Hunasekayi thokku recipe in Kannada | ಹುಣಸೆಕಾಯಿ ತೊಕ್ಕು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 250gm ಹುಣಸೆಕಾಯಿ
- 5 - 10 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಮೆಂತೆ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಇಂಗು
- 1/4 ಟೀಸ್ಪೂನ್ ಅರಿಶಿನ ಪುಡಿ
- 1/4 ಟೀಸ್ಪೂನ್ ಇಂಗು
- 4 ಟೇಬಲ್ ಚಮಚ ಎಣ್ಣೆ
ಹುಣಸೆಕಾಯಿ ತೊಕ್ಕು ಮಾಡುವ ವಿಧಾನ:
- ಹುಣಸೆಕಾಯಿಯನ್ನು ತೊಳೆದು ನೀರಾರಿಸಿ.
- ಪ್ರತಿ ಕಾಯಿಯನ್ನು ಮುರಿಯುತ್ತಾ ನಾರನ್ನು ತೆಗೆಯಿರಿ.
- ನಂತರ ಅದನ್ನು ಕುಟ್ಟಾಣಿಯಲ್ಲಿ ಜಜ್ಜಿ. ಬೀಜ ಗಟ್ಟಿ ಇದ್ದರೆ ತೆಗೆದುಹಾಕಿ.
- ಒಂದು ಬಾಣಲೆಯಲ್ಲಿ ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ತೆಗೆದಿಡಿ.
- ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು ಮತ್ತು ಅರಿಶಿನ ಪುಡಿಯ ಒಗ್ಗರಣೆ ಮಾಡಿ. ಸ್ಟವ್ ಆಫ್ ಮಾಡಿ, ಆರಲು ಬಿಡಿ.
- ಈಗ ಮಿಕ್ಸಿ ಜಾರಿನಲ್ಲಿ ಹುರಿದ ಮೆಂತೆ ಮತ್ತು ಹಸಿರುಮೆಣಸಿನಕಾಯಿ (ತೊಳೆದು, ಆರಿಸಿದ್ದು) ಹಾಕಿ. ನೀರು ಸೇರಿಸದೆ ಅರೆಯಿರಿ.
- ನಂತ್ರ ಅದಕ್ಕೆ ಜಜ್ಜಿದ ಹುಣಸೆಕಾಯಿ ಹಾಕಿ, ನೀರು ಹಾಕದೆ ಅರೆಯಿರಿ.
- ಉಪ್ಪು ಸೇರಿಸಿ ಪುನಃ ಅರೆಯಿರಿ.
- ಬಾಣಲೆಯಲ್ಲಿನ ಒಗ್ಗರಣೆ ಬಿಸಿ ಆರಿದ ಮೇಲೆ ಅರೆದ ಮಿಶ್ರಣವನ್ನು ಹಾಕಿ.
- ಚೆನ್ನಾಗಿ ಮಗುಚಿ. ತಣ್ಣಗಾದ ಮೇಲೆ ಗಾಜಿನ ಬಾಟಲಿಯಲ್ಲಿ ಹಾಕಿ ಎತ್ತಿಡಿ.
- ಹುಣಸೆಕಾಯಿ ತೊಕ್ಕು ಸವಿಯಲು ಸಿದ್ಧ. ಹೆಚ್ಚಿನ ಪ್ರಮಾಣದಲ್ಲಿ ಮಾಡುವುದಾದಲ್ಲಿ, ಒಗ್ಗರಣೆಯನ್ನು ಬಳಸುವ ಮುನ್ನ ಸೇರಿಸಿದರೆ ಸಾಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ