Custard powder pudding recipe in Kannada | ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ
ಕಸ್ಟರ್ಡ್ ಪೌಡರ್ ಪುಡ್ಡಿಂಗ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್
- 3 ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಕಪ್ ಹಾಲು
- 1 ಚಮಚ ಬೆಣ್ಣೆ
- 1 ಕಪ್ ಹಣ್ಣು ಬಡಿಸಲು
ಕಸ್ಟರ್ಡ್ ಪೌಡರ್ ಪುಡ್ಡಿಂಗ್ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
- ಅದಕ್ಕೆ ಅರ್ಧ ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
- ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಳ್ಳಿ.
- ಅದಕ್ಕೆ ಮೂರು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡೀ.
- ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ.
- ಕುದಿಸಿದ ನಂತ್ರ, ಉರಿ ಕಡಿಮೆ ಮಾಡಿ, ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ.
- ಸ್ವಲ್ಪ ದಪ್ಪ ಆದಮೇಲೆ ಸ್ಟವ್ ಆಫ್ ಮಾಡಿ.
- ಒಂದು ಚಮಚ ಬೆಣ್ಣೆ ಹಾಕಿ ಕಲಸಿ.
- ಬಿಸಿ ಆರಿದ ಮೇಲೆ ಒಂದು 15 ನಿಮಿಷ ಫ್ರಿಡ್ಜ್ ನಲ್ಲಿಡಿ.
- ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ