Home remedy for kapha in Kannada | ಕಫಕ್ಕೆ ವೀಳ್ಯದೆಲೆ, ತುಳಸಿ ಮತ್ತು ಜೇನಿನ ಮನೆಮದ್ದು
ವೀಳ್ಯದೆಲೆ-ತುಳಸಿ ಮನೆಮದ್ದು ವಿಡಿಯೋ
ಬೇಕಾಗುವ ಪದಾರ್ಥಗಳು (ಮಕ್ಕಳಿಗೆ): (ಅಳತೆ ಕಪ್ = 240 ಎಂಎಲ್ )
- 1 ವೀಳ್ಯದೆಲೆ
- 9 ದಳ ತುಳಸಿ
- 1/2 ಚಮಚ ಜೇನುತುಪ್ಪ
ಬೇಕಾಗುವ ಪದಾರ್ಥಗಳು (ದೊಡ್ಡವರಿಗೆ): (ಅಳತೆ ಕಪ್ = 240 ಎಂಎಲ್ )
- 2 ವೀಳ್ಯದೆಲೆ
- 9 ದಳ ತುಳಸಿ
- ದೊಡ್ಡ ಚಿಟಿಕೆ ಒಣ ಶುಂಠಿ ಪುಡಿ
- 2 - 4 ಕಾಳುಮೆಣಸು
- 1/2 ಚಮಚ ಜೇನುತುಪ್ಪ
ಮಕ್ಕಳಿಗೆ ಮನೆಮದ್ದು ತಯಾರಿಸುವ ವಿಧಾನ:
- ವೀಳ್ಯದೆಲೆ ಮತ್ತು ತುಳಸಿಯನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ.
- ಎಲೆಗಳನ್ನು ಚೂರುಗಳಾಗಿ ಮಾಡಿ, ಒಂದು ಸಣ್ಣ ಬಟ್ಟಲಿನಲ್ಲಿ ಅಥವಾ ಒರಳಿನಲ್ಲಿ ತೆಗೆದುಕೊಳ್ಳಿ.
- ನಂತರ ಚೂರುಮಾಡಿದ ಎಲೆಗಳನ್ನು ಚೆನ್ನಾಗಿ ಗುದ್ದಿ.
- ಒಂದು ಬಟ್ಟೆಯ ಸಹಾಯದಿಂದ ಅಥವಾ ಕೈಬೆರಳುಗಳ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ.
- ಅದಕ್ಕೆ ಅರ್ಧ ಚಮಚ ಜೇನು ಬೆರೆಸಿ, ಮಗುವಿಗೆ ಕುಡಿಸಿ. ದಿನಕ್ಕೆ ಎರಡು ಬಾರಿ ಕುಡಿಸಿದರೆ ಸಾಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ