Mushti dose recipe in Kannada | ಮುಷ್ಟಿ ದೋಸೆ ಮಾಡುವ ವಿಧಾನ
ಮುಷ್ಟಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ದೋಸೆ ಅಕ್ಕಿ
- 2 ಟೇಬಲ್ ಸ್ಪೂನ್ ಉದ್ದಿನಬೇಳೆ
- 1/2 ಟೀಸ್ಪೂನ್ ಮೆಂತ್ಯ
- 1/2 ಕಪ್ ತೆಂಗಿನತುರಿ
- 1 ಕಪ್ ತೆಳು ಅವಲಕ್ಕಿ ಅಥವಾ ಗಟ್ಟಿ ಅವಲಕ್ಕಿ
- ಎಣ್ಣೆ ದೋಸೆ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ಮುಷ್ಟಿ ದೋಸೆ ಮಾಡುವ ವಿಧಾನ:
- ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ.
- ನೆನೆಸಿದ ನಂತರ ಅಕ್ಕಿ ಮತ್ತು ಬೇಳೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ತೆಂಗಿನತುರಿ ಸೇರಿಸಿ. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, ೧೦ ನಿಮಿಷ ನೆನೆಸಿ ಸೇರಿಸಿ.
- ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
- ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ.
- ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ತೆಂಗಿನತುರಿ ಮತ್ತು ಅವಲಕ್ಕಿ ಸೇರಿಸಿದ ಕಾರಣ, ದೊಡ್ಡ ಉರಿಯಲ್ಲಿ ಬೇಯಿಸಿದರೆ ದೋಸೆಯ ಕೆಳಭಾಗ ಕಪ್ಪಾಗಬಹುದು.
- ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ