Hunase gojju recipe in Kannada | ಹುಣಸೆ ಗೊಜ್ಜು ಮಾಡುವ ವಿಧಾನ
ಹುಣಸೆ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ನಿಂಬೆ ಗಾತ್ರದ ಹುಣಸೆ ಹಣ್ಣು
- 1 ಸಣ್ಣ ನಿಂಬೆ ಗಾತ್ರದ ಬೆಲ್ಲ
- ರುಚಿಗೆ ತಕ್ಕಷ್ಟು ಉಪ್ಪು
- 1/2 - 1 ಸಾರಿನ ಪುಡಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 - 2 ಹಸಿರು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 1/4 ಟೀಸ್ಪೂನ್ ಇಂಗು
- 1 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಹುಣಸೆ ಗೊಜ್ಜು ಮಾಡುವ ವಿಧಾನ:
- ಹುಣಿಸೆಹಣ್ಣನ್ನು 1/2 ಕಪ್ ನೀರಿನಲ್ಲಿ ನೆನೆಸಿ, ತೆಗೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ.
- ನಂತರ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ.
- ಕೊನೆಯಲ್ಲಿ ಸಾರಿನಪುಡಿ ಹಾಕಿ ಕುದಿಸಿ.
- ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
- ಅನ್ನ ಅಥವಾ ಪೊಂಗಲ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ