ಶುಕ್ರವಾರ, ಮೇ 8, 2020

Halkova recipe in Kannada | ಹಾಲ್ಕೊವಾ ಮಾಡುವ ವಿಧಾನ

Halkova recipe in Kannada
Halkova recipe in Kannada | ಹಾಲ್ಕೊವಾ ಮಾಡುವ ವಿಧಾನ

ಹಾಲ್ಕೊವಾ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಮೈದಾ
  2. 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. 1/4 ಕಪ್ ತುಪ್ಪ
  4. 1 - 2 ಏಲಕ್ಕಿ

ಹಾಲ್ಕೊವಾ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಸಕ್ಕರೆ ಮತ್ತು ಏಲಕ್ಕಿ ತೆಗೆದುಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ.  
  3. ಕೂಡಲೇ ಮೈದಾ ಸೇರಿಸಿ ಮಧ್ಯಮ  ಉರಿಯಲ್ಲಿ ಚೆನ್ನಾಗಿ ಮಗುಚುತ್ತಾ 7 - 8 ನಿಮಿಷ ಹುರಿಯಿರಿ. ಹಸಿವಾಸನೆ ಹೋಗಿ ಹುರಿದ ಘಮ ಬರಬೇಕು. 
  4. ಸ್ಟವ್ ಆಫ್ ಮಾಡಿ. ಒಂದೆರಡು ನಿಮಿಷ ಬಿಟ್ಟು ಸಕ್ಕರೆ ಪುಡಿ ಸೇರಿಸಿ.
  5. ಚೆನ್ನಾಗಿ ಕಲಸಿ. ಒಂದು ಪ್ಲೇಟ್ ಅಥವಾ ಟ್ರೇ ಗೆ ಹಾಕಿ ತಣ್ಣಗಿರುವ ಜಾಗದಲ್ಲಿ ಒಂದೆರಡು ಘಂಟೆ ಬಿಡಿ. ಫ್ರಿಡ್ಜ್ ನಲ್ಲಿ ೧೫-೨೦ ನಿಮಿಷ ಇಟ್ಟರೆ ಸಾಕು.   
  6. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿದು ಆನಂದಿಸಿ. 

ಬುಧವಾರ, ಮೇ 6, 2020

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

Mango happala recipe in Kannada

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

ಫ್ರೂಟಿ, ಮಾಜ ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 2 ಕಪ್ ಕತ್ತರಿಸಿದ ಮಾವಿನಹಣ್ಣು
  2. 2 ಟೇಬಲ್ ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ಚಿಟಿಕೆ ಉಪ್ಪು
  4. 1 - 2 ಏಲಕ್ಕಿ
  5. ಅಗತ್ಯವಿದ್ದಷ್ಟು ನೀರು

ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ಮಾವಿನ ಹಣ್ಣು, ಸಕ್ಕರೆ, ಉಪ್ಪು ಮತ್ತು ಏಲಕ್ಕಿಯನ್ನು ತೆಗೆದುಕೊಳ್ಳಿ.
  2. ನುಣ್ಣಗೆ ಅರೆದು ಒಂದು ಬಾಣಲೆಗೆ ಹಾಕಿ. ಮಿಕ್ಸಿ ಜಾರು ತೊಳೆಯುವಷ್ಟು ಮಾತ್ರ ನೀರು ಸೇರಿಸಿ.  
  3. ಮಧ್ಯಮ  ಉರಿಯಲ್ಲಿ ಮಗುಚುತ್ತಾ 7 - 8 ನಿಮಿಷ, ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.
  4. ಸ್ಟವ್ ಆಫ್ ಮಾಡಿ. ಒಂದು ಪ್ಲೇಟ್ ಗೆ ಸುರಿದು ಹರಡಿ.  
  5. ಬಿಸಿಲಿನಲ್ಲಿ ಒಣಗಲು ಇಡಿ. ಕಸ-ಧೂಳು ಸೇರದಿರಲು ಮೊದಲನೇ ದಿನ ಒಂದು ಬಟ್ಟೆ ಮುಚ್ಚುವುದು ಒಳ್ಳೆಯದು.  
  6. ಎರಡರಿಂದ ಮೂರು ದಿನ ಚೆನ್ನಾಗಿ ಒಣಗಿದ ಮೇಲೆ ಅಂಚು ಬಿಡಿಸಿ, ತೆಗೆಯಿರಿ.  
  7. ಬೇಕಾದ ಆಕಾರಕ್ಕೆ ಕತ್ತರಿಸಿ ಅಥವಾ ಸುರುಳಿ ಮಾಡಿ ಎತ್ತಿಡಿ.
  8. ಒಂದು ವರ್ಷದವರೆಗೂ ಹಾಳಾಗುವುದಿಲ್ಲ. ಬೇಕಾದರೆ ಫ್ರಿಡ್ಜ್ ನಲ್ಲಿಡಿ.  ಚಾಕಲೇಟ್ ನಂತೆ ಸವಿದು ಆನಂದಿಸಿ. 

ಮಂಗಳವಾರ, ಮೇ 5, 2020

Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

Lemon juice powder recipe in Kannada
Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

ನಿಂಬೆಹಣ್ಣು ಜ್ಯೂಸು ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 4 - 5 ನಿಂಬೆಹಣ್ಣು
  2. 1 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ದೊಡ್ಡ ಚಿಟಿಕೆ ಉಪ್ಪು
  4. 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ

ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ:

  1. 4 - 5 ನಿಂಬೆಹಣ್ಣು ತೆಗೆದುಕೊಂಡು ಚೆನ್ನಾಗಿ ಒತ್ತಿ ತಿಕ್ಕಿ. ರಸ ತೆಗೆಯಲು ಸುಲಭವಾಗುವುದು. 
  2. ನಿಂಬೆಹಣ್ಣಿನ ರಸ ತೆಗೆಯಿರಿ.
  3. ರಸವನ್ನು ಅಳತೆ ಮಾಡಿ ಒಂದು ಅಗಲವಾದ ತಟ್ಟೆಗೆ ಹಾಕಿ. 
  4.  ರಸದ ನಾಲ್ಕರಷ್ಟು ಸಕ್ಕರೆ ಸೇರಿಸಿ (ಒಂದು ಅಳತೆ ರಸಕ್ಕೆ ನಾಲ್ಕು ಅಳತೆ ಸಕ್ಕರೆ)
  5. ಬೇಕಾದಲ್ಲಿ ಉಪ್ಪು ಮತ್ತು ಶುಂಠಿ ಸೇರಿಸಿ. ಏಲಕ್ಕಿ ಅಥವಾ ನಿಮ್ಮಿಷ್ಟದ ಬೇರೆ ಮಸಾಲೆಯನ್ನು ಸೇರಿಸಬಹುದು.  
  6. ಒಮ್ಮೆ ಕಲಸಿ, ಫ್ಯಾನ್ ಕೆಳಗೆ ಅಥವಾ ಹಾಗೆ ಒಣಗಲು ಬಿಡಿ. ಬಿಸಿಲಿಗೆ ಇಡುವುದು ಬೇಡ. 
  7. ದಿನಕ್ಕೊಮ್ಮೆ ಮಗುಚಿ, ಪುನಃ ಒಣಗಲು ಬಿಡಿ.  
  8. 3 - 4 ದಿನಗಳಲ್ಲಿ ಒಣಗುವುದು. 
  9. ಸಂಪೂರ್ಣ ಒಣಗಿದ ಮೇಲೆ, ಮಿಕ್ಸಿಯಲ್ಲಿ ಪುಡಿ ಮಾಡಿ. 
  10. ಡಬ್ಬದಲ್ಲಿ ಹಾಕಿ ಎತ್ತಿಡಿ. ನಿಂಬೆ ರಸಕ್ಕೆ ಸಕ್ಕರೆ ಪುಡಿ ಸೇರಿಸಿ, ಪೇಸ್ಟ್ ನಂತೆ ಮಾಡಿಯೂ ಇಡಬಹುದು. 
  11. ಜ್ಯೂಸು ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ನೀರಿನಲ್ಲಿ ಸೇರಿಸಿ, ಕುಡಿಯಿರಿ. 
Related Posts Plugin for WordPress, Blogger...