Hunasekayi thokku saaru recipe in Kannada | ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 5 - 6 ಬೆಳ್ಳುಳ್ಳಿ, ಜಜ್ಜಿದ್ದು
- ಇಂಗು ಒಂದು ದೊಡ್ಡ ಚಿಟಿಕೆ
- 5 - 6 ಕರಿಬೇವಿನ ಎಲೆ
- 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ
- 1 ದೊಡ್ಡ ಟೊಮೆಟೋ
- ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ
- 2 ಟೇಬಲ್ ಸ್ಪೂನ್ ಹುಣಸೆಕಾಯಿ ತೊಕ್ಕು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
- 1/2 ಟೀಸ್ಪೂನ್ ಕಾಳು ಮೆಣಸು, ಪುಡಿಮಾಡಿದ್ದು
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಬೆಳ್ಳುಳ್ಳಿ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ. ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
- ಅದಕ್ಕೆ ಹುಣಸೆ ತೊಕ್ಕು ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ.
- ಉಪ್ಪು ಮತ್ತು ಬೆಲ್ಲ ಸೇರಿಸಿ.
- ಜಜ್ಜಿದ ಕಾಳುಮೆಣಸು ಸೇರಿಸಿ ಕುದಿಸಿ.
- ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ