Pav bhaji recipe in Kannada | ಪಾವ್ ಭಾಜಿ ಮಾಡುವ ವಿಧಾನ
ಪಾವ್ ಭಾಜಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಆಲೂಗಡ್ಡೆ
- 1 ಕ್ಯಾರಟ್
- 1/2 ಕಪ್ ನೆನೆಸಿದ ಅಥವಾ ಹಸಿಬಟಾಣಿ
- 1 ಸಣ್ಣ ಗಾತ್ರದ ದೊಣ್ಣೆಮೆಣಸು
- 2 ಚಮಚ ಸಣ್ಣದಾಗಿ ಕೊಚ್ಚಿದ ಶುಂಠಿ-ಬೆಳ್ಳುಳ್ಳಿ ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್
- 1 ದೊಡ್ಡ ಕತ್ತರಿಸಿದ ಈರುಳ್ಳಿ
- 2 ಕತ್ತರಿಸಿದ ಟೊಮೇಟೊ
- 2 ಚಿಟಿಕೆ ಅರಿಶಿನ ಪುಡಿ
- 1 ಟೇಬಲ್ ಚಮಚ ಪಾವ್ ಭಾಜಿ ಮಸಾಲಾ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೇಬಲ್ ಚಮಚ ಬೆಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಪಾವ್ ಭಾಜಿ ಮಾಡುವ ವಿಧಾನ:
- ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ, ಬಟಾಣಿ, ಕತ್ತರಿಸಿದ ಕ್ಯಾರಟ್ ಮತ್ತು ಕತ್ತರಿಸಿದ ದೊಣ್ಣೆಮೆಣಸನ್ನು (ಅರ್ಧ ಭಾಗ) ಕುಕ್ಕರ್ ನಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ.
- ಬೇಯಿಸಿದ ನಂತರ ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಣ್ಣದಾಗಿ ಕೊಚ್ಚಿದ ಶುಂಠಿ-ಬೆಳ್ಳುಳ್ಳಿ (ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್) ಸೇರಿಸಿ ಹುರಿಯಿರಿ.
- ಆಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ.
- ನಂತರ ಉಳಿದ ಅರ್ಧ ಭಾಗ ದೊಣ್ಣೆಮೆಣಸು ಹಾಕಿ ಹುರಿಯಿರಿ.
- ನಂತರ ಕತ್ತರಿಸಿದ ಟೊಮೇಟೊ ಹಾಕಿ. ಅರಶಿನ ಪುಡಿ ಮತ್ತು ಉಪ್ಪು ಸೇರಿಸಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
- ಅದಕ್ಕೆ ಬೇಯಿಸಿ, ಹಿಸುಕಿದ ತರಕಾರಿ ಹಾಕಿ. ಪಾವ್ ಭಾಜಿ ಮಸಾಲಾ ಪುಡಿ ಸೇರಿಸಿ.
- ನಿಮ್ಮ ಖಾರಕ್ಕನುಗುಣವಾಗಿ ಅಚ್ಚಖಾರದ ಪುಡಿ ಸೇರಿಸಿ. ಉಪ್ಪು ಹೊಂದಿಸಿ.
- ಒಂದೆರಡು ನಿಮಿಷ ಕುದಿಸಿ.
- ಕೊನೆಯಲ್ಲಿ ಬೆಣ್ಣೆ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಭಾಜಿ ತಯಾರಾಯಿತು.
- ಹೆಂಚು ಅಥವಾ ದೋಸೆಕಲ್ಲಿನಲ್ಲಿ ಬೆಣ್ಣೆ ಬಿಸಿ ಮಾಡಿ, ಪಾವ್ ಅಥವಾ ಬ್ರೆಡ್ ನ್ನು ಟೋಸ್ಟ್ ಮಾಡಿ. ಭಾಜಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ