ಶುಕ್ರವಾರ, ನವೆಂಬರ್ 11, 2016

Ragi malt recipe in Kannada | ರಾಗಿ ಮಾಲ್ಟ್ ಮಾಡುವ ವಿಧಾನ

Ragi malt recipe in Kannada

Ragi malt recipe in Kannada | ರಾಗಿ ಮಾಲ್ಟ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ಟೇಬಲ್ ಚಮಚ ರಾಗಿ ಹಿಟ್ಟು
  2. 3 ಟೇಬಲ್ ಚಮಚ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
  3. 1 ಕಪ್ ನೀರು
  4. 1 ಕಪ್ ಹಾಲು
  5. ಒಂದು ಚಿಟಿಕೆ ಏಲಕ್ಕಿ ಪುಡಿ

ರಾಗಿ ಮಾಲ್ಟ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಬೆಲ್ಲ ತೆಗೆದುಕೊಳ್ಳಿ. 
  2. ಅದಕ್ಕೆ ನೀರು ಮತ್ತು ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
  3. ಒಲೆಯ ಮೇಲಿಟ್ಟು ಮಗುಚುತ್ತಾ ಕುದಿಸಿ. ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. 
  4. ಏಲಕ್ಕಿ ಪುಡಿ, ಬೇಕಾದಲ್ಲಿ 1/4 ಚಮಚ ತುಪ್ಪ ಹಾಕಿ ಸ್ಟವ್ ಆಫ್ ಮಾಡಿ. ಆರೋಗ್ಯಕರ ರಾಗಿ ಮಾಲ್ಟ್ ಕುಡಿದು ಆನಂದಿಸಿ.

    ಗುರುವಾರ, ನವೆಂಬರ್ 10, 2016

    Uppu huli or masale neer dose recipe in Kannada | ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ

    Uppu huli or masale neer dose recipe in Kannada

    Uppu huli or masale neer dose recipe in Kannada | ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ 


    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
    2. 1/2 ಕಪ್ ತೆಂಗಿನ ತುರಿ
    3. 3 ಕಪ್ ನೀರು (ಅರೆಯುವ ನೀರು ಸೇರಿಸಿ)
    4. 2 ಟೀಸ್ಪೂನ್ ಕೊತ್ತಂಬರಿ ಬೀಜ 
    5. 1 ಟೀಸ್ಪೂನ್ ಜೀರಿಗೆ 
    6. 2 - 4 ಕೆಂಪು ಮೆಣಸಿನಕಾಯಿ 
    7. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
    8. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ) 
    9. 7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ 
    10. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
    11. ಉಪ್ಪು ರುಚಿಗೆ ತಕ್ಕಷ್ಟು

    ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ:

    1. ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
    2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ. 
    3. ನೀರ್ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಸೇರಿಸಿ. ಬೇಕಾದಲ್ಲಿ ಹಸಿರು ಮೆಣಸಿನಕಾಯಿ ಮತ್ತು ಬೆಲ್ಲ ಸೇರಿಸಿ. 
    4. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ. 
    5. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
    6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.

    ಮಂಗಳವಾರ, ನವೆಂಬರ್ 8, 2016

    Palak parota recipe in Kannada | ಪಾಲಕ್ ಪರೋಟ ಮಾಡುವ ವಿಧಾನ

     Palak parota recipe in Kannada

    Palak parota recipe in Kannada | ಪಾಲಕ್ ಪರೋಟ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. ಗೋಧಿ ಹಿಟ್ಟು (10 ದೊಡ್ಡ ಚಪಾತಿಗಾಗುವಷ್ಟು)
    2. 1 ಕಟ್ಟು ಪಾಲಕ್ ಸೊಪ್ಪು
    3. 1ಸೆಮೀ ಉದ್ದದ ಶುಂಠಿ
    4. 4 ಬೇಳೆ ಬೆಳ್ಳುಳ್ಳಿ
    5.  1 - 2 ಹಸಿರು ಮೆಣಸಿನಕಾಯಿ 
    6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
    7. 1/4 ಟೀಸ್ಪೂನ್ ಓಮ ಅಥವಾ ಅಜವೈನ್ 
    8. 10 ಟೀಸ್ಪೂನ್ ಅಡುಗೆ ಎಣ್ಣೆ
    9. ಉಪ್ಪು ರುಚಿಗೆ ತಕ್ಕಷ್ಟು

    ಪಾಲಕ್ ಪರೋಟ ಮಾಡುವ ವಿಧಾನ:

    1. ಪಾಲಕ್ ಸೊಪ್ಪನ್ನು ತೊಳೆದು ಕತ್ತರಿಸಿ. 
    2. ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಆದಷ್ಟು ಕಡಿಮೆ ನೀರು ಉಪಯೋಗಿಸಿ. 
    3. ನಂತರ ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಂಡು, ಅದಕ್ಕೆ ಅರೆದ ಪಾಲಕ್ ಸೊಪ್ಪಿನ ಮಿಶ್ರಣ, ಉಪ್ಪು ಮತ್ತು ಓಮ (ಅಜವೈನ್) ಹಾಕಿ ಕಲಸಿ. 
    4. ಕೊನೆಯಲ್ಲಿ 4 ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಇಪ್ಪತ್ತು ನಿಮಿಷ ಮುಚ್ಚಿಡಿ.
    5. ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
    6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

    Related Posts Plugin for WordPress, Blogger...