Gudanna or kayanna recipe in Kannada | ಗುಡಾನ್ನಮಾಡುವ ವಿಧಾನ
Gudanna video Kannada
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ
- 1/2 ಕಪ್ ಪುಡಿ ಮಾಡಿದ ಬೆಲ್ಲ (ರುಚಿಗೆ ಬದಲಾಯಿಸಿ)
- 1/2 ಕಪ್ ತೆಂಗಿನ ತುರಿ
- 1 ಟೇಬಲ್ ಚಮಚ ಒಣ ದ್ರಾಕ್ಷಿ
- 1 ಟೇಬಲ್ ಚಮಚ ಗೋಡಂಬಿ
- 1 ಟೇಬಲ್ ಚಮಚ ತುಪ್ಪ
- 2 ಏಲಕ್ಕಿ
- 1.25 ಕಪ್ ನೀರು ಅನ್ನಕ್ಕೆ
- 1 ಕಪ್ ನೀರು ಬೆಲ್ಲ ಕರಗಿಸಲು
ಗುಡಾನ್ನ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು ಎರಡೂವರೆ ಪಟ್ಟು (1.25 ಕಪ್) ನೀರು ಸೇರಿಸಿ ಬೇಯಿಸಿಕೊಳ್ಳಿ. ಆದರೆ ಅನ್ನ ಮುದ್ದೆಯಾಗದಿರಲಿ.
- ಒಂದು ಬಾಣಲೆಯಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಒಂದು ಟೇಬಲ್ ಚಮಚ ತುಪ್ಪದಲ್ಲಿ ಹುರಿದು ತೆಗೆದಿಡಿ.
- ನಂತರ ಅದೇ ಬಾಣಲೆಗೆ ಬೆಲ್ಲ ಮತ್ತು ನೀರು ಸೇರಿಸಿ, ಕುದಿಸಿ. (ಬೇಕಾದಲ್ಲಿ ಬೆಲ್ಲ ಕರಗಿದ ಮೇಲೆ ಶೋಧಿಸಿ.)
- ನಂತ್ರ ಅದಕ್ಕೆ ಬೇಯಿಸಿದ ಅನ್ನ ಮತ್ತು ಕಾಯಿತುರಿ ಹಾಕಿ. ಮಧ್ಯಮ ಉರಿಯಲ್ಲಿ ಹೆಚ್ಚಿನ ನೀರಿನಂಶ ಹೋಗುವವರೆಗೆ ಮಗುಚಿ.
- ಕೊನೆಯಲ್ಲಿ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ.
- ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ.