ಶುಕ್ರವಾರ, ಜುಲೈ 10, 2020

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ


ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 5 - 6 ಬೆಳ್ಳುಳ್ಳಿ ಗಡ್ಡೆ ಅಥವಾ 3/4 ಕಪ್ ಸಿಪ್ಪೆ ತೆಗೆದ ಬೆಳ್ಳುಳ್ಳಿ
  2. 1 ನಿಂಬೆಹಣ್ಣು ಗಾತ್ರದ ಹುಣಿಸೇಹಣ್ಣು
  3. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  4. 3 - 4 ಟೀಸ್ಪೂನ್ ಅಚ್ಚಖಾರದ ಪುಡಿ
  5. 1/4 ಟೀಸ್ಪೂನ್  ಇಂಗು
  6. 1/4 ಟೀಸ್ಪೂನ್ ಅರಿಶಿನ
  7. 1 ಟೀಸ್ಪೂನ್ ಸಾಸಿವೆ
  8. ಸ್ವಲ್ಪ ಕರಿಬೇವು
  9. 2 - 4 ಟೇಬಲ್ ಚಮಚ ಎಣ್ಣೆ
  10. 2 ಟೀಸ್ಪೂನ್ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಮೆಂತೆ
  2. 1 ಟೇಬಲ್ ಚಮಚ ಜೀರಿಗೆ
  3. 2 ಟೇಬಲ್ ಚಮಚ ಕೊತ್ತಂಬರಿ ಬೀಜ

ದಿಢೀರ್ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಬೆಳ್ಳುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  3. ನಂತ್ರ ಅದೇ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಸೇರಿಸಿ. 
  5. ಸಾಸಿವೆ ಸಿಡಿದ ಮೇಲೆ, ಇಂಗು ಮತ್ತು ಕರಿಬೇವು ಹಾಕಿ. 
  6. ಆಮೇಲೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. 
  7. ಹುಣಿಸೆಹಣ್ಣಿನ ರಸ ಸೇರಿಸಿ. 
  8. ಅಚ್ಚಖಾರದ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ. ಒಂದೆರಡು ನಿಮಿಷ ಕುದಿಸಿ. 
  9. ಕೊನೆಯಲ್ಲಿ ಉಪ್ಪಿನಕಾಯಿ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಗುಚಿ. 
  10. ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಬೆಲ್ಲ ಸೇರಿಸಬಹುದು .  
  11. ರುಚಿಕರ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಫ್ರಿಡ್ಜ್ ನಲ್ಲಿ ಒಂದೆರಡು ತಿಂಗಳು ಇಡಬಹುದು. 

ಬುಧವಾರ, ಜುಲೈ 8, 2020

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ 


ರವೇ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರವೇ (ಮೀಡಿಯಂ ಅಥವಾ ಸಣ್ಣ ರವೇ)
  2. 1 ಕಪ್ ನೀರು
  3. 1/2 ಟೀಸ್ಪೂನ್ ತುಪ್ಪ 
  4. ಉಪ್ಪು ರುಚಿಗೆ ತಕ್ಕಷ್ಟು

ರವೇ ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ, ಚೆನ್ನಾಗಿ ಮಗುಚಿ ಬೇಯಿಸಿ. 
  3. ಗಟ್ಟಿಯಾಗುತ್ತಾ ಬಂದಾಗ,  ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಹೆಚ್ಚಿನ ಬಿಸಿ ಆರಿದ ಮೇಲೆ, ಚೆನ್ನಾಗಿ ನಾದಿ.
  5. ತುಂಬ ಗಟ್ಟಿ ಎನಿಸಿದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಗಂಟಿಲ್ಲದಂತೆ  ಹಿಟ್ಟನ್ನು ತಯಾರಿಸಿಕೊಳ್ಳಿ. 
  6. ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. ಎಣ್ಣೆಯ ಬದಲು, ಸ್ವಲ್ಪ ತೆಂಗಿನತುರಿ ಬೇಕಾದರೂ ಹಾಕಬಹುದು. 
  7. ಸೆಕೆಯಲ್ಲಿ (ಆವಿಯಲ್ಲಿ) 5 - 6 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಶನಿವಾರ, ಜುಲೈ 4, 2020

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ


ಸಬ್ಬಸ್ಸಿಗೆ ಸೊಪ್ಪು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 1/2 ಕಪ್ ತೆಳು ಅವಲಕ್ಕಿ ಅಥವಾ 1/4 ಕಪ್ ಗಟ್ಟಿ ಅವಲಕ್ಕಿ 
  4. 1 ಟೀಸ್ಪೂನ್ ಮೆಂತ್ಯ
  5. ಉಪ್ಪು ರುಚಿಗೆ ತಕ್ಕಷ್ಟು
  6. 2 ಟೀಸ್ಪೂನ್ ಎಣ್ಣೆ
  7. 1/2 ಟೀಸ್ಪೂನ್ ಸಾಸಿವೆ
  8. 1/2 ಟೀಸ್ಪೂನ್ ಜೀರಿಗೆ
  9. 1-2 ಹಸಿಮೆಣಸಿನಕಾಯಿ
  10. 1 ಈರುಳ್ಳಿ
  11. 1 ಸಣ್ಣ ಕಟ್ಟು ಸಬ್ಬಸ್ಸಿಗೆ ಸೊಪ್ಪು
  12. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ :

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ. 
  3. ಅಕ್ಕಿ ಮತ್ತು ಬೇಳೆ ನೆನೆಸಿದ ನಂತ್ರ, ನೀರು ಬಗ್ಗಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ನುಣ್ಣಗೆ ರುಬ್ಬಿರಿ.
  4. ಕೊನೆಯಲ್ಲಿ ನೆನೆಸಿದ ಅವಲಕ್ಕಿ ಸೇರಿಸಿ ನುಣ್ಣಗೆ ಅರೆಯಿರಿ. 
  5. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  6. ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
  7. ಆಮೇಲೆ ಉಪ್ಪು ಸೇರಿಸಿ ಕಲಸಿ. 
  8. ಬಾಣಲೆಯಲ್ಲಿ ಎರಡು ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ. 
  9. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  10. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪು ಸೇರಿಸಿ, ಹುರಿದು, ಬಿಸಿ ಆರಿದ ನಂತ್ರ ಹಿಟ್ಟಿಗೆ ಸೇರಿಸಿ. 
  11. ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ. 
  12. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿ. 
  13. ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.


Related Posts Plugin for WordPress, Blogger...