ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಸೋನಾ ಮಸೂರಿ ಅಕ್ಕಿ
- 1 ಕಪ್ ಅವರೇಕಾಳು
- 1 ಬದನೇಕಾಯಿ
- 3 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಚಮಚ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡಲೆಬೇಳೆ
- 4 - 5 ಕರಿಬೇವಿನ ಎಲೆ
- 2 ಟೇಬಲ್ ಚಮಚ ನೆಲಗಡಲೆ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1/4 ಟೀಸ್ಪೂನ್ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- 1 ಕಪ್ ಸೋನಾ ಮಸೂರಿ ಅಕ್ಕಿ
- 1 ಕಪ್ ಅವರೇಕಾಳು
- 1 ಬದನೇಕಾಯಿ
- 3 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಚಮಚ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡಲೆಬೇಳೆ
- 4 - 5 ಕರಿಬೇವಿನ ಎಲೆ
- 2 ಟೇಬಲ್ ಚಮಚ ನೆಲಗಡಲೆ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1/4 ಟೀಸ್ಪೂನ್ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:
- 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
- 2 ಟೀಸ್ಪೂನ್ ಉದ್ದಿನ ಬೇಳೆ
- 2 ಟೀಸ್ಪೂನ್ ಕಡಲೆಬೇಳೆ
- 3 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಬೆರಳುದ್ದ ಚಕ್ಕೆ
- 4 - 5 ಲವಂಗ
- 7 - 8 ಕಾಳುಮೆಣಸು
- 1/4 ಕಪ್ ತೆಂಗಿನ ತುರಿ
- 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
- 2 ಟೀಸ್ಪೂನ್ ಉದ್ದಿನ ಬೇಳೆ
- 2 ಟೀಸ್ಪೂನ್ ಕಡಲೆಬೇಳೆ
- 3 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಬೆರಳುದ್ದ ಚಕ್ಕೆ
- 4 - 5 ಲವಂಗ
- 7 - 8 ಕಾಳುಮೆಣಸು
- 1/4 ಕಪ್ ತೆಂಗಿನ ತುರಿ
ಅವರೇಕಾಳು ಬಾತ್ ಮಾಡುವ ವಿಧಾನ:
- ಮೊದಲಿಗೆ ಅವರೇಕಾಳು ಬಿಡಿಸಿಟ್ಟುಕೊಳ್ಳಿ. ಹಾಗೆ ಬದನೆಕಾಯಿಯನ್ನು ತೆಳುವಾಗಿ ಕತ್ತರಿಸಿ, ನೀರಿನಲ್ಲಿ ಹಾಕಿಡಿ.
- ಆಮೇಲೆ ಒಂದು ಕುಕ್ಕರ್ ನಲ್ಲಿ ಅಕ್ಕಿಯನ್ನು ತೊಳೆದು, ಅವರೇಕಾಳು ಸೇರಿಸಿ, ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಉಪ್ಪು ಸೇರಿಸಿ.
- ಅಗತ್ಯವಿದ್ದಷ್ಟು ನೀರು (ಎರಡೂವರೆಯಿಂದ ಮೂರು ಕಪ್) ಸೇರಿಸಿ ಎರಡು ವಿಷಲ್ ಮಾಡಿ ಬೇಯಿಸಿಟ್ಟು ಕೊಳ್ಳಿ.
- ನಂತರ "ಮಸಾಲೆ ಪುಡಿ" ಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಬೇಕು.
- ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕೊತ್ತಂಬರಿ ಬೀಜ ಹುರಿಯಿರಿ.
- ಚಕ್ಕೆ, ಲವಂಗ, ಕಾಳುಮೆಣಸು ಮತ್ತು ಗಸಗಸೆ ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಹುರಿದು, ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ, ಪುಡಿ ಮಾಡಿಟ್ಟುಕೊಳ್ಳಿ.
- ಆಮೇಲೆ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ.
- ನೆಲಗಡಲೆ ಹಾಕಿ ಹುರಿಯಿರಿ.
- ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಕರಿಬೇವು, ಕತ್ತರಿಸಿದ ಬದನೇಕಾಯಿ ಮತ್ತು ಅರಿಶಿನ ಪುಡಿ ಸೇರಿಸಿ, ಕೈಯಾಡಿಸಿ.
- ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ.
- ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
- ಬೇಯಿಸಿಟ್ಟ ಅನ್ನ ಮತ್ತು ಅವರೇಕಾಳು ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ