ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ತೆಗೆದುಕೊಂಡು ಮೆತ್ತಗಾಗುವವರೆಗೆ ಹುರಿಯಿರಿ.
ಬಿಸಿ ಆರಿದ ಮೇಲೆ ತಯಾರಿಸಿದ ಹಿಟ್ಟಿಗೆ ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ತೆಳ್ಳನೆ ಹಿಟ್ಟು ತಯಾರಿಸಿಕೊಳ್ಳಿ.
ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
Mango ginger chutney recipe in Kannada | ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ವಿಧಾನ 1): (ಅಳತೆ ಕಪ್ = 240 ಎಂಎಲ್ )
1/2 ಕಪ್ ತೆಂಗಿನ ತುರಿ
ಒಂದು ಬೆರಳುದ್ದ ಮಾವಿನಕಾಯಿ ಶುಂಠಿ
1 - 2 ಹಸಿರು ಮೆಣಸಿನಕಾಯಿ
ಸ್ವಲ್ಪ ಹುಣಿಸೆ ಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಟಿಸ್ಪೂನ್ ಎಣ್ಣೆ
4 ಕರಿಬೇವಿನ ಎಲೆ
1/4 ಟಿಸ್ಪೂನ್ ಸಾಸಿವೆ
ಒಂದು ಒಣ ಮೆಣಸು (ಬೇಕಾದಲ್ಲಿ)
ಒಂದು ಚಿಟಿಕೆ ಇಂಗು
ಬೇಕಾಗುವ ಪದಾರ್ಥಗಳು (ವಿಧಾನ 2): (ಅಳತೆ ಕಪ್ = 240 ಎಂಎಲ್ )
1/2 ಕಪ್ ತೆಂಗಿನ ತುರಿ
ಒಂದು ಬೆರಳುದ್ದ ಮಾವಿನಕಾಯಿ ಶುಂಠಿ
ಸ್ವಲ್ಪ ಹುಣಿಸೆ ಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಟಿಸ್ಪೂನ್ ಎಣ್ಣೆ
2 ಟಿಸ್ಪೂನ್ ಉದ್ದಿನಬೇಳೆ
1/4 ಟಿಸ್ಪೂನ್ ಸಾಸಿವೆ
ಎರಡು ಒಣ ಮೆಣಸು
ಒಂದು ಚಿಟಿಕೆ ಇಂಗು
ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ - ವಿಧಾನ ೧:
ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಹಸಿರುಮೆಣಸಿನ ಕಾಯಿ, ಸ್ವಚ್ಛಗೊಳಿಸಿದ ಮಾವಿನಕಾಯಿ ಶುಂಠಿ ಮತ್ತು ಉಪ್ಪು ಹಾಕಿ.
ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು, ಒಣ ಮೆಣಸು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ - ವಿಧಾನ ೨:
ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಸ್ವಚ್ಛಗೊಳಿಸಿದ ಮಾವಿನಕಾಯಿ ಶುಂಠಿ ಮತ್ತು ಉಪ್ಪು ಹಾಕಿ.
ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
ಸಾಸಿವೆ, ಉದ್ದಿನಬೇಳೆ, ಒಣ ಮೆಣಸು ಮತ್ತು ಇಂಗಿನ ಒಗ್ಗರಣೆ ಮಾಡಿ. ಚಟ್ನಿ ಇರುವ ಮಿಕ್ಸಿ ಜಾರಿಗೆ ಹಾಕಿ ಪುನಃ ಅರೆಯಿರಿ. ಒಂದು ಬಟ್ಟಲಿಗೆ ತೆಗೆಯಿರಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ನಂತರ ಅಚ್ಚಖಾರದ ಪುಡಿ, ಇಂಗು, ಓಂಕಾಳು ಮತ್ತು ಉಪ್ಪನ್ನು ಹಾಕಿ ಕಲಸಿ.
ತೆಂಗಿನ ತುರಿ ಮತ್ತು ಸಣ್ಣಗೆ ಕತ್ತರಿಸಿದ ಕರಿಬೇವು ಸೇರಿಸಿ ಕಲಸಿ.
ನಂತ್ರ 2 ಟೇಬಲ್ ಚಮಚ ಬಿಸಿ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ಒತ್ತಿ ಕಲಸಿ.
ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಹಿಟ್ಟು ಮೆತ್ತಗಿದ್ದರೆ ನಿಪ್ಪಟ್ಟು ಗರಿಗರಿಯಾಗುವುದಿಲ್ಲ.
ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ನಿಪ್ಪಟ್ಟು ಮಾಡಿ.
ಎಣ್ಣೆ ಬಿಸಿ ಮಾಡಿ ನಿಪ್ಪಟ್ಟನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.
Suvarna gadde sambar recipe in Kannada | ಸುವರ್ಣ ಗಡ್ಡೆ ಸಾಂಬಾರ್ ಮಾಡುವ ವಿಧಾನ
ಸುವರ್ಣ ಗಡ್ಡೆ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1/2 kg ಸುವರ್ಣ ಗಡ್ಡೆ
4 ಟೇಬಲ್ ಚಮಚ ತೊಗರಿಬೇಳೆ
1/4 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ, ಹಾಕಿದರೆ ಒಳ್ಳೆಯದು)
ಗೋಲಿ ಗಾತ್ರದ ಹುಣಿಸೇಹಣ್ಣು
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/ ಕಪ್ ತೆಂಗಿನ ತುರಿ
2 - 4 ಕೆಂಪು ಮೆಣಸಿನಕಾಯಿ
1.5 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/4 ಟೀಸ್ಪೂನ್ ಜೀರಿಗೆ
7 - 8 ಮೆಂತ್ಯ ಕಾಳು (ಬೇಕಾದಲ್ಲಿ)
ಒಂದು ಚಿಟಿಕೆ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ಸುವರ್ಣ ಗಡ್ಡೆ ಸಾಂಬಾರ್ ಮಾಡುವ ವಿಧಾನ:
ಸುವರ್ಣ ಗಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಬೇಳೆಯನ್ನು ಬೇಯಿಸಿ.
ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಸುವರ್ಣ ಗಡ್ಡೆ, ಸ್ವಲ್ಪ ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಹಾಕಿ. 1 ಲೋಟ ನೀರು ಹಾಕಿ ಒಂದು ವಿಷಲ್ ಮಾಡಿ. ಸುವರ್ಣ ಗಡ್ಡೆ ಬೇಗ ಬೇಯುವುದರಿಂದ ವಿಷಲ್ ಮಾಡದೇ ಹಾಗೇ ಸಹ ಬೇಯಿಸಬಹುದು.
ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ.
ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ.
ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Ananas kesari bath recipe in Kannada | ಅನಾನಸ್ ಕೇಸರಿಬಾತ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್)
1 ಕಪ್ ಮಧ್ಯಮ ರವೆ ಅಥವಾ ಉಪ್ಪಿಟ್ಟು ರವೇ
1 ಕಪ್ ಸಣ್ಣಗೆ ಹೆಚ್ಚಿದ ಅನಾನಸ್
2.5 ಕಪ್ ನೀರು
1.25 ಕಪ್ ಸಕ್ಕರೆ
0.25 - 0.5 ಕಪ್ ತುಪ್ಪ (1 ಕಪ್ ವರೆಗೆ ಹಾಕಬಹುದು)
ಚಿಟಿಕೆ ಕೇಸರಿ ದಳ ಅಥವಾ ಬಣ್ಣ ಅಥವಾ ಅರಶಿನ ಪುಡಿ
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
5-6 ಗೋಡಂಬಿ
8-10 ಒಣ ದ್ರಾಕ್ಷಿ (ಬೇಕಾದಲ್ಲಿ)
ಅನಾನಸ್ ಕೇಸರಿಬಾತ್ ಪಾಕವಿಧಾನ:
ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಮತ್ತು ಹೆಚ್ಚಿದ ಅನಾನಸ್ ಹಣ್ಣು ಹಾಕಿ ಹುರಿಯಿರಿ.
ಅದಕ್ಕೆ ಸಕ್ಕರೆ, ಕೇಸರಿ ದಳ, ನೀರು ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ.
ಇನ್ನೊಂದು ಬಾಣಲೆಯಲ್ಲಿ ಉಳಿದ ತುಪ್ಪ, ಗೋಡಂಬಿ, ದ್ರಾಕ್ಷಿ(ಬೇಕಾದಲ್ಲಿ) ಮತ್ತು ರವೇ ಹಾಕಿ ಹುರಿಯಲು ಪ್ರಾರಂಭಿಸಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ.
ಒಳ್ಳೆಯ ಘಮ ಅಥವಾ ರವೆ ಅಲ್ಲಲ್ಲಿ ಬಿಳಿಯಾದಾಗ ಉರಿ ತಗ್ಗಿಸಿ.
ಇಷ್ಟರೊಳಗೆ ಇನ್ನೊಂದು ಬಾಣಲೆಯ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ.
ಚೆನ್ನಾಗಿ ಮಗುಚಿ. ದಪ್ಪ ಪೇಸ್ಟ್ ನ ಹದಕ್ಕೆ ಬಂದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ. ನೆನಪಿಡಿ ೪ - ೫ ನಿಮಿಷದೊಳಗೆ ಪೇಸ್ಟ್ ನ ಹದಕ್ಕೆ ಬರುತ್ತದೆ. ಬಿಸಿ ಅಥವಾ ತಣ್ಣಗೆ ಬಡಿಸಿ.
Shenga or Kadlekai chutney recipe in Kannada | ಶೇಂಗಾ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
2-4 ಒಣ ಮೆಣಸಿನಕಾಯಿ
3 - 4 ಬೇಳೆ ಬೆಳ್ಳುಳ್ಳಿ
3 - 4 ಕರಿಬೇವಿನ ಎಲೆ
1/4 ಕಪ್ ತೆಂಗಿನ ತುರಿ
ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1/2 ಟೀಸ್ಪೂನ್ ಸಾಸಿವೆ
1 ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ
3 - 4 ಕರಿಬೇವಿನ ಎಲೆ
2 ಟೀಸ್ಪೂನ್ ಅಡುಗೆ ಎಣ್ಣೆ
ಶೇಂಗಾ ಚಟ್ನಿ ಮಾಡುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಅರ್ಧ ಕಪ್ ಶೇಂಗಾ ಅಥವಾ ನೆಲಗಡಲೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. (ಗಮನಿಸಿ, ಶೇಂಗಾ ಮತ್ತು ತೆಂಗಿನ ತುರಿಯ ಪ್ರಮಾಣವನ್ನು ನಿಮ್ಮಿಷ್ಟದಂತೆ ಬದಲಾಯಿಸಬಹುದು.)
ನೆಲಗಡಲೆ ಕಂದು ಬಣ್ಣಕ್ಕೆ ತಿರುಗಿ, ಗರಿ-ಗರಿಯಾದಾಗ ಒಣಮೆಣಸು ಮತ್ತು ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದೆರಡು ನಿಮಿಷ ಹುರಿಯಿರಿ.
ಕೊನೆಯಲ್ಲಿ ಕರಿಬೇವು ಮತ್ತು ತೆಂಗಿನ ತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.
ಉಪ್ಪು, ಹುಣಿಸೇಹಣ್ಣು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ.
ಅದನ್ನು ಒಂದು ಬಟ್ಟಲಿಗೆ ಹಾಕಿ. ಈ ಚಟ್ನಿ ಸ್ವಲ್ಪ ತೆಳ್ಳಗಿರಬೇಕು. ಅಗತ್ಯವಿದ್ದಷ್ಟು ನೀರು ಸೇರಿಸಿ.
ಎಣ್ಣೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.