ಬುಧವಾರ, ನವೆಂಬರ್ 29, 2017

Masala puri recipe in Kannada | ಮಸಾಲೆ ಪುರಿ ಮಾಡುವ ವಿಧಾನ

Masala puri recipe in Kannada

Masala puri recipe in Kannada |  ಮಸಾಲೆ ಪುರಿ ಮಾಡುವ ವಿಧಾನ

ಮಸಾಲೆ ಪುರಿ ವಿಡಿಯೋ

ಪ್ರಮಾಣ: 4 ಪ್ಲೇಟ್ ಗಾಗುವಷ್ಟು

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 20 - 25 ಪೂರಿ ಅಥವಾ ಪಾಪಡಿ (ಚಾಟ್ಗಳಿಗಾಗಿ ಬಳಸಲಾಗುತ್ತದೆ)
  2. 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ 
  3. 2 ಸಣ್ಣದಾಗಿ ಹೆಚ್ಚಿದ ಟೊಮೆಟೊ 
  4. 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 
  5. 4 ಟೇಬಲ್ ಚಮಚ ಸೇವ್

ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಒಣ ಬಟಾಣಿ 
  2. 1/2 ಆಲೂಗಡ್ಡೆ 
  3. 1/2 ಕ್ಯಾರೆಟ್ (ಬೇಕಾದಲ್ಲಿ) 
  4. 1 - 2 ಹಸಿರು ಮೆಣಸು 
  5. 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. 1 ಟೇಬಲ್ ಚಮಚ ಕತ್ತರಿಸಿದ ಪುದಿನ 
  7. 1 ಕತ್ತರಿಸಿದ  ಈರುಳ್ಳಿ  
  8. 4 - 5 ಎಸಳು ಬೆಳ್ಳುಳ್ಳಿ 
  9. 1 cm ಉದ್ದದ ಶುಂಠಿ 
  10. 1 ಕತ್ತರಿಸಿದ ಟೊಮೆಟೊ 
  11. 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ) 
  12. 1 ಟೀಸ್ಪೂನ್ ಪಾವ್ ಬಾಜಿ ಪುಡಿ 
  13. 1/2 ಟೀಸ್ಪೂನ್ ಗರಂ ಮಸಾಲಾ ಪುಡಿ 
  14. 1/2 ಚಮಚ ಚಾಟ್ ಮಸಾಲಾ 
  15. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  16. ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಮಸಾಲೆ ಪುರಿ ಮಾಡುವ ವಿಧಾನ:

  1. ಮೊದಲಿಗೆ ಗ್ರೇವಿ ತಯಾರಿಸೋಣ. ಬಟಾಣಿಯನ್ನು ರಾತ್ರೆಯಿಡಿ ನೆನೆಸಿಡಿ. 
  2. ನೆನೆಸಿದ ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತೆಗೆದು ಕೊಂಡು ಮಧ್ಯಮ ಉರಿಯಲ್ಲಿ ಹುರಿಯಿರಿ. 
  4. ಈರುಳ್ಳಿ ಮೆತ್ತಗಾದ ಮೇಲೆ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
  5. ಕೊನೆಯಲ್ಲಿ ಟೊಮೇಟೊ ಹಾಕಿ ಹುರಿಯಿರಿ.  ಸ್ಟವ್ ಆಫ್ ಮಾಡಿ. 
  6. ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ಬೆಂದ ನಂತ್ರ... ಬೇಯಿಸಿದ ಆಲೂಗಡ್ಡೆ, ಕ್ಯಾರಟ್ ಮತ್ತು ಎರಡು ಸೌಟಿನಷ್ಟು ಬಟಾಣಿಯನ್ನು ಹುರಿದ ಪದಾರ್ಥಗಳೊಂದಿಗೆ ಸೇರಿಸಿ ನುಣ್ಣನೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮಸಾಲೆ ಪುಡಿಗಳನ್ನು ಸೇರಿಸಿ (ಅಚ್ಚಖಾರದ ಪುಡಿ, ಪಾವ್ ಬಾಜಿ ಪುಡಿ, ಗರಂ ಮಸಾಲಾ ಪುಡಿ, ಚಾಟ್ ಮಸಾಲಾ,  ಅರಿಶಿನ ಪುಡಿ). ಉಪ್ಪನ್ನೂ ಸೇರಿಸಿ. 
  8. ಉಳಿದ ಬೇಯಿಸಿದ ಬಟಾಣಿಯನ್ನೂ ಬೇಯಿಸಿದ ನೀರಿನೊಂದಿಗೆ ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು. 
  10. ಸರ್ವಿಂಗ್ ಪ್ಲೇಟ್ ನಲ್ಲಿ ಪೂರಿಗಳನ್ನ ತೆಗೆದುಕೊಂಡು ಪುಡಿಮಾಡಿ. 
  11. ಮೇಲಿನಿಂದ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ. 
  12. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಕೂಡಲೇ ಬಡಿಸಿ. ಸವಿದು ಆನಂದಿಸಿ. 

ಮಂಗಳವಾರ, ನವೆಂಬರ್ 28, 2017

Gatti avalakki oggarane recipe in Kannada | ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ

Gatti avalakki oggarane recipe in Kannada

Gatti avalakki oggarane recipe in Kannada | ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗಟ್ಟಿ ಅವಲಕ್ಕಿ
  2. 1/4 ಕಪ್ ತೆಂಗಿನ ತುರಿ
  3. 1 ಟೀಸ್ಪೂನ್  ಸಕ್ಕರೆ
  4. 1/4 ಟೀಸ್ಪೂನ್ ಅರಿಶಿನ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 7 - 8 ಗೋಡಂಬಿ (ಬೇಕಾದಲ್ಲಿ)
  7. 4 - 6 ಕರಿಬೇವಿನ ಎಲೆ
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:

  1. ದಪ್ಪ ಅಥವಾ ಗಟ್ಟಿ ಅವಲಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ದೊಡ್ಡದಾಗಿ ಪುಡಿ ಮಾಡಿ. 
  2. ಪುಡಿ ಮಡಿದ ಅವಲಕ್ಕಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.  ನೀರು ಹಾಕಿ ತೊಳೆದು, ಬಸಿದಿಡಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ. 
  4. ನಂತರ ಕರಿಬೇವು ಸೇರಿಸಿ.
  5. ಪುಡಿಮಾಡಿ ತೊಳೆದಿಟ್ಟ ಅವಲಕ್ಕಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕಲಸಿ. 
  6. ಒಂದೆರಡು ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ. ತುಂಬ ಪುಡಿ ಪುಡಿ ಅಥವಾ ಒಣ ಒಣ ಎನಿಸಿದರೆ ಸ್ವಲ್ಪ ನೀರು ಚಿಮುಕಿಸಿ. 
  7. ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿ. 
  8. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ ಕಲಸಿ. ಸರಳ ಮತ್ತು ರುಚಿಕರ ಅವಲಕ್ಕಿಯನ್ನು ತಿಂದು ಆನಂದಿಸಿ.

ಶುಕ್ರವಾರ, ನವೆಂಬರ್ 24, 2017

Easy siridhanya recipes in Kannada | ಸಿರಿಧಾನ್ಯದ ಅಡಿಗೆ ಮಾಡುವ ವಿಧಾನ

Easy siridhanya recipes in Kannada

Easy siridhanya recipes in Kannada | ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸಿರಿಧಾನ್ಯ
  1. 1 ಕಪ್ ಮೊಸರು
  2. 1/4 ಚಮಚ ಸಾಸಿವೆ 
  3. 1/2 ಟೀಸ್ಪೂನ್ ಉದ್ದಿನ ಬೇಳೆ 
  4. 2 ಕರಿಬೇವಿನ ಎಲೆ 
  5. 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
  6. ಸ್ವಲ್ಪ ಶುಂಠಿ ಸಣ್ಣಗೆ ಕತ್ತರಿಸಿದ್ದು
  7. ಒಂದು ಚಿಟಿಕೆ ಇಂಗು
  8. 2 ಟೀ ಚಮಚ ಅಡುಗೆ ಎಣ್ಣೆ 
  9. ಉಪ್ಪು ರುಚಿಗೆ ತಕ್ಕಷ್ಟು
  1. 1/2 ಕಪ್ ಹಾಲು
  2. ಸಕ್ಕರೆ ರುಚಿಗೆ ತಕ್ಕಷ್ಟು
  3. 2 ಟೀ ಚಮಚ ತುಪ್ಪ
  4. 1 ಟೇಬಲ್ ಚಮಚ ಒಣದ್ರಾಕ್ಷಿ
  1. 1 ಕಪ್ ಬಿಸಿ ನೀರು
  2. 1 ಟೀ ಚಮಚ ತುಪ್ಪ
  3. ಉಪ್ಪು ರುಚಿಗೆ ತಕ್ಕಷ್ಟು
  4. ಉಪ್ಪಿನಕಾಯಿ

ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ:

  1. ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ. 
  2. ಮೊದಲನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ ಕಲಸಿ. 
  3. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗಿನ ಒಗ್ಗರಣೆ ಕೊಡಿ.  
  4. ಎರಡನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಕಲಸಿ. 
  5. ತುಪ್ಪದಲ್ಲಿ ಒಣದ್ರಾಕ್ಷಿ ಹುರಿದು ಸೇರಿಸಿ. 
  6. ಉಳಿದ ಸಿರಿಧಾನ್ಯವನ್ನು ಮೂರನೇ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಬಿಸಿನೀರು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. ಉಪ್ಪಿನಕಾಯಿಯೊಂದಿಗೆ ಸವಿಯಿರಿ. 
Related Posts Plugin for WordPress, Blogger...