ಶನಿವಾರ, ಆಗಸ್ಟ್ 31, 2019

Rave modaka recipe in Kannada | ರವೇ ಮೋದಕ ಮಾಡುವ ವಿಧಾನ

Rave modaka recipe in Kannada

Rave modaka recipe in Kannada | ರವೇ ಮೋದಕ ಮಾಡುವ ವಿಧಾನ

ರವೇ ಮೋದಕ ವಿಡಿಯೋ 

 ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಣ್ಣ ರವೇ
  2. 1/2 ಕಪ್ ತೆಂಗಿನ ತುರಿ
  3. 1/4 ಕಪ್ ಬೆಲ್ಲ
  4. 1/2 ಕಪ್ ನೀರು
  5. 1/2 ಕಪ್ ಹಾಲು
  6. 2 ಏಲಕ್ಕಿ
  7. 1 ಟೀಸ್ಪೂನ್ ತುಪ್ಪ 
  8. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ರವೇ ಮೋದಕ ಮಾಡುವ ವಿಧಾನ :

  1. ಒಂದು ಬಾಣಲೆಯಲ್ಲಿ ನೀರು ಮತ್ತು ಹಾಲನ್ನು ಕುದಿಯಲು ಇಡಿ. 
  2. 1/2 ಟೀಸ್ಪೂನ್ ತುಪ್ಪ ಮತ್ತು 1/2 ಟೀಸ್ಪೂನ್ ಉಪ್ಪು ಹಾಕಿ. 
  3. ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ. 
  4. 2 - 3 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ ಬೇಯಿಸಿ. ಪಕ್ಕಕ್ಕಿಡಿ. 
  5. ನಂತರ ಒಂದು ಬಾಣಲೆಯಲ್ಲಿ ತೆಂಗಿನ ತುರಿ, ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಿ. 
  6.  ಮಗುಚಿ ಹೂರಣ ಸಿದ್ಧ ಮಾಡಿಕೊಳ್ಳಿ. ಜಾಸ್ತಿ ಒಣಗಿಸ ಬೇಡಿ.  
  7. ಆಮೇಲೆ ಬೇಯಿಸಿದ ರವೇಯನ್ನು ಚೆನ್ನಾಗಿ ನಾದಿ.
  8. ಸಣ್ಣ ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು ಬಟ್ಟಲಿನಂತೆ ಅಗಲ ಮಾಡಿ. 
  9. ಮಧ್ಯದಲ್ಲಿ ಹೂರಣ ಇಟ್ಟು, ಅಂಚುಗಳನ್ನು ಒಟ್ಟಿಗೆ ಸೇರಿಸಿ, ಮೋದಕದ ಆಕಾರ ಮಾಡಿ. 
  10. ಇದನ್ನು ಸೆಕೆಯಲ್ಲಿ (ಆವಿಯಲ್ಲಿ) ಬೇಯಿಸಬೇಕಾಗಿಲ್ಲ. ನಿಮಗಿಷ್ಟ ಇದ್ದಲ್ಲಿ ಒಂದೈದು ನಿಮಿಷ ಬೇಯಿಸಿದರೆ ಸಮಸ್ಯೆ ಇಲ್ಲ.


ಗುರುವಾರ, ಆಗಸ್ಟ್ 29, 2019

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ

Batani usli recipe in Kannada

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ 

 ಬಟಾಣಿ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಒಣ ಬಟಾಣಿ
  2. 2 ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ಟೀಸ್ಪೂನ್ಉದ್ದಿನಬೇಳೆ
  7. 1 ಒಣಮೆಣಸಿನಕಾಯಿ
  8. 1 - 2 ಹಸಿರು ಮೆಣಸಿನಕಾಯಿ
  9. 4 - 5 ಕರಿಬೇವಿನ ಎಲೆ
  10. 1 ಸೆಮೀ ಉದ್ದದ ಶುಂಠಿ
  11. ಎರಡು ಚಿಟಿಕೆ ಅರಿಶಿನ ಪುಡಿ
  12. ಒಂದು ದೊಡ್ಡ ಚಿಟಿಕೆ ಇಂಗು
  13. 1/4 ಕಪ್ ತೆಂಗಿನ ತುರಿ 
  14.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  15. 2 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  16. ಉಪ್ಪು ರುಚಿಗೆ ತಕ್ಕಷ್ಟು.

ಬಟಾಣಿ ಉಸ್ಲಿ ಮಾಡುವ ವಿಧಾನ:

  1. ಬಟಾಣಿಯನ್ನು ಒಂದು ದಿನ ನೆನೆಸಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ, ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ.
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ. 
  6. ಸಾಸಿವೆ ಸಿಡಿದ ಮೇಲೆ ಒಣಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  7. ಅರಿಶಿನ ಪುಡಿ ಮತ್ತು ಇಂಗು ಸೇರಿಸಿ ಮಗುಚಿ.  
  8. ಅದಕ್ಕೆ ಬೇಯಿಸಿದ ಬಟಾಣಿಯನ್ನು ಹಾಕಿ ಮಗುಚಿ.
  9. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಅಗತ್ಯವಿದ್ದಲ್ಲಿ ಉಪ್ಪು ಹೊಂದಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  10. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಆಗಸ್ಟ್ 27, 2019

Small onion gojju recipe in Kannada | ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ

Small onion gojju recipe in Kannada

Small onion gojju recipe in Kannada |  ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ


ಸಣ್ಣ ಈರುಳ್ಳಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ
  2. 1 ಟೇಬಲ್ ಚಮಚ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. ಸ್ವಲ್ಪ ಕರಿಬೇವು
  5. ಸಣ್ಣ ನಿಂಬೆ ಗಾತ್ರದ ಹುಣಿಸೇಹಣ್ಣು
  6. 2 ಟೀಸ್ಪೂನ್ ಬೆಲ್ಲ
  7. 2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನತುರಿ
  2. 2 ಒಣಮೆಣಸು
  3. 1 ಟೀಸ್ಪೂನ್ ಕೊತ್ತಂಬರಿ
  4. 1 ಚಮಚ ಎಣ್ಣೆ

ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣಮೆಣಸು ಮತ್ತು ಕೊತ್ತಂಬರಿಯನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿದುಕೊಳ್ಳಿ.
  2. ಅದಕ್ಕೆ ಅರ್ಧ ಕಪ್ ತೆಂಗಿನತುರಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದಿಟ್ಟುಕೊಳ್ಳಿ.  
  3. ನಂತ್ರ ಅದೇ ಬಾಣಲೆಯಲ್ಲಿ ಒಂದು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಅದಕ್ಕೆ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ ಹಾಕಿ ಎರಡು ನಿಮಿಷ ಚೆನ್ನಾಗಿ ಹುರಿಯಿರಿ. 
  5. ಆಮೇಲೆ ಉಪ್ಪು ಮತ್ತು ಹುಣಿಸೆರಸ ಸೇರಿಸಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಬೇಯಿಸಿ. 
  6. ಆಮೇಲೆ ಅರೆದ ಮಸಾಲೆ ಸೇರಿಸಿ.
  7. ಸ್ವಲ್ಪ ಬೆಲ್ಲ ಸೇರಿಸಿ. ಉಪ್ಪು ಮತ್ತು ಹುಳಿ ಹೊಂದಿಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ. 
  8. ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. ಅನ್ನ ಅಥವಾ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 

Related Posts Plugin for WordPress, Blogger...