Heralekai gojju huli recipe in Kannada | ಹೇರಳೇಕಾಯಿ ಗೊಜ್ಜುಹುಳಿ ಮಾಡುವ ವಿಧಾನ
ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಹೇರಳೇಕಾಯಿ ಅಥವಾ ಕಂಚಿಕಾಯಿ
- 1 ಚಿಟಿಕೆ ಅರಿಶಿನ ಪುಡಿ
- ಬೆಲ್ಲ 2 ದೊಡ್ಡ ನಿಂಬೆಹಣ್ಣಿನ ಗಾತ್ರ
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
- 2 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 5 - 6 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಇಂಗು
- 1 ಕಪ್ ತೆಂಗಿನ ತುರಿ
- 3 ಟೀಸ್ಪೂನ್ ಎಳ್ಳು
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸಿನಕಾಯಿ (ಬೇಕಾದಲ್ಲಿ)
- 4 - 5 ಕರಿಬೇವಿನ ಎಲೆ
- 4 ಟೀಸ್ಪೂನ್ ಅಡುಗೆ ಎಣ್ಣೆ
ಹೇರಳೇಕಾಯಿ ಗೊಜ್ಜುಹುಳಿ ಮಾಡುವ ವಿಧಾನ:
- ಹೇರಳೇಕಾಯಿಯನ್ನು ಹೊರಗಿನ ತೆಳುವಾದ ಸಿಪ್ಪೆ ತೆಗೆದು, ಕತ್ತರಿಸಿ, ರಸ ತೆಗೆಯಿರಿ. ರಸವನ್ನು ಆಮೇಲೆ ಸೇರಿಸಲಾಗಿದೆ.
- ಬೀಜ ತೆಗೆದು, ಸಣ್ಣಗೆ ಕತ್ತರಿಸಿ.
- ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳನ್ನು ಹುರಿದು ತೆಗೆದಿಡಿ.
- ನಂತರ ಅದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ನಂತರ ಉದ್ದಿನ ಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಒಣಮೆಣಸು ಮತ್ತು ಇಂಗು ಹಾಕಿ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ.
- ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ.
- ನಂತರ ಬಾಣಲೆಯಲ್ಲಿ ಕತ್ತರಿಸಿದ ಹೇರಳೇಕಾಯಿ ಹಾಕಿ, ಒಂದೆರಡು ನಿಮಿಷ ಹುರಿಯಿರಿ.
- ನಂತರ ಅರಿಶಿನ, ಉಪ್ಪು, ಬೆಲ್ಲ ಮತ್ತು ತೆಗೆದಿಟ್ಟ ರಸ ಹಾಕಿ.
- ಅಗತ್ಯವಿದ್ದಷ್ಟು ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ.
- ಬೇಯಿಸಿದ ಹೇರಳೇಕಾಯಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಬೆಲ್ಲ ಹೊಂದಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ.
- ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.