ಬುಧವಾರ, ಅಕ್ಟೋಬರ್ 31, 2018

Southekai palya recipe in Kannada | ಸೌತೆಕಾಯಿ ಪಲ್ಯ ಮಾಡುವ ವಿಧಾನ

Southekai palya recipe in Kannada

Southekai palya recipe in Kannada | ಸೌತೆಕಾಯಿ ಪಲ್ಯ ಮಾಡುವ ವಿಧಾನ 

ಸೌತೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಸೌತೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ
  6. 1ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ಚಿಟಿಕೆ ಇಂಗು
  8. 3 - 4 ಕರಿಬೇವಿನ ಎಲೆ
  9. 1 ಒಣಮೆಣಸಿನಕಾಯಿ
  10. 1-2 ಹಸಿರು ಮೆಣಸಿನ ಕಾಯಿ
  11. 1/4 ಕಪ್ ತೆಂಗಿನ ತುರಿ
  12. 1 ಟೇಬಲ್ ಚಮಚ ಕೊತಂಬರಿ ಸೊಪ್ಪು
  13. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  14. ಉಪ್ಪು ರುಚಿಗೆ ತಕ್ಕಷ್ಟು
  15. 2 ಟೇಬಲ್ ಚಮಚ ನೀರು

ಸೌತೆಕಾಯಿ ಪಲ್ಯ ಮಾಡುವ ವಿಧಾನ:

  1. ಸೌತೆಕಾಯಿಯನ್ನು ಸಿಪ್ಪೆ ತೆಗೆದು, ತಿರುಳು ತೆಗೆದು, ಸಣ್ಣದಾಗಿ ಕತ್ತರಿಸಿ. ಅರ್ಧ ಸೌತೆಕಾಯಿ ಬಳಸಿದರೆ ಸಾಕು. 
  2. ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ, ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ.
  4. ಕತ್ತರಿಸಿದ ಸೌತೆಕಾಯಿ ಹಾಕಿ ಮಗುಚಿ. ಉಪ್ಪು, ಬೆಲ್ಲ ಮತ್ತು ನೀರು ಹಾಕಿ. 
  5. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
  6. ಸೌತೆಕಾಯಿ ಬೆಂದ ಮೇಲೆ (ಸುಮಾರು ಹತ್ತು ನಿಮಿಷ ಬೇಕಾಗುತ್ತದೆ), ತೆಂಗಿನತುರಿ, ಕೊತಂಬರಿ ಸೊಪ್ಪು ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಶುಕ್ರವಾರ, ಅಕ್ಟೋಬರ್ 26, 2018

Pudina chutney pudi recipe in Kannada | ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ

Pudina chutney pudi recipe in Kannada

Pudina chutney pudi recipe in Kannada | ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ 

ಪುದೀನಾ ಚಟ್ನಿ ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಪುದಿನಾ ಸೊಪ್ಪು
  2. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  3. 1/2 ಕಪ್ ಅಗಸೆ ಬೀಜ
  4. 1/2 ಕಪ್ ಕಡಲೆಬೇಳೆ 
  5. 1/2 ಕಪ್ ಉದ್ದಿನ ಬೇಳೆ 
  6. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  7. 1/4 ಟೀಸ್ಪೂನ್ ಇಂಗು
  8. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  9. 1 ಟೀಸ್ಪೂನ್ ಅಡುಗೆ ಎಣ್ಣೆ

ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ:

  1. ಪುದಿನ ಸೊಪ್ಪನ್ನು ಆರಿಸಿ, ತೊಳೆದು, ನೀರಾರಿಸಿಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿ ಮಾಡಿ. ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  3. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  4. ನಂತರ 1 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
  5. ನಂತರ ಪುದಿನ ಸೊಪ್ಪನ್ನು ಹಾಕಿ ಸಂಪೂರ್ಣ ನೀರಾರಿ, ಸೊಪ್ಪುಬಾಡುವವರೆಗೆ ಹುರಿಯಿರಿ.  
  6. ಅದಕ್ಕೆ ಒಣ ಕೊಬ್ಬರಿ ಸೇರಿಸಿ ಹುರಿಯಿರಿ. 
  7. ಹುರಿದಿಟ್ಟ ಪದಾರ್ಥಗಳನ್ನು ಸೇರಿಸಿ. 
  8. ಕೊನೆಯಲ್ಲಿ ಇಂಗು, ಉಪ್ಪು ಸಕ್ಕರೆ ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿದು ಸ್ಟವ್ ಆಫ್ ಮಾಡಿ. 
  9. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಗುರುವಾರ, ಅಕ್ಟೋಬರ್ 25, 2018

Badanekayi gojju recipe in Kannada | ಬದನೇಕಾಯಿ ಗೊಜ್ಜು ಮಾಡುವ ವಿಧಾನ

Badanekayi gojju recipe in Kannada

Badanekayi gojju recipe in Kannada | ಬದನೇಕಾಯಿ ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:

  1. 4 ಸಣ್ಣ ಬದನೇಕಾಯಿ 
  2. 1 ಈರುಳ್ಳಿ 
  3. 1 ದೊಡ್ಡ ಟೊಮೆಟೊ 
  4. 1 - 2 ಹಸಿರು ಮೆಣಸಿನಕಾಯಿ 
  5. 1/4 ಟೀಸ್ಪೂನ್ ಜೀರಿಗೆ
  6. 2 ಟೇಬಲ್ ಸ್ಪೂನ್ ಕೊತ್ತುಂಬರಿ ಸೊಪ್ಪು (ಬೇಕಾದಲ್ಲಿ) 
  7. ನೆಲ್ಲಿಕಾಯಿ ಗಾತ್ರದ ಬೆಲ್ಲ 
  8. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  9. 1/4 ಟೀಸ್ಪೂನ್ ಅರಶಿನ ಪುಡಿ
  10. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಉದ್ದಿನಬೇಳೆ
  3. ಒಂದು ಒಣಮೆಣಸಿನಕಾಯಿ
  4. 7 - 8 ಕರಿಬೇವು
  5. 7 - 8 ಎಸಳು ಬೆಳ್ಳುಳ್ಳಿ
  6. 1 ಈರುಳ್ಳಿ 
  7. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಬದನೇಕಾಯಿ ಗೊಜ್ಜು ಮಾಡುವ ವಿಧಾನ:

  1. ಬದನೆಕಾಯಿಯನ್ನು ಕತ್ತರಿಸಿ, ನೀರಿನಲ್ಲಿ ಹಾಕಿಡಿ.  ಈರುಳ್ಳಿ ಮತ್ತು ಟೊಮ್ಯಾಟೋವನ್ನು ಸಹ ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬದನೆಕಾಯಿ, ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. 
  3. ಬೆಲ್ಲ, ಹುಣಿಸೆರಸ ಮತ್ತು 1/4 ಕಪ್ ನೀರು ಸೇರಿಸಿ. 
  4. ಒಂದೆರಡು ವಿಷಲ್ ಮಾಡಿ ಬೇಯಿಸಿಕೊಳ್ಳಿ. 
  5. ಬೇಯಿಸಿದ ತರಕಾರಿಯನ್ನು ಚೆನ್ನಾಗಿ ಮಸೆದು ಕೊಳ್ಳಿ ಅಥವಾ ಮ್ಯಾಶ್ ಮಾಡಿಕೊಳ್ಳಿ. ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಲೂ ಬಹುದು.  
  6. ಈಗ ಒಂದು ಬಾಣಲೆ ತೆಗೆದು ಕೊಂಡು, ಎಣ್ಣೆ, ಸಾಸಿವೆ,ಉದ್ದಿನಬೇಳೆ ಮತ್ತು ಒಣಮೆಣಸಿನ ಒಗ್ಗರಣೆ ಮಾಡಿ. 
  7. ಅದಕ್ಕೆ ಕರಿಬೇವು ಮತ್ತು ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ.
  8. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  9. ಮಸೆದಿಟ್ಟ ತರಕಾರಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ. 
  10. ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಬುಧವಾರ, ಅಕ್ಟೋಬರ್ 17, 2018

Avalakki sweet pongal recipe in Kannada | ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ

Avalakki sweet pongal recipe in Kannada

Avalakki sweet pongal | ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ

ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ ವಿಡಿಯೋ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರುಬೇಳೆ
  2. 1 ಕಪ್ ಅವಲಕ್ಕಿ (ಮೀಡಿಯಂ ದಪ್ಪ)
  3. 3/4 ಕಪ್ ಬೆಲ್ಲ
  4. 1/4 ಕಪ್ ತೆಂಗಿನತುರಿ
  5. 1/2 ಕಪ್ ಹಾಲು
  6. 2 ಟೇಬಲ್ ಸ್ಪೂನ್ ತುಪ್ಪ
  7. 1 ಟೇಬಲ್ ಚಮಚ ಗೋಡಂಬಿ
  8. 1 ಟೇಬಲ್ ಚಮಚ ಒಣ ದ್ರಾಕ್ಷಿ
  9. ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  10. ದೊಡ್ಡ ಚಿಟಿಕೆ ಒಣಶುಂಠಿ ಪುಡಿ
  11. ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ)

ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ:

  1. ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
  2. ಒಂದು ಕುಕ್ಕರ್‌ನಲ್ಲಿ ಹುರಿದ ಬೇಳೆಯನ್ನು ಹಾಕಿ ಎರಡು ಬಾರಿ ತೊಳೆಯಿರಿ.
  3. ನಂತರ 1 ಕಪ್ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ. 
  4. ಆ ಸಮಯದಲ್ಲಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಒಂದು 1/2 ಕಪ್ ಬಿಸಿ ನೀರು ಮತ್ತು ಬೆಲ್ಲ ಹಾಕಿಡಿ. ಈ ಬೆಲ್ಲದ ನೀರನ್ನು ಆಮೇಲೆ ಬಳಸುತ್ತೇವೆ. 
  5. ಇನ್ನೊಂದು ಸಣ್ಣ ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆದು ಪಕ್ಕಕ್ಕಿಡಿ. ನೆನೆಸುವ ಅಗತ್ಯವಿಲ್ಲ. ಗಟ್ಟಿ ಅವಲಕ್ಕಿ ಆದಲ್ಲಿ ಐದು ನಿಮಿಷ ನೆನೆಸಿ. 
  6. ಬೇಳೆ ಬೆಂದ ಮೇಲೆ ಅದಕ್ಕೆ ತೊಳೆದಿಟ್ಟ ಅವಲಕ್ಕಿ ಹಾಕಿ. 
  7. ಬೆಲ್ಲದ ನೀರನ್ನು ಜರಡಿಯ ಮೂಲಕ ಸೋಸಿ ಹಾಕಿ.
  8. ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ), ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚಿ ಕುದಿಯಲು ಇಡೀ. 
  9. ಹಾಲನ್ನು ಸೇರಿಸಿ.
  10. ಅವಲಕ್ಕಿ ಪೊಂಗಲ್ ಬಿಸಿ ಆರಿದ ಮೇಲೆ ಗಟ್ಟಿ ಆಗುವುದರಿಂದ, ಸ್ವಲ್ಪ ನೀರು ಸೇರಿಸಿ ಕುದಿಸಿ. 
  11. ಏಲಕ್ಕಿ ಮತ್ತು ಒಣಶುಂಠಿ ಪುಡಿ ಸೇರಿಸಿ. 
  12. ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹುರಿಯಿರಿ. ಕುದಿಯುತ್ತಿರುವ ಸಿಹಿ ಪೊಂಗಲ್ ಗೆ ಹಾಕಿ ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಬಡಿಸಿ.

ಮಂಗಳವಾರ, ಅಕ್ಟೋಬರ್ 16, 2018

Maragenasu dose recipe in Kannada | ಮರ ಗೆಣಸು ದೋಸೆ ಮಾಡುವ ವಿಧಾನ

Maragenasu dose recipe in Kannada

Maragenasu dose recipe in Kannada | ಮರ ಗೆಣಸು ದೋಸೆ ಮಾಡುವ ವಿಧಾನ 

ಮರ ಗೆಣಸು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಕತ್ತರಿಸಿದ ಮರಗೆಣಸು
  3. 1 ಟೀಸ್ಪೂನ್ ಕೊತ್ತಂಬರಿ ಬೀಜ 
  4. 1/2 ಟೀಸ್ಪೂನ್ ಜೀರಿಗೆ 
  5. 1 - 2 ಕೆಂಪು ಮೆಣಸಿನಕಾಯಿ 
  6. 1 ಟೇಬಲ್ ಚಮಚ ಕತ್ತರಿಸಿದ ಕರಿಬೇವು 
  7. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  8. ದೊಡ್ಡ ಚಿಟಿಕೆ ಇಂಗು
  9. ಎಣ್ಣೆ ದೋಸೆ ಮಾಡಲು
  10. ಉಪ್ಪು ರುಚಿಗೆ ತಕ್ಕಷ್ಟು

ಮರ ಗೆಣಸು ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ಮರಗೆಣಸನ್ನು ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ.
  3. ಅಕ್ಕಿ ನೆನೆದ ನಂತರ ನೀರನ್ನು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ. 
  4. ಕತ್ತರಿಸಿದ ಮರಗೆಣಸು ಸೇರಿಸಿ. 
  5. ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  6. ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  7. ಹಿಟ್ಟಿಗೆ ಕತ್ತರಿಸಿದ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಇಂಗು ಸೇರಿಸಿ. 
  8. ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ. 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ. ನಂತರ, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿಯೊಂದಿಗೆ ಬಡಿಸಿ. 

ಬುಧವಾರ, ಅಕ್ಟೋಬರ್ 10, 2018

Baby potato snacks recipe in Kannada | ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ

Baby potato snacks recipe in Kannada

Baby potato snacks recipe in Kannada | ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ

ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 250gm ಬೇಬಿ ಪೊಟಾಟೋ ಅಥವಾ ಎಳೇ ಆಲೂಗಡ್ಡೆ
  2. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  3. 1 ಟೀಸ್ಪೂನ್ ಧನಿಯಾ ಪುಡಿ 
  4. 1/4 ಟೀಸ್ಪೂನ್ ಜೀರಿಗೆ ಪುಡಿ 
  5. 1/2 ಟೀಸ್ಪೂನ್ ಚಾಟ್ ಮಸಾಲಾ
  6. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  7. ಒಂದು ದೊಡ್ಡ ಚಿಟಿಕೆ ಇಂಗು 
  8. ಉಪ್ಪು ರುಚಿಗೆ ತಕ್ಕಷ್ಟು
  9. 4 - 5 ಕರಿಬೇವಿನ ಎಲೆ 
  10. 1 ಟೇಬಲ್ ಚಮಚ ಅಡುಗೆ ಎಣ್ಣೆ 

ಬೇಬಿ ಪೊಟಾಟೋ ಸ್ನಾಕ್ಸ್ ಮಾಡುವ ವಿಧಾನ:

  1. ಬೇಬಿ ಪೊಟಾಟೋವನ್ನು ತೊಳೆದು, ಒಂದು ಕುಕ್ಕರ್ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿಎರಡು ವಿಷಲ್ ಮಾಡಿದರೆ ಸಾಕು. 
  2. ನಂತ್ರ ಸಿಪ್ಪೆ ತೆಗೆದಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕರಿಬೇವು ಸೇರಿಸಿ. 
  4. ಅದಕ್ಕೆ ಸಿಪ್ಪೆ ತೆಗೆದ ಆಲೂಗಡ್ಡೆ ಸೇರಿಸಿ, ಎರಡು ನಿಮಿಷ ಹುರಿಯಿರಿ. 
  5. ಆಮೇಲೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ. 
  6. ಅರಿಶಿನ ಪುಡಿ, ಇಂಗು ಮತ್ತು ಉಪ್ಪನ್ನೂ ಸೇರಿಸಿ. 
  7. ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ.  ಟೊಮೇಟೊ ಸಾಸ್ ನೊಂದಿಗೆ ಸವಿದು ಆನಂದಿಸಿ. ಅನ್ನ ಅಥವಾ ಚಪಾತಿಯೊಂದಿಗೂ ಬಡಿಸಬಹುದು. 

ಸೋಮವಾರ, ಅಕ್ಟೋಬರ್ 8, 2018

Kitchen tips and tricks in kannada | ಅಡುಗೆಮನೆಯ ಉಪಯುಕ್ತ ಸಲಹೆಗಳು

Kitchen tips and tricks in kannada

Kitchen tips and tricks in kannada | ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು:

  1. ಹಸಿರುಮೆಣಸಿನಕಾಯಿಯನ್ನು ಕತ್ತರಿಯಲ್ಲಿ ಕತ್ತರಿಸಿ. ಇದರಿಂದ ಕೈ ಉರಿಯುವುದಿಲ್ಲ. 
  2. ನಿಂಬೆ ಹಣ್ಣನ್ನು ಚೆನ್ನಾಗಿ ತಿಕ್ಕಿ, ತೊಳೆದು ಆಮೇಲೆ ರಸ ತೆಗೆದರೆ, ರಸ ತೆಗೆಯಲೂ ಸುಲಭ ಮತ್ತು ಹೆಚ್ಚು ರಸವೂ ಬರುತ್ತದೆ. 
  3. ಶುಂಠಿ ಸಿಪ್ಪೆಯನ್ನು ಚಮಚದಲ್ಲಿ ತೆಗೆಯಿರಿ. 
  4. ಶುಂಠಿಯನ್ನು ಸಣ್ಣಗೆ ಕತ್ತರಿಸಲು, ತುರಿಯಿರಿ ಅಥವಾ ತೆಳುವಾದ ಚಕ್ರಮಾಡಿಕೊಂಡು ಜಜ್ಜಿ. 
  5. ಸಕ್ಕರೆಗೆ ಇರುವೆ ಬರದಿರಲು ನಾಲ್ಕೈದು ಲವಂಗ ಹಾಕಿ ಇಡೀ. 
  6. ಈರುಳ್ಳಿ ಭಾಗ ಮಾಡಿ, ಸಿಪ್ಪೆ ತೆಗೆದು, ಒಮ್ಮೆ ನೀರಿನಲ್ಲಿ ತೊಳೆದು, ಆಮೇಲೆ ಕತ್ತರಿಸುವುದರಿಂದ ಕಣ್ಣೀರು ಬರುವುದಿಲ್ಲ. 
  7. ಬೆಳ್ಳುಳ್ಳಿ ಗಡ್ಡೆಯನ್ನು ಚೆನ್ನಾಗಿ ಗುದ್ದಿದಲ್ಲಿ ಸಿಪ್ಪೆ ತೆಗೆಯಲು ಸುಲಭವಾಗುತ್ತದೆ (ಮೇಲೆ ಹಾಕಿದ ವಿಡಿಯೋ ನೋಡಿ)
  8. ಬೆಳ್ಳುಳ್ಳಿ ಬೇಳೆಯನ್ನು ಬಿಸಿ ನೀರಿಗೆ ಹಾಕಿ, ಒಂದೆರಡು ನಿಮಿಷ ಬಿಟ್ಟರೆ, ಸುಲಭವಾಗಿ ಸಿಪ್ಪೆ ತೆಗೆಯಬಹುದು. 

ಶುಕ್ರವಾರ, ಅಕ್ಟೋಬರ್ 5, 2018

Khara mandakki recipe in Kannada | ಖಾರ ಮಂಡಕ್ಕಿ ಮಾಡುವ ವಿಧಾನ

Khara mandakki recipe in Kannada

Khara mandakki recipe in Kannada | ಖಾರ ಮಂಡಕ್ಕಿ ಮಾಡುವ ವಿಧಾನ 

ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 200gm ಮಂಡಕ್ಕಿ
  2. 3 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  3. 3 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  4. 1 ಚಮಚ ಸಾಸಿವೆ 
  5. 1 ಚಮಚ ಜೀರಿಗೆ
  6. 1 ಒಣ ಮೆಣಸಿನಕಾಯಿ
  7. 1 - 2 ಹಸಿರು ಮೆಣಸಿನಕಾಯಿ
  8. 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  9. 1/4 ಟೀಸ್ಪೂನ್ ಅರಿಶಿನ ಪುಡಿ 
  10. 5 - 6 ಕರಿಬೇವಿನ ಎಲೆ 
  11. 2 ಟೇಬಲ್ ಚಮಚ ಎಣ್ಣೆ
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  2. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ. 
  3. ಸಾಸಿವೆ ಸಿಡಿದ ಮೇಲೆ ಒಣಮೆಣಸಿನ ಚೂರು, ಸೀಳಿದ ಹಸಿರುಮೆಣಸು, ಜಜ್ಜಿದ ಬೆಳ್ಳುಳ್ಳಿ ಮತ್ತು  ಕರಿಬೇವನ್ನು ಹಾಕಿ ಹುರಿಯಿರಿ. 
  4. ನಂತರ ಹುರಿಗಡಲೆ ಅಥವಾ ಪುಟಾಣಿ ಸೇರಿಸಿ ಹುರಿಯಿರಿ.
  5. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.  
  6. ನಂತರ ಮಂಡಕ್ಕಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.
  7. ಅಥವಾ ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ. 

Related Posts Plugin for WordPress, Blogger...