Beetroot saaru recipe in Kannada | ಬೀಟ್ರೂಟ್ ಸಾರು ಮಾಡುವ ವಿಧಾನ
ಬೀಟ್ರೂಟ್ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1 ಮಧ್ಯಮ ಗಾತ್ರದ ಬೀಟ್ರೂಟ್
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1 ಮಧ್ಯಮ ಗಾತ್ರದ ಟೊಮೇಟೊ
- 2 ಒಣಮೆಣಸಿನಕಾಯಿ
- 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
- 1/2 ಟೀಸ್ಪೂನ್ ಜೀರಿಗೆ
- ದೊಡ್ಡ ಚಿಟಿಕೆ ಮೆಂತ್ಯ
- ಒಂದು ಚಿಟಿಕೆ ಸಾಸಿವೆ
- 1/4 ಕಪ್ ತೆಂಗಿನ ತುರಿ (ಬೇಕಾದಲ್ಲಿ)
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- ಇಂಗು ಒಂದು ಚಿಟಿಕೆ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ತುಪ್ಪ / ಅಡುಗೆ ಎಣ್ಣೆ
ಬೀಟ್ರೂಟ್ ಸಾರು ಮಾಡುವ ವಿಧಾನ:
- ಬೀಟ್ರೂಟ್ ನ್ನು ಸಿಪ್ಪೆ ತೆಗೆದು, ದೊಡ್ಡದಾಗಿ ಕತ್ತರಿಸಿ. ಒಂದು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
- ಅದೇ ಸಮಯದಲ್ಲಿ ಒಂದು ಬಾಣಲೆಯಲ್ಲಿ, ಒಂದು ಚಮಚ ಎಣ್ಣೆ ಬಿಸಿ ಮಾಡಿ, ಮಸಾಲೆ ಪದಾರ್ಥಗಳನ್ನು (ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಸಾಸಿವೆ) ಹುರಿಯಿರಿ.
- ಅದಕ್ಕೆ ಕತ್ತರಿಸಿದ ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ. ಬೇಯಿಸಿದ ಬೀಟ್ರೂಟ್ ಸೇರಿಸಿ ನುಣ್ಣನೆ ಅರೆಯಿರಿ. ಬೇಕಾದಲ್ಲಿ ತೆಂಗಿನತುರಿ ಸೇರಿಸಿಬಹುದು.
- ಆಮೇಲೆ ಬೀಟ್ರೂಟ್ ಬೇಯಿಸಿದ ನೀರಿಗೆ ಉಪ್ಪು, ಹುಣಿಸೇಹಣ್ಣು ಮತ್ತು ಬೆಲ್ಲ ಹಾಕಿ ಕುದಿಸಿ.
- ಅದೇ ಸಮಯದಲ್ಲಿ ಅರೆದ ಬೀಟ್ರೂಟ್ ಮಸಾಲೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
- ಚೆನ್ನಾಗಿ ಕುದಿಯಲು ಶುರುವಾದ ಮೇಲೆ ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
- ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಇಂಗಿನ ಬದಲಾಗಿ ಜಜ್ಜಿದ ಬೆಳ್ಳುಳ್ಳಿ ಸೇರಿಸಬಹುದು.
- ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ