ಶನಿವಾರ, ಜೂನ್ 29, 2024

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

 

Veg raita recipe in Kannada

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

ವೆಜ್ ರಾಯಿತ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು 
  2. 1/2 ಕಪ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ
  3. 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕ್ಯಾರಟ್
  5. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ದಪ್ಪಮೆಣಸು
  6. 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1/4 ಟೀಸ್ಪೂನ್ ಕಾಳುಮೆಣಸಿನ ಪುಡಿ
  9. 1/4 ಟೀಸ್ಪೂನ್ ಜೀರಿಗೆ ಪುಡಿ
  10. ಉಪ್ಪು ರುಚಿಗೆ ತಕ್ಕಷ್ಟು.

ಪದಾರ್ಥಗಳು (ಬೇಕಾದಲ್ಲಿ):

  1. ಅಚ್ಚಖಾರದ ಪುಡಿ
  2. ಚಾಟ್ ಮಸಾಲಾ
  3. ಬ್ಲಾಕ್ ಸಾಲ್ಟ್ 
  4. ಸ್ವಲ್ಪ ಕೊತ್ತಂಬರಿ ಸೊಪ್ಪು

ವೆಜ್ ರಾಯಿತ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಸರು ಮತ್ತು ಉಪ್ಪನ್ನು ತೆಗೆದು ಕೊಳ್ಳಿ. 
  2. ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಕಲಸಿ. 
  3. ನಂತರ ಹೆಚ್ಚಿದ ಸೌತೆಕಾಯಿ ಮತ್ತು ಈರುಳ್ಳಿ ಸೇರಿಸಿ. 
  4. ಕ್ಯಾರಟ್ ಮತ್ತು ದಪ್ಪಮೆಣಸನ್ನೂ ಸೇರಿಸಿ. 
  5. ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕಲಸಿ. 
  6. ಮೇಲಿನಿಂದ ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಬ್ಲಾಕ್ ಸಾಲ್ಟ್ ಉದುರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕೂಡಲೇ ಬಡಿಸಿ.
  7. ಅಥವಾ ಬಡಿಸುವವರೆಗೆ ಫ್ರಿಡ್ಜ್ನಲ್ಲಿಡಿ. 

ಶನಿವಾರ, ಜೂನ್ 15, 2024

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

 

Chinthamani kadlekai recipe in Kannada

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

ಚಿಂತಾಮಣಿ ಕಡ್ಲೆಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  3. 7 - 8 ಕರಿಬೇವಿನ ಎಲೆ
  4. 3 - 4 ಹಸಿಮೆಣಸಿನಕಾಯಿ
  5. 1/2 ನಿಂಬೆಹಣ್ಣಿನ ರಸ
  6.  1/4 ಟೀಸ್ಪೂನ್ ಅರಶಿನ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. 1/4 ಟೀಸ್ಪೂನ್ ಮೆಂತ್ಯಕಾಳು
  9. ಉಪ್ಪು ರುಚಿಗೆ ತಕ್ಕಷ್ಟು

ಶೇಂಗಾ ಹುರಿಗಾಳು ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ. 
  2. ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಒಂದು ಮಿಕ್ಸಿ ಜಾರಿನಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸಿನಕಾಯಿ ತೆಗೆದುಕೊಳ್ಳಿ.
  4. ಅದಕ್ಕೆ ಉಪ್ಪು, ನಿಂಬೆ ಹಣ್ಣಿನ ರಸ, ಇಂಗು ಮತ್ತು ಅರಿಶಿನ ಸೇರಿಸಿ. 
  5. ನೆನೆಸಿದ ಮೆಂತ್ಯ ಕಾಳನ್ನು ಸೇರಿಸಿ. 
  6. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಅರೆದುಕೊಳ್ಳಿ. 
  7. ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  8. ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಮಂಗಳವಾರ, ಜೂನ್ 11, 2024

Thodekai kayirasa recipe in Kannada | ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ

 

Thodekai kayirasa recipe in Kannada

Thodekai kayirasa recipe in Kannada | ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ

ತೊಂಡೆಕಾಯಿ ಕಾಯಿರಸ ವಿಡಿಯೋ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ತೊಂಡೆಕಾಯಿ
  2. 4 ಟೀಸ್ಪೂನ್ ಉದ್ದಿನ ಬೇಳೆ
  3. 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ
  5. ಹುಣಸೆ ಹಣ್ಣು (ಬೇಕಾದಲ್ಲಿ, ನಾನು ಹಾಕಲಿಲ್ಲ)
  6. 1/4 ಟೀಸ್ಪೂನ್ ಅಡುಗೆ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ:

  1. ತೊಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
  2. ಕುಕ್ಕರ್‌ಗೆ ಕತ್ತರಿಸಿದ ತೊಂಡೆಕಾಯಿ ಹಾಕಿ. ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಹಸಿಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಕಂದು ಬಣ್ಣಕ್ಕೆ ಬರುವ ತನಕ ಮಧ್ಯಮ ಉರಿಯಲ್ಲಿ ಹುರಿಯಿರಿ.
  4. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
  5. ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿದ ಮೇಲೆ ಕುದಿಸಬಾರದು.
  6. ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.
  7. ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.

Related Posts Plugin for WordPress, Blogger...