Kesuvina gadde palya maduva vidhana | ಕೆಸುವಿನ ಗಡ್ಡೆ ಪಲ್ಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 250gm ಕೆಸುವಿನ ಗೆಡ್ಡೆ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 ಟೀಸ್ಪೂನ್ ಧನಿಯಾ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- ಒಂದು ಟೇಬಲ್ ಚಮಚ ಅಕ್ಕಿಹಿಟ್ಟು
- 2 ಟೇಬಲ್ ಚಮಚ ಮೊಸರು
- ಉಪ್ಪು ರುಚಿಗೆ ತಕ್ಕಷ್ಟು
- ಒಂದು ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
ಕೆಸುವಿನ ಗಡ್ಡೆ ಪಲ್ಯ ಮಾಡುವ ವಿಧಾನ:
- ಕೆಸುವಿನಗಡ್ಡೆಯನ್ನು ತೊಳೆದು, ಒಂದು ಕುಕ್ಕರ್ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಒಂದು ವಿಷಲ್ ಮಾಡಿದರೆ ಸಾಕು.
- ನಂತ್ರ ಸಿಪ್ಪೆ ತೆಗೆದು ದಪ್ಪದ ಗಾಲಿಗಳನ್ನಾಗಿ ಕತ್ತರಿಸಿ.
- ಒಂದು ಬಟ್ಟಲಿನಲ್ಲಿ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಇಂಗು, ಅಕ್ಕಿ ಹಿಟ್ಟು ಮತ್ತು ಮೊಸರು ತೆಗೆದುಕೊಂಡು ಕಲಸಿ.
- ಅದಕ್ಕೆ ಬೇಯಿಸಿ, ಕತ್ತರಿಸಿದ ಕೆಸುವಿನ ಗಡ್ಡೆ ಹಾಕಿ, ಚೆನ್ನಾಗಿ ಕಲಸಿ ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಅದಕ್ಕೆ ಕಲಸಿಟ್ಟ ಕೆಸುವಿನ ಗಡ್ಡೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ. ಗರಿಗರಿಯಾಗುವವರೆಗೆ ಬೇಯಿಸಬೇಕು.
- ಕೊನೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ