ಶನಿವಾರ, ಮಾರ್ಚ್ 6, 2021

Veg paratha recipe in Kannada | ವೆಜ್ ಪರೋಟ ಮಾಡುವ ವಿಧಾನ

 

Veg paratha recipe in Kannada

Veg paratha recipe in Kannada | ವೆಜ್ ಪರೋಟ ಮಾಡುವ ವಿಧಾನ 

ವೆಜ್ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ 
  3. 1/4 ಕಪ್ ತುರಿದ ಕ್ಯಾರಟ್ 
  4. 1/4 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು
  5. 1/4 ಕಪ್ ಸಣ್ಣಗೆ ಹೆಚ್ಚಿದ ಎಲೆ ಕೋಸು
  6. 1 ಹಸಿಮೆಣಸಿನಕಾಯಿ
  7. 1 ಟೀಸ್ಪೂನ್ ಶುಂಠಿ ಪೇಸ್ಟ್
  8. 1 ಟೇಬಲ್ ಚಮಚ ಕರಿಬೇವು
  9. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  10. 1 ಟೀಸ್ಪೂನ್ ಧನಿಯಾ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  13. 1/2 ಟೀಸ್ಪೂನ್ ಜೀರಿಗೆ ಪುಡಿ
  14. 6 - 8 ಚಮಚ ತುಪ್ಪ ಅಥವಾ ಎಣ್ಣೆ
  15. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ವೆಜ್ ಪರೋಟ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರಟ್, ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು ಮತ್ತು ಸಣ್ಣಗೆ ಹೆಚ್ಚಿದ ಎಲೆ ಕೋಸು ತೆಗೆದುಕೊಳ್ಳಿ. 
  2. ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ ಪೇಸ್ಟ್ ಸೇರಿಸಿ. 
  3. ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  4. ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ. 
  5. ಒಂದು ಕಪ್ ಗೋಧಿಹಿಟ್ಟು ಸೇರಿಸಿ, ಚೆನ್ನಾಗಿ ಕಲಸಿ. 
  6. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಮೆತ್ತಗಿನ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. 
  7. ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ.
  8. ಬೇಕಾದಲ್ಲಿ ಒಂದು ಪ್ಲೇಟ್ ಅಥವಾ ಬೌಲ್ ತೆಗೆದುಕೊಂಡು ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ. 
  9. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  10. ಕೆಚಪ್ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

ಬುಧವಾರ, ಮಾರ್ಚ್ 3, 2021

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ

 

Sutta tomato gojju recipe in Kannada

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ 

ಸುಟ್ಟ ಟೊಮೇಟೊ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೊಮೇಟೊ
  2. 2 - 3 ಹಸಿರು ಮೆಣಸಿನಕಾಯಿ
  3. 3 - 4 ಎಸಳು ಬೆಳ್ಳುಳ್ಳಿ (ಅಥವಾ ಅರ್ಧ ಚಮಚ ಜೀರಿಗೆ ಪುಡಿ)
  4. 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  5. 1 ಚಮಚ ಬೆಲ್ಲ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಟೀಸ್ಪೂನ್ ಎಣ್ಣೆ

ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ:

  1. ಟೊಮೇಟೊ ತೊಳೆದು ನೀರಾರಿಸಿ, ನೇರವಾಗಿ ಸ್ಟವ್ ನಲ್ಲಿ ಮೆತ್ತಗಾಗುವವರೆಗೆ ಸುಡಿ. ಟೊಮ್ಯಾಟೊವನ್ನು ತಿರುಗಿಸಿ ತಿರುಗಿಸಿ ಸುಡಬೇಕು.
  2. ನಂತರ ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನೂ ಸುಡಿ. ಬೆಳ್ಳುಳ್ಳಿ ಬದಲು ಕೊನೆಯಲ್ಲಿ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಬಹುದು.
  3. ಬಿಸಿ ಕಡಿಮೆ ಆದಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆಯಿರಿ. ಮಿಕ್ಸಿಯಲ್ಲಿ ತರಿತರಿಯಾಗಿ ಅರೆಯಬಹುದು. 
  4. ಮಸೆದ ಅಥವಾ ಮ್ಯಾಶ್ ಮಾಡಿದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ. 
  5. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  6. ಒಂದು ಚಮಚ ಎಣ್ಣೆ ಸೇರಿಸಿ ಕಲಸಿ. 
  7. ಚಟ್ನಿ ಅಥವಾ ಗೊಜ್ಜು ಹುಳಿ ಎನಿಸಿದರೆ, ಬೆಲ್ಲ ಸೇರಿಸಬಹುದು. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೋಮವಾರ, ಮಾರ್ಚ್ 1, 2021

Benne biscuit recipe using wheat flour in Kannada | ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ

 


Benne biscuit recipe using wheat flour in Kannada | ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ


ಬೆಣ್ಣೆ ಬಿಸ್ಕತ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿ ಹಿಟ್ಟು
  2. 1/4 ಕಪ್ ಸಕ್ಕರೆ 
  3. 1/8 ಕಪ್ ತುಪ್ಪ ಅಥವಾ ಎಣ್ಣೆ

ಗೋಧಿಹಿಟ್ಟಿನ ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:

  1. ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಉಳಿದ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಳ್ಳಿ. 
  2. ಒಂದು ಬಟ್ಟಲಿನಲ್ಲಿ ಸಕ್ಕರೆ ಪುಡಿ ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  3. ಆಮೇಲೆ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಸೇರಿಸುತ್ತ ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ.  
  4. ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ. 
  5. ಬಿಸ್ಕೆಟ್ನ ಮೇಲೆ ಮ್ಮಿಷ್ಟದ ಡಿಸೈನ್ ಮಾಡಬಹುದು. 
  6. ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಸವರಿ. ನಾನು ಮಿನಿ ಇಡ್ಲಿ ಪ್ಲೇಟ್ ಬಳಸಿದ್ದೇನೆ. 
  7. ತುಪ್ಪ ಸವರಿದ ಪ್ಲೇಟ್ ಮೇಲೆ ಮಾಡಿದ ಬಿಸ್ಕೆಟ್ಸ್ ಇಡಿ. 
  8. ಒಂದು ದಪ್ಪ ತಳದ ಬಾಣಲೆ ಒಳಗೆ ಒಂದು ಸ್ಟಾಂಡ್ ಇಟ್ಟು, ಒಂದೆರಡು ನಿಮಿಷ ಬಿಸಿಮಾಡಿಕೊಳ್ಳಿ. 
  9. ಆಮೇಲೆ ಬಿಸ್ಕೆಟ್ಸ್ ಇರುವ ಪ್ಲೇಟ್ ಇಟ್ಟು ಮುಚ್ಚಳ ಮುಚ್ಚಿ, 12 - 15 ನಿಮಿಷ ಬೇಯಿಸಿ. 
  10. ಸುಮಾರು ಹತ್ತು ನಿಮಿಷದ ನಂತ್ರ ನಿಮಿಷಕ್ಕೊಮ್ಮೆ ಬಿಸ್ಕೆಟ್ನ ಕೆಳಭಾಗ ನೋಡಿ. ಒಳ್ಳೆಯ ಘಮ ಮತ್ತು ಕೆಳಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಸಾಕು. 
  11. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಬಿಸ್ಕೆಟ್ಸ್ ತೆಗೆಯಿರಿ. ಸವಿದು ಆನಂದಿಸಿ. ಜಾಸ್ತಿ ಮಾಡುವುದಾದಲ್ಲಿ ಇನ್ನೊಂದು ಬಿಸ್ಕೆಟ್ ಇರುವ ಪ್ಲೇಟ್ ಇಟ್ಟು ಬೇಯಿಸುವುದನ್ನು ಮುಂದುವರೆಸಿ. 
  12. ಮೈಕ್ರೋವೇವ್ ಓವೆನ್ ನಲ್ಲಿ (200W)  2- 3 ನಿಮಿಷ. ಮಾಮೂಲಿ ಓವೆನ್ ನಲ್ಲಿ (180deg) 10 - 12 ನಿಮಿಷ ಬೇಯಿಸಿ ಮಾಡಬಹುದು. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು. 


Related Posts Plugin for WordPress, Blogger...