ಶನಿವಾರ, ಅಕ್ಟೋಬರ್ 10, 2020

Balekai palya recipe in Kannada | ಬಾಳೆಕಾಯಿ ಪಲ್ಯ ಮಾಡುವ ವಿಧಾನ

 

Balekai palya recipe in Kannada

Balekai palya recipe in Kannada | ಬಾಳೆಕಾಯಿ ಪಲ್ಯ ಮಾಡುವ ವಿಧಾನ

ಬಾಳೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಬಾಳೆಕಾಯಿ
  2. ದೊಡ್ಡ ಚಿಟಿಕೆ ಅರಶಿನ ಪುಡಿ 
  3. ಚಿಟಿಕೆ ಇಂಗು
  4. ಉಪ್ಪು ರುಚಿಗೆ ತಕ್ಕಷ್ಟು
  5. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ 
  2. 1/2 ಟೀಸ್ಪೂನ್ ಜೀರಿಗೆ 
  3. 1/4 ಟೀಸ್ಪೂನ್ ಸಾಸಿವೆ 
  4. 1/2 ಕಪ್ ತೆಂಗಿನ ತುರಿ  
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 2 - 3 ಹಸಿಮೆಣಸಿನಕಾಯಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 1 ಚಮಚ ಕಡ್ಲೆಬೇಳೆ
  4. 1 ಚಮಚ ಉದ್ದಿನಬೇಳೆ
  5. 5 - 6 ಕರಿಬೇವಿನ ಎಲೆ
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

ಬಾಳೆಕಾಯಿ ಪಲ್ಯ ಮಾಡುವ ವಿಧಾನ:

  1. ಬಾಳೆಕಾಯಿಯ ಸಿಪ್ಪೆ ತೆಗೆದು ತೊಳೆದು ಕತ್ತರಿಸಿ.
  2. ಎಣ್ಣೆ, ಸಾಸಿವೆ, ಒಣ ಮೆಣಸಿನಕಾಯಿ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  3. ಅದಕ್ಕೆ ಕತ್ತರಿಸಿದ ಬಾಳೆಕಾಯಿ ಹಾಕಿ. 
  4. ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ.
  5. ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. ಅರ್ಧ ಕಪ್ ನೀರು ಸೇರಿಸಿ ಮಗುಚಿ. 
  6. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ಬೇಯಿಸಿದ ಬದನೇಕಾಯಿಗೆ ಅರೆದ ಮಸಾಲೆ ಹಾಕಿ.
  9. ಚೆನ್ನಾಗಿ ಮಗುಚಿ ಎರಡು ನಿಮಿಷ ಬೇಯಿಸಿ. 
  10. ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.


ಬುಧವಾರ, ಸೆಪ್ಟೆಂಬರ್ 30, 2020

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ

 

Masala jolada rotti recipe Kannada

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ


ಮಸಾಲಾ ಜೋಳ ರೊಟ್ಟಿ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಜೋಳದ ಹಿಟ್ಟು
  2. 1.25 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ)
  3. 2 - 3 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಮಧ್ಯಮ ಗಾತ್ರದ ಕ್ಯಾರಟ್
  6. 1ಸಣ್ಣ ಗಾತ್ರದ ಸೌತೆಕಾಯಿ
  7. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
  8. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
  10. 1 ಚಮಚ ಜೀರಿಗೆ
  11. ಉಪ್ಪು ರುಚಿಗೆ ತಕ್ಕಷ್ಟು
  12. ಎಣ್ಣೆ ರೊಟ್ಟಿ ಕಾಯಿಸಲು

ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರಟ್ ಮತ್ತು ತುರಿದ ಸೌತೆಕಾಯಿ ಸೇರಿಸಿ. 
  3. ನಂತರ ಸಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತೊ ಜೀರಿಗೆ ಸೇರಿಸಿ. 
  4. ಉಪ್ಪನ್ನು ಸೇರಿಸಿ ಒಮ್ಮೆ ಕಲಸಿ. 
  5. ಅಗತ್ಯವಿದ್ದಷ್ಟು ಬೆಚ್ಚಗಿನ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  6. ರೊಟ್ಟಿ ಮಾಡುವ ಕಾವಲಿಗೆ ಎಣ್ಣೆ ಹಚ್ಚಿ, ದೊಡ್ಡ ಕಿತ್ತಳೆ ಗಾತ್ರದ ಹಿಟ್ಟು ತೆಗೆದುಕೊಳ್ಳಿ. 
  7. ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ವೃತ್ತಾಕಾರದ ತೆಳುವಾದ ರೊಟ್ಟಿಯನ್ನು ತಟ್ಟಿ.
  8. ಆಮೇಲೆ ಕಾವಲಿಯನ್ನು ಸ್ಟವ್ ಮೇಲಿರಿಸಿ, ಮೇಲಿನಿಂದ ಒಂದು ಚಮಚ ಎಣ್ಣೆ ಹಾಕಿ.
  9. ಮುಚ್ಚಳ ಮುಚ್ಚಿ ಬೇಯಿಸಿ. 
  10. ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿಯೊಂದಿಗೆ ಬಡಿಸಿ.



ಮಂಗಳವಾರ, ಸೆಪ್ಟೆಂಬರ್ 29, 2020

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

 

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಎರಡು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ವಾಷಿಂಗ್ ಪೌಡರ್)
  2. ಕಾಲು ಕಪ್ ವಿನೆಗರ್ (ಅಥವಾ ಎರಡು ದೊಡ್ಡ ನಿಂಬೆಹಣ್ಣು)
  3. ಒಂದು ಚಮಚ ಅಡುಗೆ ಸೋಡಾ
  4. ಸ್ವಲ್ಪ ಬಟ್ಟೆ ಸೋಪ್
  5. ಒಂದು ಹಳೇ ಬ್ರಷ್
  6. ಒಂದು ದೊಡ್ಡ ಪಾತ್ರೆ ಅಥವಾ ಟಬ್
  7. ಅಗತ್ಯವಿದ್ದಷ್ಟು ಬಿಸಿ ನೀರು

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ:

  1. ಎಣ್ಣೆ ಬಾಟಲಿಯಿಂದ ಹೆಚ್ಚಿನ ಎಣ್ಣೆಯನ್ನು ಪೇಪರ್ ಸಹಾಯದಿಂದ ಒರೆಸಿ ತೆಗೆಯಿರಿ.
  2. ನಂತರ ಒಂದು ಟಬ್ ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. 
  3. ಅದಕ್ಕೆ ಪಾತ್ರೆ ತೊಳೆಯೋ ಲಿಕ್ವಿಡ್, ವಿನೆಗರ್ ಮತ್ತು ಸೋಡಾ ಸೇರಿಸಿ. 
  4. ಎಣ್ಣೆ ಬಾಟಲಿ ಮತ್ತು ಮುಚ್ಚಳವನ್ನು ಹದಿನೈದು ನಿಮಿಷ ನೆನೆಸಿಡಿ. 
  5. ಮತ್ತೆ ಸೋಪು ಮತ್ತು ಬ್ರಷ್ ನ ಸಹಾಯದಿಂದ ಸಂದಿ ಮೂಲೆಗಳನ್ನು ಸ್ವಚ್ಛಗೊಳಿಸಿ. 
  6. ನೀರು ಬದಲಿಸಿ, ಪುನಃ ಬಿಸಿ ನೀರು ಹಾಕಿ. 
  7. ಕೊನೆಯಲ್ಲಿ ಸ್ಕ್ರಬ್ಬರ್ ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಒಮ್ಮೆ ಎಲ್ಲ ಜಾಗವನ್ನು ತಿಕ್ಕಿ. 
  8. ಚೆನ್ನಾಗಿ ತೊಳೆದು, ನೀರಾರಲು ಬಿಡಿ. 

Related Posts Plugin for WordPress, Blogger...