Hurigadale chutney pudi recipe in Kannada | ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ
ಹುರಿಗಡಲೆ ಚಟ್ನಿ ಪುಡಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹುರಿಗಡಲೆ
- 1/2 ಕಪ್ ಒಣ ಕೊಬ್ಬರಿ ತುರಿದಿದ್ದು
- 1/2 ಟೀಸ್ಪೂನ್ ಕೊತ್ತಂಬರಿ ಬೀಜ
- ಒಂದು ಎಸಳು ಕರಿಬೇವು
- 1/2 ಟೀಸ್ಪೂನ್ ಬೆಲ್ಲ
- ಸಣ್ಣ ಗೋಲಿ ಹಣ್ಣಿನ ಗಾತ್ರದ ಹುಣಿಸೇಹಣ್ಣು
- 1.5 - 2 ಟೀಸ್ಪೂನ್ ಅಚ್ಚಖಾರದ ಪುಡಿ
- 1/4 ಟೀಸ್ಪೂನ್ ಇಂಗು ಅಥವಾ 3 - 4 ಎಸಳು ಬೆಳ್ಳುಳ್ಳಿ
- ಉಪ್ಪು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಅಡುಗೆ ಎಣ್ಣೆ
ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಕೊತ್ತಂಬರಿ ಬೀಜ ಮತ್ತು ಕರಿಬೇವು ಹಾಕಿ. ಕರಿಬೇವು ಗರಿಗರಿಯಾಗುವವರೆಗೆ ಹುರಿಯಿರಿ.
- ಆಮೇಲೆ ಕೊಬ್ಬರಿತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
- ನಂತ್ರ ಅದಕ್ಕೆ ಹುರಿಗಡಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
- ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ.
- ನಿಮ್ಮ ಖಾರಕ್ಕೆ ತಕ್ಕಂತೆ ಅಚ್ಚ ಖಾರದ ಪುಡಿ ಸೇರಿಸಿ.
- ಇಂಗು ಅಥವಾ ಬೆಳ್ಳುಳ್ಳಿ ಸೇರಿಸಿ.
- ಒಂದು ಸುತ್ತು ಮಗುಚಿ, ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ನುಣ್ಣನೆ ಪುಡಿಮಾಡಿಕೊಳ್ಳಿ.
- ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ