ಮಂಗಳವಾರ, ಜುಲೈ 10, 2018

Karjoora milkshake recipe in Kannada | ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ

Karjoora milkshake recipe in Kannada

Karjoora milkshake recipe in Kannada | ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ 

ಖರ್ಜೂರ ಮಿಲ್ಕ್ ಶೇಕ್ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 1 ಏಲಕ್ಕಿ 
  3. 1 ಕಪ್ ಹಾಲು

ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 1 ಸಣ್ಣ ಅಥವಾ 1/2 ದೊಡ್ಡ ಬಾಳೆಹಣ್ಣು 
  3. 1 ಕಪ್ ಹಾಲು

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 4 - 5 ಗೋಡಂಬಿ 
  3. 4 - 5 ಸಿಪ್ಪೆ ತೆಗೆದ ಬಾದಾಮಿ
  4. ಸಣ್ಣ ಚೂರು ಚಕ್ಕೆ 
  5. 1 ಕಪ್ ಹಾಲು

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೧:

  1. ಖರ್ಜೂರ ಮತ್ತು ಏಲಕ್ಕಿಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ. 

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೨:

  1. ಖರ್ಜೂರವನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಬಾಳೆಹಣ್ಣು ಮತ್ತು ಉಳಿದ ಹಾಲು ಹಾಕಿ ಅರೆದು ಕುಡಿಯಲು ನೀಡಿ. 

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೩:

  1. ಖರ್ಜೂರ, ಗೋಡಂಬಿ, ಬಾದಾಮಿ ಮತ್ತು ಚಕ್ಕೆಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ. 

ಶನಿವಾರ, ಜುಲೈ 7, 2018

Tomato murukku recipe in Kannada | ಟೊಮೇಟೊ ಮುರುಕ್ಕು ಮಾಡುವ ವಿಧಾನ

Tomato murukku recipe in Kannada

Tomato murukku recipe in Kannada | ಟೊಮೇಟೊ ಮುರುಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
  3. 1/4 ಕಪ್ ಕಡ್ಲೆಹಿಟ್ಟು
  4. 2 ಮಧ್ಯಮ ಗಾತ್ರದ ಟೊಮೇಟೊ
  5. 1 ಟೀ ಸ್ಪೂನ್ ಅಚ್ಚಖಾರದ ಪುಡಿ
  6. 1 ಟೀ ಸ್ಪೂನ್ ಜೀರಿಗೆ ಅಥವಾ 1/2 ಟೀ ಸ್ಪೂನ್ ಜೀರಿಗೆ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. ಒಂದು ಲಿಂಬೆಹಣ್ಣಿನ ಗಾತ್ರದ ಬೆಣ್ಣೆ 
  9. ಉಪ್ಪು ರುಚಿಗೆ ತಕ್ಕಷ್ಟು 
  10. ಎಣ್ಣೆ ಕಾಯಿಸಲು

ಟೊಮೇಟೊ ಮುರುಕ್ಕು ಮಾಡುವ ವಿಧಾನ:

  1. ಹುರಿಗಡಲೆಯನ್ನು ಮಿಕ್ಸಿಜಾರಿನಲ್ಲಿ ಹಾಕಿ ನುಣ್ಣನೆ ಪುಡಿಮಾಡಿ ಕೊಳ್ಳಿ. 
  2. ನಂತರ ಟೊಮ್ಯಾಟೊವನ್ನು ಮಿಕ್ಸಿಜಾರಿನಲ್ಲಿ ನೀರು ಹಾಕದೆ ಅರೆದಿಟ್ಟುಕೊಳ್ಳಿ. 
  3. ಒಂದು ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. 
  4. ಅದಕ್ಕೆ 2 - 3 ಟೇಬಲ್ ಚಮಚ ಹುರಿಗಡಲೆ ಹಿಟ್ಟು ಸೇರಿಸಿ. 
  5. ನಂತ್ರ ಕಡ್ಲೆಹಿಟ್ಟು ಸೇರಿಸಿ. 
  6. ಆಮೇಲೆ ಖಾರದಪುಡಿ, ಜೀರಿಗೆ ಪುಡಿ, ಇಂಗು ಮತ್ತು ಉಪ್ಪು ಹಾಕಿ.
  7. ಬೆಣ್ಣೆ ಸೇರಿಸಿ, ಚೆನ್ನಾಗಿ ತಿಕ್ಕಿ ಕಲಸಿ. 
  8. ಸ್ವಲ್ಪ ಸ್ವಲ್ಪವೇ ಟೊಮೇಟೊ ಪೇಸ್ಟ್ ಸೇರಿಸಿ, ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
  9. ಎಣ್ಣೆ ಬಿಸಿ ಮಾಡಿ. 
  10. ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಮುರುಕ್ಕನ್ನು ನೇರವಾಗಿ ಬಿಸಿ ಎಣ್ಣೆಗೆ ಒತ್ತಿ.  ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಮಂಗಳವಾರ, ಜುಲೈ 3, 2018

Badam milk powder recipe in Kannada | ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ

Badam milk powder recipe in Kannada

Badam milk powder recipe in Kannada | ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ 

ಬಾದಾಮ್ ಮಿಲ್ಕ್ ಪೌಡರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಾದಾಮಿ
  2. 1/2 ಕಪ್ ಸಕ್ಕರೆ 
  3. 1/2 ಕಪ್ ಹಾಲಿನ ಪುಡಿ 
  4. 5 - 6 ಏಲಕ್ಕಿ 
  5. ದೊಡ್ಡ ಚಿಟಿಕೆ ಕೇಸರಿ 
  6. ದೊಡ್ಡ ಚಿಟಿಕೆ ಅರಿಶಿನ

ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಬಾದಾಮಿ ಹಾಕಿ ಅದನ್ನು ಕುದಿಯುವ ನೀರಿನಲ್ಲಿ ನೆನೆಸಿಡಿ. 
  2. 30 ನಿಮಿಷದ ನಂತರ ಸಿಪ್ಪೆ ತೆಗೆಯಿರಿ. 
  3. ಒಂದು ಬಾಣಲೆಯಲ್ಲಿ ಸಿಪ್ಪೆ ತೆಗೆದ ಬಾದಾಮಿ ಹಾಕಿ, ನೀರಾರುವವರೆಗೆ ಅಥವಾ ಗಾರ್ ಗರಿಯಾಗುವವರೆಗೆ ಹುರಿಯಿರಿ.
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ.
  5. ಸಕ್ಕರೆ ಮತ್ತು ಹಾಲಿನ ಪುಡಿ ಸೇರಿಸಿ. 
  6. ಏಲಕ್ಕಿ, ಕೇಸರಿ ಮತ್ತು ಅರಿಶಿನವನ್ನು ಸೇರಿಸಿ. 
  7. ನುಣ್ಣನೆ ಪುಡಿ ಮಾಡಿ.  ಬಾದಾಮ್ ಮಿಲ್ಕ್ ಪೌಡರ್ ತಯಾರಾಯಿತು. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.  
  8. ಒಂದು ಲೋಟ (150 ml) ಬಿಸಿ ಹಾಲಿಗೆ ಒಂದು ಟೇಬಲ್ ಚಮಚ ಬಾದಾಮ್ ಮಿಲ್ಕ್ ಪೌಡರ್, ಬೇಕಾದಲ್ಲಿ ಸ್ವಲ್ಪ ಸಕ್ಕರೆ ಹಾಕಿ, ಕರಗಿಸಿ, ಕುಡಿದು ಆನಂದಿಸಿ. 

Related Posts Plugin for WordPress, Blogger...