Godhi hittu rave dose recipe in Kannada | ಗೋಧಿಹಿಟ್ಟು ರವೇ ದೋಸೆ ಮಾಡುವ ವಿಧಾನ
ಗೋಧಿಹಿಟ್ಟು ರವೇ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 1/2 ಕಪ್ ರವೆ
- 1/4 ಕಪ್ ಮೊಸರು
- ಸಣ್ಣ ಚಿಟಿಕೆ ಅಡುಗೆ ಸೋಡಾ (ಬೇಕಾದಲ್ಲಿ)
- ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
- 1/4 ಟೀಸ್ಪೂನ್ ಸಕ್ಕರೆ
- ಉಪ್ಪು ರುಚಿಗೆ ತಕ್ಕಷ್ಟು
- ಸುಮಾರು 1.75 ಕಪ್ ನೀರು
ಗೋಧಿಹಿಟ್ಟು ರವೇ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು ಮತ್ತು ರವೆಯನ್ನು ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು, ಸಕ್ಕರೆ ಮತ್ತು ಸೋಡಾ ಸೇರಿಸಿ. ಒಮ್ಮೆ ಕಲಸಿ.
- ಮೊಸರು ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸ್ವಲ್ಪ ಸ್ವಲ್ಪವಾಗಿ ಸೇರಿಸಿ (ಸುಮಾರು 1.75 ಕಪ್).
- ಗಂಟಿಲ್ಲದಂತೆ ಮಗುಚಿ ದೋಸೆ ಹಿಟ್ಟು ತಯಾರಿಸಿ. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನಂತಿರಲಿ.
- ಒಂದೈದು ನಿಮಿಷ ನೆನೆಯಲು ಬಿಡಿ.
- ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
- ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಉದ್ದಿನ ದೋಸೆಯಂತೆ ತೆಳ್ಳಗೆ ತಿಕ್ಕಿ ದೋಸೆ ಮಾಡಿ.
- ಮುಚ್ಚಳ ಮುಚ್ಚಿ ಬೇಯಿಸಿ.
- ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
- ನಂತರ ಮಧ್ಯಮ ಉರಿಯಲ್ಲಿ, 5 - 10 ಸೆಕೆಂಡುಗಳ ಕಾಲ ಕಾಯಿಸಿ ದೋಸೆಯನ್ನು ತೆಗೆಯಿರಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ