ಗುರುವಾರ, ಮೇ 12, 2016

Alugadde palya for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ

Alugadde palya for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ 


ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1 ಈರುಳ್ಳಿ 
  3. 1 - 2 ಹಸಿರು ಮೆಣಸಿನಕಾಯಿ
  4. 4 - 5 ಕರಿಬೇವಿನ ಎಲೆ 
  5. 4 ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.


ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಪುಡಿ ಮಾಡಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. 
  3. ನಂತರ ಪುಡಿ ಮಾಡಿದ ಆಲೂಗಡ್ಡೆ ಹಾಕಿ, ಉಪ್ಪು ಹಾಕಿ ಕಲಸಿ. ಬೆಣ್ಣೆ ದೋಸೆಯೊಂದಿಗೆ ಬಡಿಸಿ. 







ಸೋಮವಾರ, ಮೇ 9, 2016

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

Kothambari soppu thambuli in kannada

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

ಕೊತ್ತಂಬರಿ ಸೊಪ್ಪಿನ ತಂಬುಳಿ ರುಚಿಕರ ಮತ್ತು ಒಂದು ವಿಶಿಷ್ಟ ಸ್ವಾದವನ್ನು ಹೊಂದಿದ ಅಡುಗೆಯಾಗಿದ್ದು ಅನ್ನದೊಂದಿಗೆ ಬಹಳ ಚೆನ್ನಾಗಿರುತ್ತದೆ. ತಾಜಾ ಕೊತ್ತಂಬರಿ ಸೊಪ್ಪು ಸಿಕ್ಕಿದಾಗ ಒಮ್ಮೆ ಮಾಡಿ ಸವಿಯಲು ಮರೆಯದಿರಿ.

ಕೊತ್ತಂಬರಿ ಸೊಪ್ಪು ತಂಬ್ಳಿ ವಿಡಿಯೋ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು
  2. 1/2 ಟೀಸ್ಪೂನ್ ಜೀರಿಗೆ
  3. 1 ಹಸಿರು ಮೆಣಸಿನಕಾಯಿ
  4. 1/2 ಕಪ್ ತೆಂಗಿನತುರಿ
  5. 1 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ:

  1. ಕೊತ್ತಂಬರಿ ಸೊಪ್ಪನ್ನು ಆಯ್ದು ಸ್ವಚ್ಛ ಮಾಡಿಕೊಳ್ಳಿ. 
  2. ಸಣ್ಣದಾಗಿ ಕತ್ತರಿಸಿ. ಹಸಿರುಮೆಣಸಿನ ಕಾಯಿಯನ್ನೂ ಕತ್ತರಿಸಿ. 
  3. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆಯನ್ನು ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಮತ್ತು ಹಸಿರುಮೆಣಸಿನ ಕಾಯಿಯನ್ನು ಹಾಕಿ.
  5. ಸೊಪ್ಪು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  6. ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿಯನ್ನು ಸೇರಿಸಿ. 
  7. ನುಣ್ಣಗೆ ಅರೆಯಿರಿ. 
  8. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  9. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮೇ 6, 2016

Boodu kumbalakai majjige huli in Kannada | ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ

 Boodu kumbalakai majjige huli in Kannada

 Boodu kumbalakai majjige huli in Kannada | ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ 


ಇದೊಂದು ಬಹಳ ರುಚಿಕರವಾದ, ಅಷ್ಟೇನೂ ಖಾರ ಅಥವಾ ಮಸಾಲೆ ಹೊಂದಿರದ ಹುಳಿ ಅಥವಾ ಸಾಂಬಾರ್ ಆಗಿದ್ದು ಮಜ್ಜಿಗೆ ಹುಳಿ, ಹುಳಿಶಾಕ, ಪಳದ್ಯ ಎಂಬ ಹೆಸರಿನಿಂದ ಕರೆಯುತ್ತಾರೆ. 
ಮಜ್ಜಿಗೆ ಹುಳಿಯನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಕರ್ನಾಟಕದ ಕೆಲ ಭಾಗಗಳಲ್ಲಿ ಕಡ್ಲೇಬೇಳೆ ಹಾಕಿ ಮಜ್ಜಿಗೆ ಹುಳಿ ತಯಾರಿಸುವುದು ರೂಢಿಯಲ್ಲಿದೆ. ಆದರೆ ಈ ಮಜ್ಜಿಗೆ ಹುಳಿಗೆ ಕಡಲೆಬೇಳೆ ಹಾಕುವುದಿಲ್ಲ. ಮತ್ತು ಈ ರೀತಿಯ ಮಜ್ಜಿಗೆ ಹುಳಿ  ಮಲೆನಾಡು ಪ್ರದೇಶದಲ್ಲಿ ಮಾಡುತ್ತಾರೆ. ನಮ್ಮ ಮನೆಯಲ್ಲಿ ಇದು ಎಲ್ಲರ ಅಚ್ಚುಮೆಚ್ಚಿನ ಅಡುಗೆ..ನೀವು ಒಮ್ಮೆ ಮಾಡಿ ನೋಡಿ.
ಮಜ್ಜಿಗೆ ಹುಳಿ ವಿಡಿಯೋ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 kg ಬೂದು ಕುಂಬಳಕಾಯಿ
  2. 1 - 2 ಹಸಿರು  ಮೆಣಸಿನಕಾಯಿ
  3. 1/4 ಕಪ್ ಹುಳಿಮಜ್ಜಿಗೆ ಅಥವಾ 1/2 ಕಪ್ ಮಜ್ಜಿಗೆ 
  4. 1 ಟೀಸ್ಪೂನ್ ಅಕ್ಕಿ 
  5. 1/4 ಟೀಸ್ಪೂನ್ ಜೀರಿಗೆ 
  6. 1/4 ಟೀಸ್ಪೂನ್ ಸಾಸಿವೆ 
  7. 1 ಕಪ್ ತೆಂಗಿನ ತುರಿ 
  8. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:


  1. ಬೂದು ಕುಂಬಳಕಾಯಿಯನ್ನು ತೊಳೆದು ಉದ್ದುದ್ದವಾಗಿ ಕತ್ತರಿಸಿ. ಸಿಪ್ಪೆ ಮತ್ತು ತಿರುಳನ್ನು ತೆಗೆದು 2cm ಉದ್ದದ ತುಂಡುಗಳಾಗಿ ಕತ್ತರಿಸಿ. ನಂತರ ಕುಕ್ಕರ್ ನಲ್ಲಿ ಸೀಳಿದ ಹಸಿರು ಮೆಣಸಿನಕಾಯಿ, ಕತ್ತರಿಸಿದ ಕುಂಬಳಕಾಯಿ, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. 
  2. ಮಸಾಲೆ ಅರೆಯಲು ತೆಂಗಿನತುರಿ , 1/4 ಟೀಸ್ಪೂನ್ ಸಾಸಿವೆ, 1/4 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ತೊಳೆದ ಅಕ್ಕಿ ತೆಗೆದುಕೊಳ್ಳಿ. 
  3. ಹಾಗೂ ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ.
  4. ರುಬ್ಬಿದ ಮಸಾಲೆಯನ್ನು ಬೇಯಿಸಿದ ಕುಂಬಳಕಾಯಿಗೆ ಸೇರಿಸಿ.
  5. ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
  6. ಚೆನ್ನಾಗಿ ಕಲಸಿ, ಕುದಿಯಲು ಇಡಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ.
  7. ಸ್ಟವ್ ಆಫ್ ಮಾಡಿದ ನಂತರ ಮೊಸರು ಅಥವಾ ಮಜ್ಜಿಗೆ ಸೇರಿಸಿ ಕಲಸಿ. 
  8. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ. 



Related Posts Plugin for WordPress, Blogger...