Hasi batani parota recipe in Kannada | ಹಸಿ ಬಟಾಣಿ ಪರೋಟ ಮಾಡುವ ವಿಧಾನ
ಹಸಿ ಬಟಾಣಿ ಪರೋಟ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- ಗೋಧಿ ಹಿಟ್ಟು (8 ದೊಡ್ಡ ಚಪಾತಿಗಾಗುವಷ್ಟು)
- 2 ಕಪ್ ಹಸಿ ಬಟಾಣಿ
- 4 ಎಸಳು ಬೆಳ್ಳುಳ್ಳಿ
- 1 cm ಉದ್ದದ ಶುಂಠಿ
- 2 - 3 ಹಸಿರುಮೆಣಸಿನಕಾಯಿ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಗರಂ ಮಸಾಲಾ
- ಚಿಟಿಕೆ ಅರಶಿನ ಪುಡಿ
- 12 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಹಸಿ ಬಟಾಣಿ ಪರೋಟ ಮಾಡುವ ವಿಧಾನ:
- ಮೃದುವಾದ ಚಪಾತಿ ಹಿಟ್ಟು ಕಲಸಿ ಮುಚ್ಚಿಡಿ.
- ಹಸಿಬಟಾಣಿಯನ್ನು ನೀರು ಹಾಕದೆ ಆವಿಯಲ್ಲಿ ಬೇಯಿಸಿ. ನೀರು ಹಾಕಿ ಬೇಯಿಸಿದಲ್ಲಿ ಸಂಪೂರ್ಣವಾಗಿ ನೀರನ್ನು ಬಸಿಯಿರಿ.
- ಒಂದು ಮಿಕ್ಸಿ ಜಾರಿನಲ್ಲಿ ಬೆಳ್ಳುಳ್ಳಿ, ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅರೆಯಿರಿ.
- ಅದಕ್ಕೆ ಬೇಯಿಸಿದ ಬಟಾಣಿ ಹಾಕಿ ತರಿತರಿಯಾಗಿ ಅರೆಯಿರಿ.
- ಒಂದು ಬಾಣಲೆಗೆ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ.
- ಕಾದ ಎಣ್ಣೆಗೆ ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಕೂಡಲೇ ಅರೆದಿಟ್ಟ ಮಿಶ್ರಣ ಹಾಕಿ ಕೈಯಾಡಿಸಿ.
- ನಂತರ ಅದಕ್ಕೆ ಉಪ್ಪು, ಗರಂ ಮಸಾಲಾ ಮತ್ತು ಅರಿಶಿನ ಹಾಕಿ ಕಲಸಿ. ಹೆಚ್ಚಿನ ನೀರಿನಂಶ ಆರಿದ ಮೇಲೆ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ನಿಂಬೆಗಾತ್ರದ ಉಂಡೆಗಳನ್ನು ಮಾಡಿ.
- ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಅದರೊಳಗೆ ಬಟಾಣಿಯ ಉಂಡೆಗಳನ್ನು ಸೇರಿಸಿ.
- ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ.
- ಖಾಯಿಸಿದ ಮೇಲೆ ಎರಡೂ ಬದಿಯೂ ಸ್ವಲ್ಪ ತುಪ್ಪ ಹಚ್ಚಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ