Bili sagu recipe or white kurma in Kannada | ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ
ಬಿಳಿ ಸಾಗು ಅಥವಾ ಕೂರ್ಮ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ದೊಡ್ಡಕ್ಯಾರೆಟ್
- 1 ಆಲೂಗಡ್ಡೆ
- 10-15 ಬೀನ್ಸ್
- 1/2 ಕಪ್ ಹಸಿ ಬಟಾಣಿ
- 1 ಈರುಳ್ಳಿ
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಪುಲಾವ್ ಎಲೆ
- 2 ಸೆಮೀ ಚಕ್ಕೆ
- 4 - 5 ಲವಂಗ
- 4 - 5 ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು (ಮಸಾಲೆಗೆ):
- 3/4 ಕಪ್ ತೆಂಗಿನತುರಿ
- 12 - 15 ಗೋಡಂಬಿ
- 1 ಟೀಸ್ಪೂನ್ ಗಸಗಸೆ
- 1/2 ಟೀಸ್ಪೂನ್ ಸೋಂಪು
- 1 - 2 ಹಸಿರುಮೆಣಸಿನಕಾಯಿ
- 1 ಟೀಸ್ಪೂನ್ ಎಣ್ಣೆ
ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ:
- ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್ ಮತ್ತು ಬಟಾಣಿಯನ್ನು ಕುಕ್ಕರ್ಗೆ ಹಾಕಿ.
- ಉಪ್ಪು ಮತ್ತು ಚಿಟಿಕೆ ಸಕ್ಕರೆ (ಬೇಕಾದಲ್ಲಿ) ಹಾಕಿ ಬೇಯಿಸಿಕೊಳ್ಳಿ.
- ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ತೆಂಗಿನತುರಿ ಹೊರತುಪಡಿಸಿ) ಹಾಕಿ ಗಸಗಸೆ ಚಟಪಟ ಅನ್ನುವವರೆಗೆ ಹುರಿಯಿರಿ.
- ತೆಂಗಿನತುರಿ ಸೇರಿಸಿ, ಸ್ವಲ್ಪ ಹುರಿದು, ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಕೊಳ್ಳಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ.
- ಪುಲಾವ್ ಎಲೆ, ಚಕ್ಕೆ ಮತ್ತು ಲವಂಗ ಹಾಕಿ.
- ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಕೂಡಲೇ ಬೇಯಿಸಿದ ತರಕಾರಿಗಳನ್ನು ಹಾಕಿ.
- ಆಮೇಲೆ ಅರೆದ ಮಸಾಲೆ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕರಿಬೇವು ಹಾಕಿ ಕುದಿಸಿ. ಸ್ಟವ್ ಆಫ್ ಮಾಡಿ.
- ಪೂರಿ, ದೋಸೆ, ಚಪಾತಿ ಮತ್ತು ರೊಟ್ಟಿ ಜೊತೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ