ಮಂಗಳವಾರ, ಸೆಪ್ಟೆಂಬರ್ 15, 2020

Cheenikai dose recipe in Kannada | ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ

 

ಸಿಹಿಗುಂಬಳ ದೋಸೆ

Cheenikai dose recipe in Kannada | ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ 


ಸಿಹಿಕುಂಬಳಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಸಿಪ್ಪೆ ತೆಗೆದು ಕತ್ತರಿಸಿದ ಸಿಹಿಗುಂಬಳಕಾಯಿ
  3. 1/2 ಕಪ್ ತೆಂಗಿನತುರಿ
  4. ಸಣ್ಣ ಚೂರು ಶುಂಠಿ
  5. ಸ್ವಲ್ಪ ಕರಿಬೇವು
  6. 2 - 3 ಒಣಮೆಣಸಿನಕಾಯಿ
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 2 - 3 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  3. ನಂತ್ರ ಚೀನಿಕಾಯಿ (ಸಿಹಿಗುಂಬಳ) ಯನ್ನು ಮಿಕ್ಸಿ ಜಾರಿಗೆ ಹಾಕಿ. 
  4. ತೆಂಗಿನತುರಿ, ಶುಂಠಿ, ಕರಿಬೇವು ಮತ್ತು ಒಣಮೆಣಸು ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆದು, ಅದೇ ಪಾತ್ರೆಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  7. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  11. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 9, 2020

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ

 

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ



ನಿಂಬೆಹಣ್ಣಿನ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 12 - 15 ನಿಂಬೆಹಣ್ಣು
  2. 4 - 5 ಟೇಬಲ್ ಚಮಚ ಉಪ್ಪು 
  3. 3 - 4 ಟೇಬಲ್ ಚಮಚ ಅಚ್ಚಖಾರದಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
  4. 1/2 ಟೀಸ್ಪೂನ್ ಅರಿಶಿನ ಪುಡಿ
  5. 1/4 ಟೀಸ್ಪೂನ್ ಇಂಗು
  6. 2 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಟೀಸ್ಪೂನ್ ಸಾಸಿವೆ
  8. 1 ಟೀಸ್ಪೂನ್ ಮೆಂತೆ
  9. ಸ್ವಲ್ಪ ಕರಿಬೇವಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣನ್ನು ತೊಳೆದು ನೀರಾರಿಸಿಕೊಳ್ಳಿ. 
  2.  ನಿಂಬೆಹಣ್ಣನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
  3. ಕತ್ತರಿಸುವಾಗ ಸ್ವಲ್ಪ ನಿಂಬೆ ರಸ ಮತ್ತು ಬೀಜ ತೆಗೆಯಿರಿ. ಈ ರಸವನ್ನು ಅಗತ್ಯವಿದ್ದರೆ ಕೊನೆಯಲ್ಲಿ ಬಳಸಬಹುದು. 
  4. ನೀರಿನಂಶ ಇಲ್ಲದೆ ಇರುವ ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಂತ ಹಂತವಾಗಿ ಉಪ್ಪು ಸೇರಿಸಿ ಹಾಕಿ. 
  5. ದಿನಕ್ಕೊಮ್ಮೆ ಮಗುಚುತ್ತಾ 7 - 10 ದಿವಸ ಬಿಡಿ. 
  6. ಆಮೇಲೆ ಅಚ್ಚಖಾರದ ಪುಡಿ, ಇಂಗು ಮತ್ತು ಅರಿಶಿನ ಸೇರಿಸಿ. 
  7. ಚೆನ್ನಾಗಿ ಕಲಸಿ. ಚಮಚದಲ್ಲಿ ನೀರಿನಂಶ ಇಲ್ಲದಂತೆ ನೋಡಿಕೊಳ್ಳಿ. 
  8. ಬೇಕೆನಿಸಿದರೆ  ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  9. ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆ ಬಿಸಿ ಆರಿದ ಮೇಲೆ ಹಾಕಿ. 
  10. ಮುಚ್ಚಳ ಮುಚ್ಚಿ ಇನ್ನೆರಡು ದಿನ ಬಿಡಿ. ಉಪ್ಪಿನಕಾಯಿ ಸವಿಯಲು ಸಿದ್ಧ.  

ಗುರುವಾರ, ಆಗಸ್ಟ್ 20, 2020

Mushti kadubu recipe in Kannada | ಮುಷ್ಟಿ ಕಡುಬು ಮಾಡುವ ವಿಧಾನ

 

Mushti kadubu recipe in Kannada | ಮುಷ್ಟಿ ಕಡುಬು ಮಾಡುವ ವಿಧಾನ

ಮುಷ್ಟಿ ಕಡುಬು ವಿಡಿಯೋ

ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1/2 ಕಪ್ ನೀರು
  3. 1/2 ಕಪ್ ಬೆಲ್ಲ
  4. 1/4 ಕಪ್ ತೆಂಗಿನತುರಿ
  5. 1 ಚಮಚ ತುಪ್ಪ
  6. 1/4 ಚಮಚ ಉಪ್ಪು
  7. ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಖಾರ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 3/4 ಕಪ್ ನೀರು (1/2 ಕಪ್ + 1/4 ಕಪ್)
  3. 1/4 ಕಪ್ ತೆಂಗಿನತುರಿ
  4. 1 ಚಮಚ ತುಪ್ಪ
  5. 1/2 ಚಮಚ ಸಾಸಿವೆ
  6. 1/2 ಚಮಚ ಕಡ್ಲೆಬೇಳೆ
  7. 1/2 ಚಮಚ ಉದ್ದಿನಬೇಳೆ
  8. 1/2 ಒಣಮೆಣಸು
  9. 1 ಚಮಚ ಕತ್ತರಿಸಿದ ಕರಿಬೇವಿನ ಸೊಪ್ಪು
  10. 1/2 ಚಮಚ ಕತ್ತರಿಸಿದ ಶುಂಠಿ
  11. 1/2 ಚಮಚ ಕತ್ತರಿಸಿದ ಹಸಿಮೆಣಸಿನಕಾಯಿ
  12. 1/2 ಚಮಚ ಉಪ್ಪು

ಸಿಹಿ ಮುಷ್ಟಿ ಕಡುಬು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ನೀರು ಕುದಿಯಲು ಇಡಿ.  
  2. ಅದಕ್ಕೆ ತೆಂಗಿನತುರಿ, ಉಪ್ಪು, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ. 
  3. ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ. 
  4. ಚೆನ್ನಾಗಿ ಮಗುಚಿ, ಸ್ಟವ್ ಆಫ್ ಮಾಡಿ. 
  5. ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ. 
  6. 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ. 

ಖಾರ ಮುಷ್ಟಿ ಕಡುಬು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  2. ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. 
  3. ಕತ್ತರಿಸಿದ ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ, ಹುರಿಯಿರಿ. 
  4. ಉರಿ ಕಡಿಮೆ ಮಾಡಿ, ತೆಂಗಿನತುರಿ ಮತ್ತು ಉಪ್ಪು ಸೇರಿಸಿ. 
  5. ಅರ್ಧ ಕಪ್ ನೀರು ಸೇರಿಸಿ, ಕುದಿಯಲು ಇಡಿ.  
  6. ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ. 
  7. ಚೆನ್ನಾಗಿ ಮಗುಚಿ, ಉಳಿದ ಕಾಲು ಕಪ್ ನೀರು ಹಾಕಿ ಪುನಃ ಮಗುಚಿ. 
  8. ಸ್ಟವ್ ಆಫ್ ಮಾಡಿ. 
  9. ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ. 
  10. 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ. 
Related Posts Plugin for WordPress, Blogger...