Soft chapathi recipe in Kannada | ಮೃದುವಾದ ಚಪಾತಿ ಮಾಡುವ ವಿಧಾನ
ಮೃದುವಾದ ಚಪಾತಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು (4 ದೊಡ್ಡ ಚಪಾತಿಗಾಗುವಷ್ಟು)
- 1/4 ಕಪ್ ಹಾಲು
- 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಅಗತ್ಯವಿದ್ದಷ್ಟು ನೀರು
ಮೃದುವಾದ ಚಪಾತಿ ಮಾಡುವ ವಿಧಾನ:
- ಗೋಧಿ ಹಿಟ್ಟು ಮತ್ತು ಉಪ್ಪನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಬೆಚ್ಚಗಿನ ಹಾಲು ಹಾಕಿ ಕಲಸಲು ಪ್ರಾರಂಭಿಸಿ.
- ನಂತ್ರ ಅಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ.
- ಕೊನೆಯಲ್ಲಿ ಎಣ್ಣೆ ಸೇರಿಸಿ ಪುನಃ ಕಲಸಿ.
- ಒಂದು ಗಂಟೆ ನೆನೆಯಲು ಬಿಡಿ.
- ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರವಾಗಿ ಲಟ್ಟಿಸಿ.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ.
- ಖಾಯಿಸಿ ತೆಗೆದ ಮೇಲೆ ಎರಡೂ ಬದಿಯೂ ಸ್ವಲ್ಪ ತುಪ್ಪ ಹಚ್ಚಿ. ನಿಮ್ಮಿಷ್ಟದ ಗೊಜ್ಜಿನೊಂದಿಗೆ ಬಡಿಸಿ.