Ellu unde recipe in Kannada | ಎಳ್ಳು ಉಂಡೆ ಮಾಡುವ ವಿಧಾನ
ಎಳ್ಳು ಉಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಎಳ್ಳು
- 1/4 ಕಪ್ ಕೊಬ್ಬರಿ
- 1/2 ಕಪ್ ಬೆಲ್ಲ (ನಾನು ಸ್ವಲ್ಪ ಕಡಿಮೆ ಬಳಸಿದ್ದೇನೆ)
- ಒಂದು ಏಲಕ್ಕಿ
ಎಳ್ಳು ಉಂಡೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬುವವರೆಗೆ ಅಥವಾ ಚಟಪಟ ಸಿಡಿಯುವವರೆಗೆ ಹುರಿಯಿರಿ.
- ನಂತರ ತುರಿದ ಕೊಬ್ಬರಿ ಮತ್ತು ಏಲಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ.
- ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪುಡಿ ಮಾಡಿ.
- ಒಂದು ಬಟ್ಟಲಿಗೆ ಪುಡಿ ಮಾಡಿದ ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಹಾಕಿ ಕಲಸಿ.
- ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಒತ್ತಿ ಉಂಡೆ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ