ಶನಿವಾರ, ಜುಲೈ 31, 2021

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

 

Uddina happala recipe in Kannada

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

ಉದ್ದಿನ ಹಪ್ಪಳ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಉದ್ದಿನಬೇಳೆ
  2. ಅಗತ್ಯವಿದ್ದಷ್ಟು ನೀರು
  3. 1/4 ಟೀಸ್ಪೂನ್ ಉಪ್ಪು
  4. 1/4 ಟೀಸ್ಪೂನ್ ಸೋಡಾ
  5. ಕಾಯಿಸಲು ಎಣ್ಣೆ

ಉದ್ದಿನ ಹಪ್ಪಳ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಉದ್ದಿನಬೇಳೆ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಜರಡಿ ಹಿಡಿದುಕೊಳ್ಳಿ. 
  2. ನಂತ್ರ ಆ ಹಿಟ್ಟಿಗೆ ಉಪ್ಪು ಮತ್ತು ಸೋಡಾ ಹಾಕಿ ಕಲಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟು ಕಲಸಿ. 
  4. ಒಂದು ಕುಟ್ಟಾಣಿ ತೆಗೆದುಕೊಂಡು ಹಿಟ್ಟನ್ನು ಚೆನ್ನಾಗಿ ಗುದ್ದಿ ಮೃದು ಮಾಡಿಕೊಳ್ಳಿ. 
  5. ಸಣ್ಣ ಉಂಡೆ ತೆಗೆದುಕೊಂಡು, ತೆಳ್ಳಗೆ ಲಟ್ಟಿಸಿ. 
  6. ಒಂದು ಬಟ್ಟಲಿನಿಂದ ಒತ್ತಿ, ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.  
  7. ಹತ್ತಿಯ ಬಟ್ಟೆ ಮೇಲೆ ಒಂದೆರಡು ಘಂಟೆ ಗಾಳಿಯಾಡಲು ಬಿಡಿ. ಬಿಸಿಲಿನಲ್ಲಿ ಒಣಗಿಸಬಾರದು.  
  8. ಎಣ್ಣೆಯಲ್ಲಿ ಕಾಯಿಸಿ. ಲಟ್ಟಿಸಿದ ಕೂಡಲೆಯೂ ಕಾಯಿಸಬಹುದು.  
  9. ಚೆನ್ನಾಗಿ ನೆರಳಿನಲ್ಲಿ ಒಣಗಿಸಿದರೆ ಒಂದು ತಿಂಗಳು ಹಾಳಾಗುವುದಿಲ್ಲ. 
  10. ಸವಿದು ಆನಂದಿಸಿ. 


ಮಂಗಳವಾರ, ಜುಲೈ 20, 2021

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

  

Godhi hittina unde recipe in Kannada

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

ಗೋಧಿ ಹಿಟ್ಟಿನ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿಹಿಟ್ಟು
  2. 1/2 ಕಪ್ ನೀರು
  3. 3/4 ಕಪ್ ಬೆಲ್ಲ
  4. 3 ಟೀಸ್ಪೂನ್ ತುಪ್ಪ (ಬೇಕಾದಲ್ಲಿ ಜಾಸ್ತಿ ಹಾಕಬಹುದು)
  5. 2 - 3 ಟೇಬಲ್ ಚಮಚ ಚೂರು ಮಾಡಿದ ಗೋಡಂಬಿ
  6. ಎರಡು ಏಲಕ್ಕಿ (ಅಥವಾ ದೊಡ್ಡ ಚಿಟಿಕೆ ಏಲಕ್ಕಿ ಪುಡಿ)

ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  2. ಅದಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಹುರಿಯಿರಿ. 
  3. ನಂತ್ರ ಅದೇ ಬಾಣಲೆಗೆ ಗೋಧಿ ಹಿಟ್ಟು ಹಾಕಿ. 
  4. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿ, ಒಳ್ಳೆ ಘಮ ಬರುವವರೆಗೆ ಹುರಿಯಿರಿ. 
  5. ಹುರಿದ ಹಿಟ್ಟು ಮತ್ತು ಗೋಡಂಬಿಯನ್ನು ಒಂದು ಪ್ಲೇಟ್ ನಲ್ಲಿ ತೆಗೆದುಕೊಂಡು, ಏಲಕ್ಕಿ ಪುಡಿ ಸೇರಿಸಿ ಪಕ್ಕಕ್ಕಿಡಿ. 
  6. ಪುನಃ ಅದೇ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಳ್ಳಿ. 
  7. ಆಗಾಗ್ಯೆ ಮಗುಚುತ್ತಾ ಕುದಿಸಿ.  
  8. ಬೆಲ್ಲ ಕರಗಿ ಚೆನ್ನಾಗಿ ನೊರೆ ಬಂದು ಕುದಿಯಲು ಪ್ರಾರಂಭವಾದಾಗ ಸ್ಟವ್ ಆಫ್ ಮಾಡಿ. 
  9. ಹುರಿದ ಗೋಧಿ ಹಿಟ್ಟಿಗೆ ಸೇರಿಸಿ. 
  10. ಚೆನ್ನಾಗಿ ಕಲಸಿ. 
  11. ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆ ಮಾಡಿ. ಸವಿದು ಆನಂದಿಸಿ. 


ಗುರುವಾರ, ಜುಲೈ 15, 2021

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ

 

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ 

ಕುಟ್ಟವಲಕ್ಕಿ ವಿಡಿಯೋ

ಪುಡಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೀಡಿಯಂ ಅವಲಕ್ಕಿ
  2. 4 - 5 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಚಮಚ ಒಣಕೊಬ್ಬರಿ ಪುಡಿ ಅಥವಾ ತುರಿ
  6. 2 ಟೀಸ್ಪೂನ್ ಬೆಲ್ಲ
  7. 1/2 ಟೀಸ್ಪೂನ್ ಹುಣಿಸೆಹಣ್ಣಿನ ಪೇಸ್ಟ್ (ಅಥವಾ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು)
  8. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಎಣ್ಣೆ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  5. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  6. 2 ಟೇಬಲ್ ಚಮಚ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
  7. 5 - 6 ಕರಿಬೇವಿನ ಎಲೆ 
  8. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 2 ದೊಡ್ಡ ಚಿಟಿಕೆ ಇಂಗು

ಕುಟ್ಟವಲಕ್ಕಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕೊಬ್ಬರಿ ತುರಿ (ಅಥವಾ ಕೊಬ್ಬರಿ ಪುಡಿ) ಮತ್ತು ಉಪ್ಪನ್ನು ಪುಡಿಮಾಡಿಕೊಳ್ಳಿ. 
  2. ಅದಕ್ಕೆ ಅವಲಕ್ಕಿ, ಹುಣಿಸೇಹಣ್ಣು ಮತ್ತು ಬೆಲ್ಲಸೇರಿಸಿ. 
  3. ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಶೇಂಗಾ ಹಾಕಿ ಒಗ್ಗರಣೆ ಮಾಡಿ.
  5. ನಂತ್ರ ಹುರಿಗಡಲೆ,  ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. 
  6. ಕೊನೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ. 
  7. ಪುಡಿ ಮಾಡಿದ ಅವಲಕ್ಕಿ ಮತ್ತು ಮಸಾಲೆ ಸೇರಿಸಿ. 
  8. ಸಣ್ಣ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ಹಾಕಿ ಎತ್ತಿಡಿ. 
  10. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಮೊಸರಿನೊಂದಿಗೂ ತಿನ್ನಬಹುದು. ಅಥವಾ ಬಿಸಿ ನೀರು ಸೇರಿಸಿ, ಹುಳಿಯವಲಕ್ಕಿ ಮಾಡಬಹುದು. 
Related Posts Plugin for WordPress, Blogger...