Hasi batani snacks recipe in Kannada | ಹಸಿ ಬಟಾಣಿ ಸ್ನಾಕ್ಸ್ ಮಾಡುವ ವಿಧಾನ
ಹಸಿ ಬಟಾಣಿ ಸ್ನಾಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಕಪ್ ಹಸಿಬಟಾಣಿ
- 1 ಟೇಬಲ್ ಚಮಚ ಬೆಣ್ಣೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- ಚಿಟಿಕೆ ಇಂಗು
- 1/4 - 1/2 ಟೀಸ್ಪೂನ್ ಅಚ್ಚಖಾರದ ಪುಡಿ
- 1/4 ಟೀಸ್ಪೂನ್ ಆಮಚೂರ್ ಪುಡಿ (ಅಥವಾ 1/2 ಟೀಸ್ಪೂನ್ ನಿಂಬೆರಸ)
- 1/4 ಟೀಸ್ಪೂನ್ ಗರಂ ಮಸಾಲಾ
- 1/2 ಟೀಸ್ಪೂನ್ ಧನಿಯಾ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಹಸಿ ಬಟಾಣಿ ಸ್ನಾಕ್ಸ್ ಮಾಡುವ ವಿಧಾನ:
- ಹಸಿಬಟಾಣಿ ಸಿಪ್ಪೆ ಸುಲಿದು ತೊಳೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ.
- ಜೀರಿಗೆ ಸಿಡಿಯಲು ಶುರು ಆದ ಮೇಲೆ ಕತ್ತರಿಸಿದ ಶುಂಠಿ ಸೇರಿಸಿ ಹುರಿಯಿರಿ.
- ನಂತರ ಬಟಾಣಿ ಸೇರಿಸಿ.
- ಎರಡು ನಿಮಿಷ ದೊಡ್ಡ ಉರಿಯಲ್ಲಿ ಹುರಿಯಿರಿ.
- ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಅಗತ್ಯವಿದ್ದಲ್ಲಿ ನೀರು ಸೇರಿಸಿ.
- ನಂತ್ರ ಬೇಯಿಸಿದ ಬಟಾಣಿಗೆ ಉಪ್ಪು, ಇಂಗು ಮತ್ತು ಅಚ್ಚಖಾರದ ಪುಡಿ ಸೇರಿಸಿ.
- ಗರಂ ಮಸಾಲಾ, ಅಮಚೂರ್ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ.
- ಚೆನ್ನಾಗಿ ಕಲಸಿ, ಸ್ಟವ್ ಆಫ್ ಮಾಡಿ, ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ