ಸೋಮವಾರ, ಅಕ್ಟೋಬರ್ 30, 2017

Shenga or Kadlekai chutney recipe in Kannada | ಶೇಂಗಾ ಚಟ್ನಿ ಮಾಡುವ ವಿಧಾನ

Shenga or Kadlekai chutney recipe in Kannada

Shenga or Kadlekai chutney recipe in Kannada |  ಶೇಂಗಾ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
  2. 2-4 ಒಣ ಮೆಣಸಿನಕಾಯಿ
  3. 3 - 4 ಬೇಳೆ ಬೆಳ್ಳುಳ್ಳಿ 
  4. 3 - 4 ಕರಿಬೇವಿನ ಎಲೆ
  5. 1/4 ಕಪ್ ತೆಂಗಿನ ತುರಿ
  6. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ
  3. 3 - 4 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಶೇಂಗಾ ಚಟ್ನಿ ಮಾಡುವ ವಿಧಾನ:

  1. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಅರ್ಧ ಕಪ್ ಶೇಂಗಾ ಅಥವಾ ನೆಲಗಡಲೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. (ಗಮನಿಸಿ, ಶೇಂಗಾ ಮತ್ತು ತೆಂಗಿನ ತುರಿಯ ಪ್ರಮಾಣವನ್ನು ನಿಮ್ಮಿಷ್ಟದಂತೆ ಬದಲಾಯಿಸಬಹುದು.) 
  2. ನೆಲಗಡಲೆ ಕಂದು ಬಣ್ಣಕ್ಕೆ ತಿರುಗಿ, ಗರಿ-ಗರಿಯಾದಾಗ ಒಣಮೆಣಸು ಮತ್ತು ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದೆರಡು ನಿಮಿಷ ಹುರಿಯಿರಿ. 
  3. ಕೊನೆಯಲ್ಲಿ ಕರಿಬೇವು ಮತ್ತು ತೆಂಗಿನ ತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ. 
  4. ಉಪ್ಪು, ಹುಣಿಸೇಹಣ್ಣು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ. 
  5. ಅದನ್ನು ಒಂದು ಬಟ್ಟಲಿಗೆ ಹಾಕಿ. ಈ ಚಟ್ನಿ ಸ್ವಲ್ಪ ತೆಳ್ಳಗಿರಬೇಕು. ಅಗತ್ಯವಿದ್ದಷ್ಟು ನೀರು ಸೇರಿಸಿ. 
  6. ಎಣ್ಣೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

ಗುರುವಾರ, ಅಕ್ಟೋಬರ್ 26, 2017

Bili holige recipe in Kannada | ಬಿಳಿ ಹೋಳಿಗೆ ಮಾಡುವ ವಿಧಾನ

Bili holige recipe in Kannada

Bili holige recipe in Kannada | ಬಿಳಿ ಹೋಳಿಗೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು (8 ಚಪಾತಿ ಗಾಗುವಷ್ಟು)
  2. 4 ಟೇಬಲ್ ಚಮಚ ಅಡುಗೆ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು.

ತುಂಬಿಸಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿಹಿಟ್ಟು
  2. 2 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ, ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  3. 1 ಟೀಸ್ಪೂನ್ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು.

ಬಿಳಿ ಹೋಳಿಗೆ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಪುನಃ ಕಲಸಿ, ಮುಚ್ಚಿಡಿ. 
  4. ಒಂದು ಬಾಣಲೆಯಲ್ಲಿ ನೀರು, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಯಲು ಇಡಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ಅಕ್ಕಿಹಿಟ್ಟನ್ನು ಹಾಕಿ ಒಂದೆರಡು ನಿಮಿಷ ಮಗುಚಿ. 
  6. ಸ್ಟವ್ ಆಫ್ ಮಾಡಿ. ಬಿಸಿ ಆರುವವರೆಗೆ ಮುಚ್ಚಿಡಿ. 
  7. ಬಿಸಿ ಆರಿದ ಮೇಲೆ ಕೈಗೆ ಎಣ್ಣೆ ಮುಟ್ಟಿಸಿಕೊಂಡು ಚೆನ್ನಾಗಿ ನಾದಿ. ಗಮನಿಸಿ ಹಿಟ್ಟು ಮೃದುವಾಗಿರಬೇಕು. 
  8. ಈಗ ಬಿಳಿ ಹೋಳಿಗೆ ಮಾಡಲು, ಎಣ್ಣೆ ಅಥವಾ ಹಿಟ್ಟನ್ನು ಮುಟ್ಟಿಕೊಂಡು, ಒಂದುಸಣ್ಣನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಚಪ್ಪಟೆ ಮಾಡಿ. ಅದರೊಳಗೆ ಒಂದು ಅಕ್ಕಿ ಹಿಟ್ಟಿನ ಉಂಡೆಯನ್ನು ಇರಿಸಿ.
  9. ತುದಿಗಳನ್ನು ಒಟ್ಟಿಗೆ ತಂದು ರವೆಯನ್ನು ಒಳಗೆ ಸೇರಿಸಿ.
  10. ಸಾಕಷ್ಟು ಎಣ್ಣೆ ಅಥವಾ ಗೋಧಿ ಹಿಟ್ಟನ್ನು ಬಳಸಿ ಅಕ್ಕಿ ಹಿಟ್ಟು ಸೇರಿಸಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
  11. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಹೋಳಿಗೆಯನ್ನು ತವಾ ಮೇಲೆ ಹಾಕಿ. 
  12. ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಯಾವುದೇ ಗೊಜ್ಜು ಅಥವಾ ಸೀಕರಣೆ ಯೊಂದಿಗೆ ಬಡಿಸಿ.

ಶುಕ್ರವಾರ, ಅಕ್ಟೋಬರ್ 20, 2017

Kara sev mixture recipe in Kannada | ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ

Kara sev mixture recipe in Kannada

Kara sev mixture recipe in Kannada | ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ

ವಿಡಿಯೋ ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ಕಿಸಿ

ಸೇವ್ ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1/2 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
  4. 1/2 ಟೀಸ್ಪೂನ್ ಉಪ್ಪು 
  5. ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಸೇವ್ ಕಾಯಿಸಲು

ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಕಡಲೆಕಾಯಿ ಅಥವಾ ಶೇಂಗಾ
  2. 4 ಟೇಬಲ್ ಚಮಚ ಹರಿಗಡಲೇ ಅಥವಾ ಪುಟಾಣಿ
  3. 1 ಎಸಳು ಕರಿಬೇವು
  4. 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  5. 1 ಟೀಸ್ಪೂನ್ ಎಣ್ಣೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಂತೆ 
  7. 7 - 8 ಗೋಡಂಬಿ (ಬೇಕಾದಲ್ಲಿ)
  8. 1 ಟೇಬಲ್ ಚಮಚ ಒಣಗಿದ ತೆಂಗಿನಕಾಯಿ ಚೂರುಗಳು (ಬೇಕಾದಲ್ಲಿ)

ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ:

  1. ಓಮ ಅಥವಾ ಅಜವೈನವನ್ನು ಜಜ್ಜಿ ಸಣ್ಣ ಪುಡಿ ಮಾಡಿ. 
  2. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಜಜ್ಜಿದ ಓಮ ಮತ್ತು ಉಪ್ಪನ್ನು ಹಾಕಿ. 
  3. 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  4. ಸ್ವಲ್ಪ ಸ್ವಲ್ಪ ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ. 
  5. ಸಣ್ಣ ಸಣ್ಣ ತೂತುಗಳಿರುವ ಸೇವ್ ಮಾಡುವ ಅಚ್ಚಿಗೆ ಹಿಟ್ಟನ್ನು ಹಾಕಿ. 
  6.  ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬಿಸಿ ಎಣ್ಣೆಗೆ ನೇರವಾಗಿ ಒತ್ತಿ. 
  7. ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ. 
  8. ಇನ್ನೊಂದು ಬಾಣಲೆಯಲ್ಲಿ ನೆಲಗಡಲೆ ಅಥವಾ ಶೇಂಗಾವನ್ನು ಹುರಿಯಿರಿ. ಕರಿಬೇವನ್ನು ಸೇರಿಸಿ ಹುರಿಯಿರಿ. 
  9. ನೆಲಗಡಲೆ ಹುರಿದ ಮೇಲೆ ಹುರಿಗಡಲೆ ಮತ್ತು ಅಚ್ಚಖಾರದ ಪುಡಿ ಸೇರಿಸಿ, ಸ್ಟವ್ ಆಫ್ ಮಾಡಿ. 
  10. ಒಮ್ಮೆ ಮಗುಚಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಂದು ಚಿಟಿಕೆ ಉಪ್ಪು ಸಾಕಾಗಬಹುದು. 
  11. ಇದನ್ನು ಪುಡಿ ಮಾಡಿದ ಸೇವ್ ಗೆ ಸೇರಿಸಿ. ಚೆನ್ನಾಗಿ ಕಲಸಿ. 

Related Posts Plugin for WordPress, Blogger...