ಮಂಗಳವಾರ, ಮಾರ್ಚ್ 30, 2021

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ

 

Onadrakshi recipe in Kannada

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ 

ಒಣದ್ರಾಕ್ಷಿ ಮಾಡುವ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. ಅಗತ್ಯವಿದ್ದಷ್ಟು ದ್ರಾಕ್ಷಿ (ಸಿಹಿ, ತೆಳು ಸಿಪ್ಪೆಯ ದ್ರಾಕ್ಷಿ)
  2. ಬೇಯಿಸಲು ಇಡ್ಲಿ ಪಾತ್ರೆ 

ಒಣದ್ರಾಕ್ಷಿ ಮಾಡುವ ವಿಧಾನ:

  1. ಚೆನ್ನಾಗಿ ಹಣ್ಣಾದ, ತೆಳು ಸಿಪ್ಪೆಯ ದ್ರಾಕ್ಷಿಯನ್ನು ತೆಗೆದುಕೊಳ್ಳಿ. 
  2. ಹಣ್ಣನ್ನು ಬಿಡಿಸಿ, ಚೆನ್ನಾಗಿ ತೊಳೆಯಿರಿ. 
  3. ಇಡ್ಲಿ ಪ್ಲೇಟ್ ನಲ್ಲಿಟ್ಟು ಐದು ನಿಮಿಷ ಆವಿಯಲ್ಲಿ (ಹಬೆಯಲ್ಲಿ) ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ. 
  4. ಒಂದು ಹತ್ತಿಯ ಬಟ್ಟೆ ಅಥವಾ ಟ್ರೇ ಯಲ್ಲಿ ಹರಡಿ. 
  5. ಬಿಸಿಲಿನಲ್ಲಿಟ್ಟು ಒಂದೆರಡು ದಿವಸ ಒಣಗಿಸಿ. 
  6. ಒಣಗಿದ ಮೇಲೆ, ಬಿಸಿಲು ವಾಸನೆ ಹೋಗುವ ಸಲುವಾಗಿ ಒಂದು ದಿನ ಬಿಟ್ಟು ನಂತರ  ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 24, 2021

Kadalekalu dose recipe in Kannada | ಕಡಲೆಕಾಳು ದೋಸೆ ಮಾಡುವ ವಿಧಾನ

 

Kadalekalu dose recipe in Kannada

Kadalekalu dose recipe in Kannada | ಕಡಲೆಕಾಳು ದೋಸೆ ಮಾಡುವ ವಿಧಾನ 

ಕಡಲೆಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/2 ಕಪ್ ಅಕ್ಕಿ
  2. 1/2 ಕಪ್ ಕಡ್ಲೆಕಾಳು
  3. 2 - 5 ಒಣಮೆಣಸಿನಕಾಯಿ
  4. 2 ಸೆಮೀ ಉದ್ದದ ಶುಂಠಿ
  5. 1/2 ಟೀಸ್ಪೂನ್ ಜೀರಿಗೆ
  6. ಸ್ವಲ್ಪ ಕರಿಬೇವು
  7. ಸ್ವಲ್ಪ ಕೊತ್ತಂಬರಿ ಸೊಪ್ಪು
  8. ದೊಡ್ಡ ಚಿಟಿಕೆ ಇಂಗು
  9. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  10. ಉಪ್ಪು ರುಚಿಗೆ ತಕ್ಕಷ್ಟು.

ಕಡಲೆಕಾಳು ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಕಡಲೆಕಾಳನ್ನು 7 - 8 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ. ಒಣಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ. 
  4. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  6. ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಇಂಗು ಸೇರಿಸಿ. 
  7. ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. ಹಿಟ್ಟು ಹುದುಗುವ ಅವಶ್ಯಕತೆ ಇಲ್ಲ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  11. ದೋಸೆಯನ್ನು ಮಗುಚಿ ಇನ್ನೊಂದು ಬದಿಯೂ ಕಾಯಿಸಿ. 
  12. ತೆಂಗಿನಕಾಯಿ ಚಟ್ನಿಯೊಂದಿಗೆ ಅಥವಾ ಬೆಣ್ಣೆಯೊಂದಿಗೆ ಬಡಿಸಿರಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಮಾರ್ಚ್ 22, 2021

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ

 

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಳಕೆ ಕಟ್ಟಿದ ಹೆಸರುಕಾಳು 
  2. 1/2 ಕಪ್ ತುರಿದ ಕ್ಯಾರಟ್
  3. 1/2 ಕಪ್ ಸಣ್ಣಗೆ ಹೆಚ್ಚಿದ ಸೌತೆಕಾಯಿ
  4. 1/4 ಕಪ್  ಹಸಿ ತೆಂಗಿನ ತುರಿ
  5. ಸ್ವಲ್ಪ ದಾಳಿಂಬೆ ಬೀಜ (ಬೇಕಾದಲ್ಲಿ)
  6. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1/2 - 1 ಟೀಸ್ಪೂನ್ ನಿಂಬೆರಸ (ಅಥವಾ ಸಣ್ಣಗೆ ಹೆಚ್ಚಿದ ಒಂದು ಟೊಮೇಟೊ)
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಹಸಿಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಹೆಸರುಕಾಳು ಕೋಸಂಬರಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಳಕೆ ಹೆಸರುಕಾಳು, ತುರಿದ ಕ್ಯಾರಟ್, ಕೊಚ್ಚಿದ ಸೌತೆಕಾಯಿ, ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  2. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ  ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  3. ನಂತರ ಎಣ್ಣೆ, ಹಸಿರುಮೆಣಸಿನಕಾಯಿ, ಇಂಗು  ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.
Related Posts Plugin for WordPress, Blogger...