Sajje (siridhanya) dose recipe in Kannada | ಸಜ್ಜೆ ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ಸಜ್ಜೆ ಅಥವಾ ಯಾವುದೇ ಸಿರಿಧಾನ್ಯ
- 1 ಕಪ್ ಅಕ್ಕಿ
- 1/2 ಕಪ್ ಉದ್ದಿನ ಬೇಳೆ
- 1 ಟೀಸ್ಪೂನ್ ಮೆಂತ್ಯ
- ಉಪ್ಪು ರುಚಿಗೆ ತಕ್ಕಷ್ಟು.
ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ):
- 2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1/4 ಕಪ್ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
- 1 - 2 ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು
ಸಜ್ಜೆ ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ:
- ಸಜ್ಜೆ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
- ನೆನೆಸಿದ ನಂತರ ನೀರು ಬಗ್ಗಿಸಿ. ಸಜ್ಜೆ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಒಂದು ಪಾತ್ರೆಗೆ ಹಾಕಿ.
- ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ದೋಸೆ ಹೆಂಚು ಬಿಸಿಮಾಡಿ ಕೊಳ್ಳಿ. ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ.
- ಬೇಕಾದಲ್ಲಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ. ಮುಚ್ಚಳವನ್ನು ಮುಚ್ಚಿ ಬೇಯಿಸಿ.
- ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
Plz send more receips of siridhaya
ಪ್ರತ್ಯುತ್ತರಅಳಿಸಿ