ಬುಧವಾರ, ಆಗಸ್ಟ್ 8, 2018

French fries recipe in Kannada | ಫ್ರೆಂಚ್ ಫ್ರೈಸ್ ಮಾಡುವ ವಿಧಾನ

French fries recipe in Kannada

French fries recipe in Kannada | ಫ್ರೆಂಚ್ ಫ್ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ತಾಜಾ ಆಲೂಗಡ್ಡೆ 
  2. ಉಪ್ಪು ನಿಮ್ಮ ರುಚಿ ಪ್ರಕಾರ
  3. ಎಣ್ಣೆ ಕಾಯಿಸಲು

ಫ್ರೆಂಚ್ ಫ್ರೈಸ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ. 
  2. ನಂತರ ಉದ್ದುದ್ದನಾಗಿ ಒಂದೇ ಅಳತೆಗೆ ಕತ್ತರಿಸಿ. 
  3. ಕತ್ತರಿಸಿದ ನಂತ್ರ ತಾಜಾ ಆಲೂಗಡ್ಡೆ ಅಲ್ಲವಾದಲ್ಲಿ, ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ. ಅಥವಾ ಎರಡರಿಂದ ಮೂರು ಬಾರಿ ನೀರು ಬದಲಾಯಿಸಿ ತೊಳೆಯಿರಿ. 
  4. ಆಮೇಲೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ಉಪ್ಪು (ಎರಡು ಆಲೂಗಡ್ಡೆಗೆ ಸುಮಾರು ಒಂದು ಚಮಚ ಉಪ್ಪು) ಹಾಕಿ ಕುದಿಯಲು ಇಡಿ. 
  5. ಕುದಿಯುವ ನೀರಿಗೆ, ಕತ್ತರಿಸಿದ ಆಲೂಗಡ್ಡೆ ಹಾಕಿ ಎರಡು ನಿಮಿಷ ಕುದಿಸಿ. 
  6. ಸ್ಟವ್ ಆಫ್ ಮಾಡಿ, ನೀರನ್ನು ಬಸಿಯಿರಿ. 
  7. ನಂತ್ರ ಬಟ್ಟೆಯ ಮೇಲೆ ಹರಡಿ. 
  8. ನೀರಾರಿದ ಮೇಲೆ (ಸುಮಾರು ೧೫ ನಿಮಿಷ) ಎಣ್ಣೆಯಲ್ಲಿ ಖಾಯಿಸಬಹುದು. ಹೆಚ್ಚು ಗರಿಗರಿಯಾಗಲು, ಒಂದು ಜಿಪ್ ಲಾಕ್ ಕವರ್ ಗೆ ಹಾಕಿ ಫ್ರೀಜರ್ ನಲ್ಲಿ ಇಪ್ಪತ್ತು ನಿಮಿಷ ಇಟ್ಟು ನಂತರ ಖಾಯಿಸಿ. ಫ್ರೀಜರ್ ನಲ್ಲಿ ಕೆಲವು ದಿನಗಳ ಕಾಲ ಇಟ್ಟು ಯಾವಾಗ ಬೇಕೋ ಅವಾಗ ಖಾಯಿಸಬಹುದು. 
  9. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಿಸಿ ಎಣ್ಣೆಗೆ ಫ್ರೀಜರ್ ನಲ್ಲಿ ಇಟ್ಟ ಆಲೂಗಡ್ಡೆ ಹಾಕಿ ಕಾಯಿಸಿ.
  10. ಗುಳ್ಳೆಗಳು ಕಡಿಮೆ ಆದಮೇಲೆ, ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸಿ, ತೆಗೆಯಿರಿ. 
  11. ಟೊಮೇಟೊ ಸಾಸ್ ನೊಂದಿಗೆ ಬಡಿಸಿ. ಅಥವಾ ಒಂದು ಸಣ್ಣ ಬಟ್ಟಲಿನಲ್ಲಿ ಅಚ್ಚಖಾರದ ಪುಡಿ, ಉಪ್ಪು ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿ, ಕಾಯಿಸಿದ ಫ್ರೆಂಚ್ ಫ್ರೈಸ್ ಗೆ, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಸೋಮವಾರ, ಆಗಸ್ಟ್ 6, 2018

Jelly recipe in Kannada | ಜೆಲ್ಲಿ ಮಾಡುವ ವಿಧಾನ

Jelly recipe in Kannada

Jelly recipe in Kannada | ಜೆಲ್ಲಿ ಮಾಡುವ ವಿಧಾನ 


ಜೆಲ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಪ್ಯಾಕ್ ಜೆಲ್ಲಿ ಪೌಡರ್
  2. 1/2 ಲೀ ನೀರು (ಅಥವಾ ಪ್ಯಾಕ್ ಮೇಲೆ ನಮೂದಿಸಿದಷ್ಟು) 

ಜೆಲ್ಲಿ ಮಾಡುವ ವಿಧಾನ:

  1. ಪಾಕ್ನಲ್ಲಿರುವ ಎರಡೂ ಬಗೆಯ ಪುಡಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ.  ಚೆನ್ನಾಗಿ ಕಲಸಿ. 
  2. ನಂತ್ರ ಇನ್ನೊಂದು ಪಾತ್ರೆಯಲ್ಲಿ ಅರ್ಧ ಲೀ ನೀರು ಕುದಿಸಿ. ಸ್ಟವ್ ಆಫ್ ಮಾಡಿ. 
  3. ಒಂದು ನಿಮಿಷದ ನಂತರ, ಕುದಿಸಿದ ನೀರನ್ನು ಪೌಡರ್ ಇರುವ ಪಾತ್ರೆಗೆ ಹಾಕಿ, ಚೆನ್ನಾಗಿ ಕಲಡಿಸಿ. 
  4. ಬಿಸಿ ಕಡಿಮೆ ಆದ ಮೇಲೆ ನಿಮ್ಮಿಷ್ಟದ ಅಚ್ಚು ಅಥವಾ ಪಾತ್ರೆಗೆ ಹಾಕಿ, ಜೆಲ್ಲಿ ಆಗಲು ಬಿಡಿ. ಫ್ರಿಡ್ಜ್ನಲ್ಲಿಟ್ಟರೆ, ಬೇಗ ಮತ್ತು ಚೆನ್ನಾಗಿ ಆಗುವುದು.  

ಶುಕ್ರವಾರ, ಆಗಸ್ಟ್ 3, 2018

Kesuvina ele chutney recipe in Kannada | ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ

Kesuvina ele chutney recipe in Kannada

Kesuvina ele chutney recipe in Kannada | ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ 

ಕೆಸುವಿನ ಎಲೆ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 7 - 8 ಮಧ್ಯಮ ಗಾತ್ರದ ಕೆಸುವಿನ ಎಲೆ
  2. 2 - 4 ಹಸಿ ಮೆಣಸಿನಕಾಯಿ
  3. 4 - 5 ಎಸಳು ಬೆಳ್ಳುಳ್ಳಿ
  4. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  5. 2 ಟೇಬಲ್ ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ತೆಂಗಿನೆಣ್ಣೆ ಅಥವಾ ಅಡುಗೆ ಎಣ್ಣೆ
  4. 4 - 5 ಎಸಳು ಬೆಳ್ಳುಳ್ಳಿ, ಜಜ್ಜಿದ್ದು

ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ:

  1. ಕೆಸುವಿನ ಸೊಪ್ಪನ್ನು ತೊಳೆದು, ಒರೆಸಿ, ಕತ್ತರಿಸಿ. 
  2. ಅದೇ ರೀತಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. 
  4. ಆಮೇಲೆ ಕತ್ತರಿಸಿದ ಕೆಸುವಿನ ಸೊಪ್ಪು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.  
  5. ಕೊನೆಯಲ್ಲಿ ಉಪ್ಪು ಮತ್ತು ಹುಣಿಸೆರಸ ಹಾಕಿ, ಸ್ಟವ್ ಆಫ್ ಮಾಡಿ. 
  6. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ. 
  7. ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಎಣ್ಣೆ ಮತ್ತು ಸಾಸಿವೆ ಹಾಕಿ ಒಗ್ಗರಣೆ ಮಾಡಿ. 
  8. ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಹುರಿಯಿರಿ.  
  9. ಅರೆದ ಮಿಶ್ರಣವನ್ನು ಹಾಕಿ, ಐದು ನಿಮಿಷ ಸಣ್ಣ ಉರಿಯಲ್ಲಿಮಗುಚಿ. ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. 
Related Posts Plugin for WordPress, Blogger...