Majjige kadubu recipe in Kannada | ಮಜ್ಜಿಗೆ ಕಡುಬು ಮಾಡುವ ವಿಧಾನ
ಮಜ್ಜಿಗೆ ಕಡುಬು ವಿಡಿಯೋ
ಮಜ್ಜಿಗೆ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಸೋನಾ ಮಸೂರಿ ಅಕ್ಕಿ
- 1 ಕಪ್ ನೀರು
- 1 ಕಪ್ ಮಜ್ಜಿಗೆ
- ಉಪ್ಪು ರುಚಿಗೆ ತಕ್ಕಷ್ಟು
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೀಸ್ಪೂನ್ ಶುಂಠಿ
- 1 ಹಸಿಮೆಣಸಿನಕಾಯಿ
- 1 ಟೇಬಲ್ ಚಮಚ ಕರಿಬೇವು
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಈರುಳ್ಳಿ
- ಇಂಗು ಒಂದು ಚಿಟಿಕೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಮಜ್ಜಿಗೆ ಕಡುಬು ಮತ್ತು ಸಾರು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ.
- ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಒಗ್ಗರಣೆ ಮಾಡಿ.
- ಅದಕ್ಕೆ ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಹಾಕಿ ಹುರಿಯಿರಿ.
- ಹುರಿಯುವಾಗ ಇಂಗನ್ನು ಸೇರಿಸಿ.
- ಅಕ್ಕಿ ತರಿ ಹಾಕಿ ಒಂದು ನಿಮಿಷ ಹುರಿದು ಸ್ಟವ್ ಆಫ್ ಮಾಡಿ.
- ಬಿಸಿ ಸ್ವಲ್ಪ ಆರಿದ ಮೇಲೆ, ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಿ.
- ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ. ಹಿಟ್ಟು ಹಾಕುವಾಗ ಆಗಾಗ್ಯೆ ಮಗುಚಿ ಹಾಕಿ.
- ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
- ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ