Beans bili huli recipe in Kannada | ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ
ಬೀನ್ಸ್ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4kg ಬೀನ್ಸ್
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ನಿಂಬೆರಸ
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 2 - 4 ಹಸಿಮೆಣಸಿನಕಾಯಿ
- 2 ಟೇಬಲ್ ಚಮಚ ಕಡ್ಲೆಬೇಳೆ
- 1 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಸಾಸಿವೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 5 - 6 ಕರಿಬೇವು
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ:
- ಕಡ್ಲೆಬೇಳೆಯನ್ನು ಒಂದರಿಂದ ಎರಡು ಘಂಟೆ ನೆನೆಸಿ.
- ಬೀನ್ಸ್ ನ್ನು ತೊಳೆದು ಕತ್ತರಿಸಿ.
- ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್ ತೆಗೆದುಕೊಂಡು ಚಿಟಿಕೆ ಅರಶಿನ ಪುಡಿ, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ನಂತ್ರ ಒಂದು ಮಿಕಿ ಜಾರ್ ನಲ್ಲಿ ತೆಂಗಿನತುರಿ, ನೆನೆಸಿದ ಕಡ್ಲೆ ಬೇಳೆ, ಜೀರಿಗೆ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಅರೆದ ಮಸಾಲೆಯನ್ನು ತರಕಾರಿ ಇರುವ ಕುಕ್ಕರ್ ಗೆ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ (ಸುಮಾರು 1 ಕಪ್) ಮಗುಚಿ.
- ಒಂದೆರಡು ನಿಮಿಷ ಚೆನ್ನಾಗಿ ಕುದಿಸಿ.
- ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ