನ 

ತೊಂಡೆಕಾಯಿ ಮಸಾಲೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 kg ತೊಂಡೆಕಾಯಿ
  2. 1 ಕತ್ತರಿಸಿದ ಈರುಳ್ಳಿ 
  3. 1/4 ಟೀಸ್ಪೂನ್ ಅರಿಶಿನ ಪುಡಿ 
  4. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  5. ಒಂದು ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. 4 ಟೇಬಲ್ ಚಮಚ ಅಡುಗೆ ಎಣ್ಣೆ 
  7. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/4 ಕಪ್ ನೆಲಗಡಲೆ ಅಥವಾ ಶೇಂಗಾ
  2. 1/4 ಕಪ್ ತೆಂಗಿನತುರಿ
  3. 2 ಚಮಚ ಕೊತ್ತಂಬರಿ ಬೀಜ 
  4. 2 - 4 ಒಣಮೆಣಸು
  5. 2 ದೊಡ್ಡ ಚಮಚ ಎಳ್ಳು
  6. 1 ಕತ್ತರಿಸಿದ ಟೊಮೇಟೊ

ತೊಂಡೆಕಾಯಿ ಮಸಾಲೆ ಮಾಡುವ ವಿಧಾನ:

  1. ತೊಂಡೆಕಾಯಿ, ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಟ್ಟುಕೊಳ್ಳಿ.
  2. ನಂತರ ಒಂದು ಬಾಣಲೆಯಲ್ಲಿ ಶೇಂಗಾ, ಕೊತ್ತಂಬರಿ ಬೀಜ ಮತ್ತು ಒಣಮೆಣಸು ಹಾಕಿ ಎಣ್ಣೆ ಹಾಕದೆ ಹುರಿಯಿರಿ. 
  3. ನಂತ್ರ ಅದೇ ಬಾಣಲೆಗೆ ಎಳ್ಳು ಸೇರಿಸಿ ಹುರಿಯಿರಿ. 
  4. ಎಳ್ಳು ಸಿಡಿದ ಮೇಲೆ ಕತ್ತರಿಸಿದ ಟೊಮೇಟೊ ಮತ್ತು ತೆಂಗಿನತುರಿ ಹಾಕಿ ಹುರಿಯಿರಿ. 
  5. ಸ್ಟವ್ ಆಫ್ ಮಾಡಿ, ಹುರಿದ ಪದಾರ್ಥಗಳು ಬಿಸಿ ಆರಿದ ಮೇಲೆ ಅರೆದಿಟ್ಟುಕೊಳ್ಳಿ. 
  6. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತೊಂಡೆಕಾಯಿ ಹಾಕಿ ಹುರಿಯಿರಿ. 
  7. ಹುರಿಯುವಾಗ ಸ್ವಲ್ಪ ಉಪ್ಪು ಸೇರಿಸಿದರೆ ತೊಂಡೆಕಾಯಿ ಬೇಗ ಬೇಯುತ್ತದೆ. 
  8. ಕೊನೆಯಲ್ಲಿ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಹಾಕಿ, ಹುರಿಯುವುದನ್ನು ಮುಂದುವರೆಸಿ. 
  9. ಆಮೇಲೆ ಅರೆದಿಟ್ಟ ಮಸಾಲೆ ಹಾಕಿ.
  10. 1 ಕಪ್ ನೀರು ಹಾಕಿ ಹತ್ತು ನಿಮಿಷ ಬೇಯಿಸಿ. ತರಕಾರಿ ಸಂಪೂರ್ಣ ಬೆಂದ ಮೇಲೆ ಸ್ಟವ್ ಆಫ್ ಮಾಡಿ. 
  11. ಕೊತ್ತಂಬರಿ ಸೊಪ್ಪು ಹಾಕಿ. 
  12. ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಬುಧವಾರ, ನವೆಂಬರ್ 21, 2018

Eerulli palya recipe in Kannada | ಈರುಳ್ಳಿ ಪಲ್ಯ ಮಾಡುವ ವಿಧಾನ

Eerulli palya recipe in Kannada

Eerulli palya recipe in Kannada | ಈರುಳ್ಳಿ ಪಲ್ಯ ಮಾಡುವ ವಿಧಾನ 


ಈರುಳ್ಳಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4  ಮಧ್ಯಮ ಗಾತ್ರದ ಈರುಳ್ಳಿ
  2. 1/2 ಚಮಚ ಸಾಸಿವೆ 
  3. 1/2 ಚಮಚ ಜೀರಿಗೆ
  4. 1 ಒಣಮೆಣಸು
  5. 1/4 ಟೀಸ್ಪೂನ್ ಅರಿಶಿನ ಪುಡಿ
  6. ಒಂದು ದೊಡ್ಡ ಚಿಟಿಕೆ ಇಂಗು
  7. 5 - 6 ಕರಿಬೇವಿನ ಎಲೆ 
  8. 1 - 2 ಹಸಿರು ಮೆಣಸಿನಕಾಯಿ 
  9. 1 ಟೊಮೇಟೊ
  10. ನಿಮ್ಮ ರುಚಿ ಪ್ರಕಾರ ಉಪ್ಪು 
  11. 4 ಟೀಸ್ಪೂನ್ ಅಡುಗೆ ಎಣ್ಣೆ

ಈರುಳ್ಳಿ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಿಟ್ಟು ಕೊಳ್ಳಿ. 
  2. ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸಿನ ಒಗ್ಗರಣೆ ಮಾಡಿಕೊಳ್ಳಿ. 
  3. ಅದಕ್ಕೆ ಹಸಿರು ಮೆಣಸಿನ ಕಾಯಿ ಮತ್ತು ಕರಿಬೇವು ಸೇರಿಸಿ. 
  4. ಕತ್ತರಿಸಿಟ್ಟ ಈರುಳ್ಳಿ ಹಾಕಿ ಒಮ್ಮೆ ಮಗುಚಿ. 
  5. ಅರಶಿನ ಪುಡಿ ಮತ್ತು ಇಂಗು ಹಾಕಿ ಒಂದು ನಿಮಿಷ ಹುರಿಯಿರಿ. 
  6. ಉಪ್ಪು ಸೇರಿಸಿ, ಒಮ್ಮೆ ಮಗುಚಿ. 
  7. ಮುಚ್ಚಳ ಮುಚ್ಚಿ ಈರುಳ್ಳಿ ಮೆತ್ತಗಾಗುವವರೆಗೆ ಬೇಯಿಸಿ. ಬೇಕಾದಲ್ಲಿ ಒಂದು ಚಮಚ ನೀರು ಸೇರಿಸಬಹುದು. ಒಂದೆರಡು ನಿಮಿಷ ಬೇಯಿಸಿದರೆ ಸಾಕಾಗುತ್ತದೆ. 
  8. ನಂತರ ಬಾಣಲೆಯ ಮಧ್ಯದಲ್ಲಿ ಸ್ವಲ್ಪ ಜಾಗ ಮಾಡಿ, ಕತ್ತರಿಸಿದ ಟೊಮೇಟೊ ಹಾಕಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  9. ನಂತ್ರ ಎಲ್ಲವನ್ನು ಚೆನ್ನಗಿ ಮಗುಚಿ. 
  10. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  11. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ನವೆಂಬರ್ 20, 2018

Chitranna recipe in Kannada | ಚಿತ್ರಾನ್ನ ಮಾಡುವ ವಿಧಾನ

Chitranna recipe in Kannada

Chitranna recipe in Kannada | ಚಿತ್ರಾನ್ನ ಮಾಡುವ ವಿಧಾನ 

ಚಿತ್ರಾನ್ನ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ದೊಡ್ಡ ಈರುಳ್ಳಿ
  3. 2 - 4 ಹಸಿರು ಮೆಣಸಿನಕಾಯಿ
  4. 1/2 ಟೀಸ್ಪೂನ್ ಸಾಸಿವೆ
  5. 4 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಟೀಸ್ಪೂನ್ ಕಡ್ಲೆಬೇಳೆ
  8. 7 - 8 ಕರಿಬೇವಿನ ಎಲೆ
  9. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1/2 ಟೀಸ್ಪೂನ್ ಅರಿಶಿನ ಪುಡಿ
  11. ದೊಡ್ಡ ಚಿಟಿಕೆ ಇಂಗು (ಬೇಕಾದಲ್ಲಿ)
  12. 1 ದೊಡ್ಡ ಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  13. ದೊಡ್ಡ ನಿಂಬೆಹಣ್ಣಿನ ನಿಂಬೆರಸ
  14. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಚಿತ್ರಾನ್ನ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಈರುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ. ಬೇರೆ ಎಲ್ಲ ಪದಾರ್ಥಗಳನ್ನು ತಯಾರು ಮಾಡಿಟ್ಟುಕೊಳ್ಳಿ. 
  3. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  4. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  5. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
  6. ಇಂಗು ಮತ್ತು ಅರಿಶಿನ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  7. ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  8. ನಿಂಬೆರಸ ಸೇರಿಸಿ. 
  9. ನಂತರ ಬೇಯಿಸಿದ ಅನ್ನ ಸೇರಿಸಿ. 
  10. ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ನವೆಂಬರ್ 16, 2018

Corn cutlet recipe in Kannada | ಕಾರ್ನ್ ಕಟ್ಲೆಟ್ ಮಾಡುವ ವಿಧಾನ

Corn cutlet recipe in Kannada

Corn cutlet recipe in Kannada | ಕಾರ್ನ್ ಕಟ್ಲೆಟ್ ಮಾಡುವ ವಿಧಾನ 

ಕಾರ್ನ್ ಕಟ್ಲೆಟ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಆಲೂಗಡ್ಡೆ
  2. 1 ಕಪ್ ಸಿಹಿಜೋಳ ಅಥವಾ ಸ್ವೀಟ್ ಕಾರ್ನ್
  3. 1/2 ಕಪ್ ಗಟ್ಟಿ ಅವಲಕ್ಕಿ
  4. 1/2 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ 
  5. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
  6. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕರಿಬೇವು
  7. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ 
  8. 1/2 - 1 ಟೀಸ್ಪೂನ್ ಚಾಟ್ ಮಸಾಲಾ 
  9. 1/2 ಟೀಸ್ಪೂನ್ ಗರಂ ಮಸಾಲಾ 
  10. 1/2 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ ನಿಂಬೆ ರಸ
  11. ಉಪ್ಪು ರುಚಿಗೆ ತಕ್ಕಷ್ಟು 
  12. ಎಣ್ಣೆ ಕಾಯಿಸಲು

ಕಾರ್ನ್ ಕಟ್ಲೆಟ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆಯಿರಿ. ನಂತರ ಮ್ಯಾಶ್ ಮಾಡಿ ಅಥವಾ ಹಿಸುಕಿ.  
  2.  ಅವಲಕ್ಕಿ ಯನ್ನು ತರಿತರಿಯಾಗಿ ಪುಡಿಮಾಡಿಟ್ಟುಕೊಳ್ಳಿ. 
  3. ಜೋಳವನ್ನು ಒಂದೆರಡು ಸುತ್ತು ಅರೆದಿಟ್ಟುಕೊಳ್ಳಿ. 
  4. ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  5. ಅದಕ್ಕೆ ಅರೆದ ಜೋಳ ಸೇರಿಸಿ. 
  6. ಸಣ್ಣಗೆ ಕತ್ತರಿಸಿದ ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೇರಿಸಿ. 
  7. ನಂತರ ಅಚ್ಚ ಖಾರದ ಪುಡಿ, ಉಪ್ಪು, ಚಾಟ್ ಮಸಾಲಾ, ಮಾವಿನಕಾಯಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಕಲಸಿ. ಮಾವಿನಕಾಯಿ ಪುಡಿ ಬದಲಾಗಿ ನಿಂಬೆರಸ ಹಾಕ ಬಹುದು. 
  8. ಅಗತ್ಯವಿದ್ದಷ್ಟು ಅವಲಕ್ಕಿ ಪುಡಿ ಸೇರಿಸಿ, ಸ್ವಲ್ಪ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಿ. ನಾನು 1/4 ಕಪ್ ನಷ್ಟು ಸೇರಿಸಿದ್ದೇನೆ. 
  9. ಮಿಶ್ರಣದಿಂದ ಚಪ್ಪಟೆಯಾದ ಕಟ್ಲೇಟ್ ಗಳನ್ನೂ ಮಾಡಿಕೊಳ್ಳಿ. 
  10. ಬೇಕಾದಲ್ಲಿ ಅವಲಕ್ಕಿ ಅಥವಾ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಹೀಗೆ ಎಲ್ಲ ಕಟ್ಲೇಟ್ ಗಳನ್ನೂ ಸಿದ್ದ ಪಡಿಸಿಕೊಳ್ಳಿ. 
  11. ದೋಸೆ ಕಾವಲಿ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಚಿಮುಕಿಸಿ. 
  12. ತಯಾರಿಸದ ಕಟ್ಲೇಟ್ ನ್ನು ಅಗತ್ಯವಿದ್ದಷ್ಟು ಎಣ್ಣೆ ಚಿಮುಕಿಸಿ ಎರಡು ಬದಿ ಕಾಯಿಸಿ. ಟೊಮೇಟೊ ಸಾಸ್ನೊಂದಿಗೆ ಬಡಿಸಿ. 


ಬುಧವಾರ, ನವೆಂಬರ್ 14, 2018

Southe beejada saaru recipe in Kannada | ಸೌತೆಕಾಯಿ ಬೀಜದ ಸಾರು ಮಾಡುವ ವಿಧಾನ

Southe beejada saaru recipe in Kannada

Southe beejada saaru recipe in Kannada | ಸೌತೆಕಾಯಿ ಬೀಜದ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಾಂಬಾರ್ ಸೌತೆಕಾಯಿಯಿಂದ ತೆಗೆದ ಬೀಜ
  2. 1/4 ಕಪ್ ತೆಂಗಿನ ತುರಿ 
  3. 1/2 ಚಮಚ ಜೀರಿಗೆ
  4. 4 ಟೇಬಲ್ ಚಮಚ ಮಜ್ಜಿಗೆ ಅಥವಾ ಮೊಸರು
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ಸಾಸಿವೆ
  3. ಒಂದು ದೊಡ್ಡ ಚಿಟಿಕೆ ಇಂಗು 
  4. 7 - 8 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ಸೌತೆಕಾಯಿ ಬೀಜದ ಸಾರು ಮಾಡುವ ವಿಧಾನ:

  1. ಬೀಜ ಬೇರ್ಪಡಿಸಿ, ಒಮ್ಮೆ ತೊಳೆದುಕೊಳ್ಳಿ.
  2. ತೊಳೆದ ಬೀಜವನ್ನು ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಅರೆದ ಮಿಶ್ರಣವನ್ನು ಶೋಧಿಸಿ,  ಹಾಲು ತೆಗೆದುಕೊಳ್ಳಿ. 
  4. ಹಾಗೆ ತೆಂಗಿನತುರಿ ಮತ್ತು ಜೀರಿಗೆಯನ್ನು ನೀರು ಸೇರಿಸಿ ಅರೆದಿಟ್ಟುಕೊಳ್ಳಿ. 
  5. ಶೋಧಿಸಿದ ಹಾಲು ಮತ್ತು ಅರೆದ ತೆಂಗಿನಕಾಯಿ ಪೇಸ್ಟ್ ನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಕುದಿಯಲು ಇಡೀ. 
  6. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. 
  7. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  8. ಸ್ಟವ್ ಆಫ್ ಮಾಡಿದ ಮೇಲೆ ಮಜ್ಜಿಗೆ ಸೇರಿಸಿ. 
  9. ಎಣ್ಣೆ, ಒಣಮೆಣಸು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಶುಕ್ರವಾರ, ನವೆಂಬರ್ 9, 2018

Avalakki nuchinunde recipe in Kannada | ಅವಲಕ್ಕಿ ನುಚ್ಚಿನುಂಡೆ ಮಾಡುವ ವಿಧಾನ

Avalakki nuchinunde recipe in Kannada

Avalakki nuchinunde recipe in Kannada | ಅವಲಕ್ಕಿ ನುಚ್ಚಿನುಂಡೆ ಮಾಡುವ ವಿಧಾನ

ಅವಲಕ್ಕಿ ನುಚ್ಚಿನುಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗಟ್ಟಿ ಅವಲಕ್ಕಿ 
  2. 1/4 ಕಪ್ ತೊಗರಿಬೇಳೆ 
  3. 1/4 ಕಪ್ ಕಡ್ಲೆಬೇಳೆ 
  4. 1 - 3 ಹಸಿರು ಮೆಣಸಿನಕಾಯಿ 
  5. 1/2 " ಉದ್ದದ ಶುಂಠಿ
  6. 5 - 6 ಕರಿಬೇವಿನ ಎಲೆ 
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  8. 1/4 ಕಪ್ ತೆಂಗಿನತುರಿ 
  9. ಒಂದು ದೊಡ್ಡ ಚಿಟಿಕೆ ಇಂಗು 
  10. ನಿಮ್ಮ ರುಚಿ ಪ್ರಕಾರ ಉಪ್ಪು

ಅವಲಕ್ಕಿ ನುಚ್ಚಿನುಂಡೆ ಮಾಡುವ ವಿಧಾನ:

  1. ಬೇಳೆಗಳನ್ನು ೪ ಘಂಟೆಗಳ ಕಾಲ ನೆನೆಸಿಡಿ. 
  2. ಅವಲಕ್ಕಿಯನ್ನು ಸಂಪೂರ್ಣ ಮೆತ್ತಗಾಗವವರೆಗೆ ನೆನೆಸಿ, ನೀರು ಬಗ್ಗಿಸಿಡಿ. 
  3. ಬೇಳೆಗಳು ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ. 
  4. ಅದಕ್ಕೆ ತೆಂಗಿನತುರಿ, ಶುಂಠಿ, ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  6. ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಅವಲಕ್ಕಿ ಮತ್ತು ರುಬ್ಬಿದ ಮಿಶ್ರಣ ತೆಗೆದುಕೊಳ್ಳಿ. 
  7. ಇಂಗು ಮತ್ತು ಉಪ್ಪು ಹಾಕಿ ಕಲಸಿ. 
  8. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್) ಮೆತ್ತಗಿನ ಮಿಶ್ರಣ ತಯಾರಿಸಿಕೊಳ್ಳಿ. 
  9. ಉಂಡೆಗಳನ್ನು ಮಾಡಿ, ಇಡ್ಲಿ ಪ್ಲೇಟ್ ನಲ್ಲಿಟ್ಟು ೧೦ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. 
  10. ಚಟ್ನಿ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ.


Related Posts Plugin for WordPress, Blogger...