ಸೋಮವಾರ, ಮಾರ್ಚ್ 26, 2018

Sorekai bol koddel or sambar recipe in Kannada | ಸೋರೆಕಾಯಿ ಬೋಳು ಕೊದ್ದೆಲ್ ಅಥವಾ ಸಾಂಬಾರ್ ಮಾಡುವ ವಿಧಾನ

Sorekai bol koddel or sambar recipe in Kannada

Sorekai bol koddel or sambar recipe in Kannada | ಸೋರೆಕಾಯಿ ಬೋಳು ಕೊದ್ದೆಲ್ ಅಥವಾ ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೋರೆಕಾಯಿ
  2. 1/4 ಕಪ್ ತೊಗರಿಬೇಳೆ
  3. 1 - 2 ಹಸಿಮೆಣಸು
  4. 2 ಟೀಸ್ಪೂನ್ ಬೆಲ್ಲ
  5. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. 1 ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಎಣ್ಣೆ
  6. 1/4 ಟೀಸ್ಪೂನ್ ಇಂಗು

ಸೋರೆಕಾಯಿ ಬೋಳು ಕೊದ್ದೆಲ್ ಅಥವಾ ಸಾಂಬಾರ್ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ಅಗತ್ಯವಿದ್ದಷ್ಟು ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. 
  2. ಮುಚ್ಚಳ ಮುಚ್ಚಿ ಮೆತ್ತಗೆ ಬೇಯಿಸಿ. 
  3. ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ. 
  4. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೋರೆಕಾಯಿ ಮತ್ತು ಉಪ್ಪು ಹಾಕಿ ಸೋರೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  5. ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಬೆಲ್ಲ, ಹುಣಿಸೆರಸ ಮತ್ತು ಅಗತ್ಯವಿದ್ದಲ್ಲಿ ಉಪ್ಪು ಸೇರಿಸಿ. 
  6. ಸಾರಿನಪುಡಿ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. 
  7. ಅಗತ್ಯವಿದ್ದಲ್ಲಿ ನೀರು ಸೇರಿಸಿ ಕುದಿಯಲು ಇಡಿ. 
  8.  ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕುದ್ದ ಮೇಲೆ ಸ್ಟವ್ ಆಫ್ ಮಾಡಿ.
  9. ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮಾರ್ಚ್ 23, 2018

Kharbuja hannina panaka in Kannada | ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ

Kharbuja hannina panaka in Kannada

Kharbuja hannina panaka in Kannada | ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 ಕಪ್ ನೀರು
  2. 1/4 ಭಾಗ ಖರಬೂಜ ಹಣ್ಣು
  3. 2 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  4. ದೊಡ್ಡ ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು
  5. ದೊಡ್ಡ ಚಿಟಿಕೆ ಏಲಕ್ಕಿ ಪುಡಿಮಾಡಿದ್ದು

ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ:

  1. ಖರಬೂಜ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ.
  2. ಕತ್ತರಿಸಿದ ಹಣ್ಣು ಮತ್ತು ಬೆಲ್ಲವನ್ನು ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.  
  3. ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. 
  4. ಮೇಲಿನಿಂದ ಖರಬೂಜ ಹಣ್ಣಿನ ಸಣ್ಣ ಚೂರುಗಳನ್ನು ಹಾಕಿ ಕುಡಿಯಲು ಕೊಡಿ.

Mosaru vade recipe in kannada | ಮೊಸರು ವಡೆ ಮಾಡುವ ವಿಧಾನ

Mosaru vade recipe in kannada

Mosaru vade recipe in kannada | ಮೊಸರು ವಡೆ ಮಾಡುವ ವಿಧಾನ 

ಮೊಸರು ವಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಉದ್ದಿನ ಬೇಳೆ
  2. 1/2 ಟೀಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
  3. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  4. ಉಪ್ಪು ರುಚಿಗೆ ತಕ್ಕಷ್ಟು.
  5. ಸಕ್ಕರೆ ರುಚಿಗೆ ತಕ್ಕಷ್ಟು.
  6. ಸ್ವಲ್ಪ ಎಣ್ಣೆ ವಡೆ ಮಾಡಲು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಸಾಸಿವೆ 
  2. 1 ಟೀಸ್ಪೂನ್ಉದ್ದಿನಬೇಳೆ 
  3. 1/4 ಟೀಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
  4. 1 - 2 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  5. 4 - 5 ಕರಿಬೇವಿನ ಎಲೆ 
  6. 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 2 ಟೀಸ್ಪೂನ್ ಅಡುಗೆ ಎಣ್ಣೆ

ಮೊಸರು ವಡೆ ಮಾಡುವ ವಿಧಾನ:

  1. ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತ್ರ ಉದ್ದಿನ ಬೇಳೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು ಅರ್ಧ ಕಪ್ ಉದ್ದಿನಬೇಳೆಗೆ ಅರ್ಧ ಕಪ್ ನೀರು ಸೇರಿಸಿದ್ದೇನೆ. 
  3. ಅರೆದ ಹಿಟ್ಟಿಗೆ ಉಪ್ಪು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ. ಹಿಟ್ಟು ದಪ್ಪ ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು. 
  4. ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  5. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  6. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು ವಡೆಯನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. 
  7. ಬೇಯಿಸಿದ ವಡೆಗಳನ್ನು ಬಿಸಿ ನೀರಿರುವ ಪಾತ್ರೆಗೆ ಹಾಕಿ. ಹತ್ತು ನಿಮಿಷದ ನಂತ್ರ ಹಗುರವಾಗಿ ಒತ್ತಿ, ತೆಗೆದಿಡಿ. 
  8. ಇನ್ನೊಂದು ಬಟ್ಟಲಿನಲ್ಲಿ ಮೊಸರು ತೆಗೆದು ಕೊಂಡು ಸಕ್ಕರೆ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. 
  9. ಅದಕ್ಕೆ ನೀರಿನಲ್ಲಿ ನೆನೆಸಿ ತೆಗೆದಿಟ್ಟ ವಡೆ ಹಾಕಿ. 
  10. ಮೇಲಿನಿಂದ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಒಗ್ಗರಣೆ ಹಾಕಿ. 
  11. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಹತ್ತು ನಿಮಿಷ ಬಿಟ್ಟು ಸವಿದು ಆನಂದಿಸಿ. 


Related Posts Plugin for WordPress, Blogger...