Oats payasa recipe in Kannada | ಓಟ್ಸ್ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
1/2 ಕಪ್ ಓಟ್ಸ್
1/2 ಕಪ್ ಬೆಲ್ಲ
2.5 ಕಪ್ ಹಾಲು
1 ಕಪ್ ನೀರು
2 ಟೇಬಲ್ ಚಮಚ ತುಪ್ಪ
5-6 ಗೋಡಂಬಿ
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಓಟ್ಸ್ ಪಾಯಸ ಮಾಡುವ ವಿಧಾನ:
ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ.
ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ ಓಟ್ಸ್ ಮತ್ತು ತುಪ್ಪ ಹಾಕಿ.
ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಒಂದು ಕಪ್ ಬಿಸಿ ಹಾಲು ಮತ್ತು ಒಂದು ಕಪ್ ನೀರನ್ನು ಸೇರಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಉರಿ ತಗ್ಗಿಸಿ, ಆಗಾಗ್ಯೆ ಮಗುಚುತ್ತಾ ಓಟ್ಸ್ ನ್ನು ಬೇಯಿಸಿ. ಬೇಗ ಬೇಯುವ ಓಟ್ಸ್ ಆದಲ್ಲಿ ಮೂರು ನಿಮಿಷ ಸಾಕು.
ಸಣ್ಣಗೆ ಕತ್ತರಿಸಿದ ಗೋಡಂಬಿ ಸೇರಿಸಿ.
ಪುಡಿ ಮಾಡಿದ ಬೆಲ್ಲ ಸೇರಿಸಿ.
ಮತ್ತು ಏಲಕ್ಕಿ ಪುಡಿ ಸೇರಿಸಿ.
ಬೆಲ್ಲ ಕರಗಿದ ಮೇಲೆ ಉಳಿದ ಹಾಲು ಹಾಕಿ, ಕುದಿಸಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟು ಬೇಕಾದಲ್ಲಿ ಹಾಲನ್ನು ಸೇರಿಸಿ. ಸ್ಟೋವ್ ಆಫ್ ಮಾಡಿ.