ಶನಿವಾರ, ಸೆಪ್ಟೆಂಬರ್ 29, 2018

Nimbe gojju recipe in Kannada | ನಿಂಬೆ ಗೊಜ್ಜು ಮಾಡುವ ವಿಧಾನ

Nimbe gojju recipe in Kannada

Nimbe gojju recipe in Kannada | ನಿಂಬೆ ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ವಿಧಾನ 1): (ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ 
  2. 1/2 ನಿಂಬೆ ಹಣ್ಣಿನ ರಸ
  3. 1 - 2 ಖಾರದ ಹಸಿರು ಮೆಣಸಿನಕಾಯಿ 
  4. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 2 ಟಿಸ್ಪೂನ್ ಎಣ್ಣೆ 
  2. 4 ಕರಿಬೇವಿನ ಎಲೆ
  3. 1/2 ಟಿಸ್ಪೂನ್ ಸಾಸಿವೆ 
  4. 1/2 ಟಿಸ್ಪೂನ್ ಅರಿಶಿನ
  5. ಒಂದು ಒಣ ಮೆಣಸು
  6. ಒಂದು ಚಿಟಿಕೆ ಇಂಗು

ನಿಂಬೆ ಗೊಜ್ಜು ಮಾಡುವ ವಿಧಾನ:

  1. ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  2. ಅದಕ್ಕೆ  ಹಸಿರುಮೆಣಸಿನ ಕಾಯಿ ಮತ್ತು ಉಪ್ಪು ಸೇರಿಸಿ ಪುನಃ ಅರೆಯಿರಿ. 
  3. ಒಂದು ಬಟ್ಟಲಿಗೆ ತೆಗೆದು, ನಿಂಬೆ ರಸ ಸೇರಿಸಿ ಕಲಸಿ. 
  4. ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸು, ಅರಿಶಿನ ಮತ್ತು ಇಂಗಿನ ಒಗ್ಗರಣೆ ಕೊಡಿ. 
  5. ಚೆನ್ನಾಗಿ ಕಲಸಿ ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಸೆಪ್ಟೆಂಬರ್ 28, 2018

Nuggekai palya recipe in Kannada | ನುಗ್ಗೆಕಾಯಿ ಪಲ್ಯ ಮಾಡುವ ವಿಧಾನ

Nuggekai palya recipe in Kannada

Nuggekai palya recipe in Kannada | ನುಗ್ಗೆಕಾಯಿ ಪಲ್ಯ ಮಾಡುವ ವಿಧಾನ 


ನುಗ್ಗೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 - 4 ನುಗ್ಗೆ ಕಾಯಿ
  2. 1 ಕತ್ತರಿಸಿದ ಈರುಳ್ಳಿ 
  3. 1 ಕತ್ತರಿಸಿದ ಟೊಮೇಟೊ 
  4.  1/2 ಟೀಸ್ಪೂನ್  ಸಾಸಿವೆ
  5.  1/2 ಟೀಸ್ಪೂನ್ ಜೀರಿಗೆ
  6. 7 - 8 ಕರಿಬೇವು
  7.  1/2 - 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  8.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  9. 1/4 ಟೀಸ್ಪೂನ್ ಅರಿಶಿನ ಪುಡಿ 
  10. ದೊಡ್ಡ ಚಿಟಿಕೆ ಇಂಗು
  11. 1/4 ಕಪ್ ತೆಂಗಿನತುರಿ
  12. 1 ಟೇಬಲ್ ಚಮಚ ಅಡುಗೆ ಎಣ್ಣೆ 
  13. ಉಪ್ಪು ರುಚಿಗೆ ತಕ್ಕಷ್ಟು

ನುಗ್ಗೆಕಾಯಿ ಪಲ್ಯ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. 
  2. ಸಾಸಿವೆ ಸಿಡಿದ ಮೇಲೆ ಕರಿಬೇವು ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. 
  3. ಆಮೇಲೆ ಸಣ್ಣಗೆ ಕತ್ತರಿಸಿದ ಟೊಮೇಟೊ ಹಾಕಿ ಬಾಡಿಸಿ. 
  4. ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಇಂಗು ಹಾಕಿ ಮಗುಚಿ.
  5. ಆಮೇಲೆ ಕತ್ತರಿಸಿದ ನುಗ್ಗೆಕಾಯಿಯನ್ನು ಹಾಕಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  7. 1/2 ಕಪ್ ನೀರು ಹಾಕಿ ನುಗ್ಗೆಕಾಯಿ ಮೆತ್ತಗಾಗುವವರೆಗೆ  ಬೇಯಿಸಿ. ಒಂದು ಹತ್ತು ನಿಮಿಷ ಸಾಕಾಗುತ್ತದೆ.  
  8. ಕೊನೆಯಲ್ಲಿ ತೆಂಗಿನತುರಿ ಹಾಕಿ ಮಗುಚಿ.
  9. ಸ್ಟವ್ ಆಫ್ ಮಾಡಿ. ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 25, 2018

Nimbe hannina saaru recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ

Nimbe hannina saaru recipe in Kannada

Nimbe hannina saaru recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ (ಅಥವಾ ಹೆಸರುಬೇಳೆ)
  2. 2 - ೩ ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. 2 ಕಪ್ ನೀರು
  4. 4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
  5. 1/4 ಚಮಚ ಅರಶಿನ ಪುಡಿ
  6. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಜೀರಿಗೆ 
  4. 1/4 ಟೀಸ್ಪೂನ್ ಮೆಂತೆ
  5. ಒಂದು ದೊಡ್ಡ ಚಿಟಿಕೆ ಇಂಗು 
  6. 7 - 8 ಕರಿಬೇವಿನ ಎಲೆ
  7. 1 ಟೇಬಲ್ ಚಮಚ ಅಡುಗೆ ಎಣ್ಣೆ

ನಿಂಬೆಹಣ್ಣಿನ ಸಾರು ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು ಒಂದು ಕಪ್ ನೀರು, ಒಂದೆರಡು ಹನಿ ಎಣ್ಣೆ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಬೇಯಿಸಿದ ಬೆಳೆಯನ್ನು ಸೌಟಿನ ಹಿಂಭಾಗದಿಂದ ಚೆನ್ನಾಗಿ ಮಸಿದುಕೊಳ್ಳಿ. 
  3. ಮಸಿದ ಬೇಳೆಗೆ ಇನ್ನೊಂದು ಕಪ್ ನೀರು, ಹಸಿರು ಮೆಣಸಿನ ಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. 
  4. ಕುದಿಯುವಾಗ ಕೊತ್ತಂಬರಿ ಸೊಪ್ಪು ಸೇರಿಸಿ. 
  5. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  6. ಸ್ಟವ್ ಆಫ್ ಮಾಡಿದ ಕೂಡಲೇ ಲಿಂಬೆ ಹಣ್ಣಿನ ರಸ ಸೇರಿಸಿ. 
  7. ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಮೆಂತೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಶನಿವಾರ, ಸೆಪ್ಟೆಂಬರ್ 15, 2018

5 minute tomato saru recipe in Kannada | 5 ನಿಮಿಷದಲ್ಲಿ ಟೊಮೇಟೊ ಸಾರು ಮಾಡುವ ವಿಧಾನ

5 minute tomato saru recipe in Kannada

5 minute tomato saru recipe in Kannada | 5 ನಿಮಿಷದಲ್ಲಿ ಟೊಮೇಟೊ ಸಾರು ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಟೊಮ್ಯಾಟೋ
  2. 1 ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  4. 1/2 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಸಾಸಿವೆ
  6. 1/4 ಟೀಸ್ಪೂನ್ ಮೆಂತೆ
  7. 1 ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
  8. ದೊಡ್ಡ ಚಿಟಿಕೆ ಇಂಗು
  9. ದೊಡ್ಡ ಚಿಟಿಕೆ ಅರಿಶಿನ
  10. 4-5 ಕರಿಬೇವಿನ ಎಲೆ
  11. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 1 ಟೀಸ್ಪೂನ್ ಸಾರಿನ ಪುಡಿ
  13. 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  14. ಉಪ್ಪು ರುಚಿಗೆ ತಕ್ಕಷ್ಟು.

5 ನಿಮಿಷದಲ್ಲಿ ಟೊಮೇಟೊ ಸಾರು ಮಾಡುವ ವಿಧಾನ:

  1. ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಬೇರೆ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಮೆಂತೆ ಸೇರಿಸಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ) ಮತ್ತು ಕರಿಬೇವಿನ ಸೊಪ್ಪು ಹಾಕಿ. 
  4. ನಂತರ ಇಂಗು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
  5. ಕತ್ತರಿಸಿದ ಟೊಮೆಟೊ, ಸ್ವಲ್ಪ ಉಪ್ಪು ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ.
  6. ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ. 
  7. ಕೊನೆಯಲ್ಲಿ ಸಾರಿನ ಪುಡಿ ಹಾಕಿ. 
  8. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. 
  9. ಬಿಸಿ ಅನ್ನದೊಂದಿಗೆ ಬಡಿಸಿ. 

ಗುರುವಾರ, ಸೆಪ್ಟೆಂಬರ್ 6, 2018

Karibevu soppina ricebath recipe in Kannada | ಕರಿಬೇವು ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ

 Karibevu soppina ricebath recipe in Kannada

Karibevu soppina ricebath recipe in Kannada | ಕರಿಬೇವು ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ 

ಕರಿಬೇವು ಸೊಪ್ಪು ರೈಸ್ ಬಾತ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 4 ಟೇಬಲ್ ಚಮಚ ಅಡುಗೆ ಎಣ್ಣೆ 
  3. 1/2 ಚಮಚ ಸಾಸಿವೆ 
  4. 1 ಟೀಸ್ಪೂನ್ ಉದ್ದಿನ ಬೇಳೆ 
  5. 1 ಟೀಸ್ಪೂನ್ ಕಡಲೆಬೇಳೆ 
  6. 4 - 5 ಕರಿಬೇವಿನ ಎಲೆ 
  7. 2 ಟೇಬಲ್ ಚಮಚ ನೆಲಗಡಲೆ
  8. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  9. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
  10. 1/4 ಟೀಸ್ಪೂನ್ ಅರಶಿನ ಪುಡಿ
  11. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಕಪ್ ತೆಂಗಿನ ತುರಿ

ಕರಿಬೇವು ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  2. ನಂತರ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಬೇಕು. 
  3. ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕೊತ್ತಂಬರಿ ಬೀಜ ಹುರಿದು ಪುಡಿಮಾಡಿ. 
  4. ನಂತ್ರ ಅದಕ್ಕೆ ತೆಂಗಿನತುರಿ ಸೇರಿಸಿ ಪುನಃ ಹುಡಿ ಮಾಡಿ ತೆಗೆದಿಟ್ಟು ಕೊಳ್ಳಿ. 
  5. ಆಮೇಲೆ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  6. ನೆಲಗಡಲೆ ಹಾಕಿ ಹುರಿಯಿರಿ. 
  7. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  8. ಕರಿಬೇವು ಮತ್ತು ಅರಿಶಿನ ಪುಡಿ ಸೇರಿಸಿ. 
  9. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
  10. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  11. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಸೆಪ್ಟೆಂಬರ್ 4, 2018

Madli recipe in Kannada | ಮಾದ್ಲಿ ಮಾಡುವ ವಿಧಾನ

Madli recipe in Kannada

Madli recipe in Kannada | ಮಾದ್ಲಿ ಮಾಡುವ ವಿಧಾನ

ಮಾದ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1 ಟೇಬಲ್ ಚಮಚ ಕಡ್ಲೆಹಿಟ್ಟು
  3. 1/2 ಕಪ್ ಬೆಲ್ಲ
  4. 2 ಟೇಬಲ್ ಚಮಚ ಕೊಬ್ಬರಿ ತುರಿ
  5. 1 ಟೇಬಲ್ ಚಮಚ ಹುರಿದ ಗಸಗಸೆ
  6. 2 ಟೇಬಲ್ ಚಮಚ ಹುರಿಗಡಲೆ ಅಥವಾ ಪುಟಾಣಿ
  7. ಎರಡು ಏಲಕ್ಕಿ ಜಜ್ಜಿದ್ದು

ಮಾದ್ಲಿ ಮಾಡುವ ವಿಧಾನ:

  1. ಗೋಧಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಕಡ್ಲೆಹಿಟ್ಟನ್ನು ಸೇರಿಸಿ. 
  3. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ. 
  4. ನಿಂಬೆಗಾತ್ರದ ಉಂಡೆ ಮಾಡಿ ಸ್ವಲ್ಪ ದಪ್ಪನಾದ ಚಪಾತಿ ಮಾಡಿ.   
  5. ಬಿಸಿ ಆರಿದ ಮೇಲೆ ಚಪಾತಿಗಳನ್ನು ಚೂರು ಮಾಡಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ.
  6.  ಅದಕ್ಕೆ ಪುಡಿಮಾಡಿದ ಬೆಲ್ಲ ಮತ್ತು ಜಜ್ಜಿದ ಏಲಕ್ಕಿ ಸೇರಿಸಿ, ಪುನಃ ಪುಡಿ ಮಾಡಿ.  
  7. ಒಂದು ಪಾತ್ರೆಗೆ ಪುಡಿ ಮಾಡಿದ ಮಿಶ್ರಣ ಹಾಕಿ. 
  8. ಮೇಲಿನಿಂದ ಹುರಿದ ಗಸಗಸೆ  ಮತ್ತು ಕೊಬ್ಬರಿ ತುರಿ ಹಾಕಿ. 
  9. ಹುರಿಗಡಲೆ ಸೇರಿಸಿ, ಚೆನ್ನಾಗಿ ಕಲಸಿ. 
  10. ತುಪ್ಪ ಮತ್ತು ಹಾಲಿನೊಂದಿಗೆ ಅಥವಾ ಹಾಗೆ ಬಡಿಸಿ. 


ಸೋಮವಾರ, ಸೆಪ್ಟೆಂಬರ್ 3, 2018

Bread paddu recipe in kannada | ಬ್ರೆಡ್ ಪಡ್ದು ಮಾಡುವ ವಿಧಾನ

Bread paddu recipe in kannada

Bread paddu recipe in kannada | ಬ್ರೆಡ್ ಪಡ್ದು ಮಾಡುವ ವಿಧಾನ 

ಬ್ರೆಡ್ ಪಡ್ಡು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಸ್ಲೈಸ್ ಬ್ರೆಡ್
  2. 1/4 ಕಪ್ ರವೆ
  3. 1/4 ಕಪ್ ಅಕ್ಕಿ ಹಿಟ್ಟು
  4. 1/4 ಕಪ್ ಹುಳಿ ಮೊಸರು
  5. 1 ಸಣ್ಣ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  6. 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  8. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. ಎಣ್ಣೆ ಪಡ್ಡು ಮಾಡಲು 
  10. ಉಪ್ಪು ರುಚಿಗೆ ತಕ್ಕಷ್ಟು.

ಬ್ರೆಡ್ ಪಡ್ದು ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರ್ ನಲ್ಲಿ ಬ್ರೆಡ್ನ್ನು ತೆಗೆದುಕೊಳ್ಳಿ.
  2. ಅದಕ್ಕೆ ರವೆಯನ್ನು ಸೇರಿಸಿ. 
  3. ಅಕ್ಕಿ ಹಿಟ್ಟನ್ನು ಸೇರಿಸಿ. 
  4. ಮೊಸರು ಸೇರಿಸಿ
  5. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  6. ಅಗತ್ಯವಿದ್ದಷ್ಟು ನೀರು ಸೇರಿಸಿ ತರಿತರಿಯಾಗಿ ಅರೆಯಿರಿ. 
  7. ನಂತ್ರ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕಲಸಿ.
  8. ಹಿಟ್ಟು ದಪ್ಪ ದೋಸೆ ಹಿಟ್ಟಿನಂತಿರಬೇಕು. ಅಗತ್ಯವಿದ್ದಲ್ಲಿ ನೀರು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. 
  9. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  10. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಸಣ್ಣ-ಮಧ್ಯಮ ಉರಿಯಲ್ಲಿ ಬೇಯಿಸಿ. 
  11. ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  12. ಪಡ್ಡುವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ. 


Related Posts Plugin for WordPress, Blogger...