ಮಂಗಳವಾರ, ಆಗಸ್ಟ್ 29, 2017

Tomato bath recipe in Kannada | ಈರುಳ್ಳಿ ಬೆಳ್ಳುಳ್ಳಿ ರಹಿತ ಟೊಮೇಟೊ ಬಾತ್ ಮಾಡುವ ವಿಧಾನ

Tomato bath recipe in Kannada

Tomato bath recipe in Kannada | ಈರುಳ್ಳಿ ಬೆಳ್ಳುಳ್ಳಿ ರಹಿತ ಟೊಮೇಟೊ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 4 ಟೇಬಲ್ ಚಮಚ ಅಡುಗೆ ಎಣ್ಣೆ 
  3. 1/2 ಚಮಚ ಸಾಸಿವೆ 
  4. 1 ಟೀಸ್ಪೂನ್ ಉದ್ದಿನ ಬೇಳೆ 
  5. 1 ಟೀಸ್ಪೂನ್ ಕಡಲೆಬೇಳೆ 
  6. 4 - 5 ಕರಿಬೇವಿನ ಎಲೆ 
  7. 4 ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಟೊಮ್ಯಾಟೊ 
  8. 1/2 ಕಪ್ ತೆಂಗಿನ ತುರಿ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  11. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
  2. 1 ಟೀಸ್ಪೂನ್ ಉದ್ದಿನ ಬೇಳೆ
  3. 1 ಟೀಸ್ಪೂನ್ ಕಡಲೆಬೇಳೆ 
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 4 - 5 ಲವಂಗ
  6. 1/2 ಬೆರಳುದ್ದ ಚಕ್ಕೆ 
  7. 1 ಏಲಕ್ಕಿ
  8. ಚಿಟಿಕೆ ಇಂಗು

ಈರುಳ್ಳಿ ಬೆಳ್ಳುಳ್ಳಿ ರಹಿತ ಟೊಮೇಟೊ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಕೆಂಪು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ, ಕೊತ್ತಂಬರಿ ಬೀಜ, ಲವಂಗ, ಚಕ್ಕೆ, ಏಲಕ್ಕಿ ಮತ್ತು ಇಂಗನ್ನು 1 ಚಮಚ ಎಣ್ಣೆ ಹಾಕಿ ಹುರಿಯಿರಿ. 
  3. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. 
  4. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
  5. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  6. ನಂತರ ಹೆಚ್ಚಿದ ಟೊಮೇಟೊ ಹಾಕಿ
  7. ಉಪ್ಪು ಮತ್ತು ಅರಶಿನ ಹಾಕಿ ಟೊಮೇಟೊ ಮುದ್ದೆ ಆಗುವವರೆಗೆ ಬೇಯಿಸಿ. 
  8. ನಂತ್ರ ಮಸಾಲೆ ಪುಡಿ ಮತ್ತು ಕಾಯಿ ತುರಿಯನ್ನ ಹಾಕಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  9. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿಯಾಗಿ ಬಡಿಸಿ.

ಸೋಮವಾರ, ಆಗಸ್ಟ್ 28, 2017

Huruli kaalu saaru recipe in Kannada | ಹುರುಳಿ ಕಾಳು ಸಾರು ಮಾಡುವ ವಿಧಾನ

Huruli kaalu saaru recipe in Kannada | ಹುರುಳಿ ಕಾಳು ಸಾರು ಮಾಡುವ ವಿಧಾನ 

ಹುರುಳಿ ಕಾಳು ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಕಪ್ ಹುರುಳಿಕಾಳು
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  4. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 2 - 4 ಒಣಮೆಣಸಿನಕಾಯಿ
  2. 1.5 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  3. 1/2 ಟೀಸ್ಪೂನ್ ಜೀರಿಗೆ
  4. 7 - 8 ಮೆಂತ್ಯ
  5. ಇಂಗು ಒಂದು ಚಿಟಿಕೆ
  6. 1/4 ಕಪ್ ತೆಂಗಿನ ತುರಿ
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. ಇಂಗು ಒಂದು ಚಿಟಿಕೆ ಅಥವಾ ೪ ಎಸಳು ಬೆಳ್ಳುಳ್ಳಿ
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಹುರುಳಿ ಕಾಳು ಸಾರು ಮಾಡುವ ವಿಧಾನ:

  1. ಹುರುಳಿಕಾಳನ್ನು ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗಾಗುವವರೆಗೆ ಬೇಯಿಸಿ. ಕುಕ್ಕರ್ ನಲ್ಲಿ ಬೇಯಿಸಿದಲ್ಲಿ ಉತ್ತಮ. ಹುರುಳಿ ಕಾಳನ್ನು ನೆನೆಸಿ ಅಥವಾ ಮೊಳಕೆ ಬರಿಸಿ ಸಹ ಉಪಯೋಗಿಸಬಹುದು. 
  2. ಬೇಯಿಸಿದ ನಂತರ, ಬಸಿದು, ನೀರು ಮತ್ತು ಕಾಳನ್ನು ಬೇರ್ಪಡಿಸಿ. 
  3. ಅದೇ ಸಮಯದಲ್ಲಿ ಮಸಾಲೆ ಪದಾರ್ಥಗಳನ್ನು ಹುರಿದು, ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
  4. ನಂತ್ರ ಸುಮಾರು ಅರ್ಧ ಕಪ್ನಷ್ಟು ಬೇಯಿಸಿದ ಕಾಳನ್ನು ಸೇರಿಸಿ ಪುನಃ ಅರೆಯಿರಿ. 
  5. ಅರೆದ ಮಸಾಲೆಯನ್ನು ಬಸಿದ ನೀರಿಗೆ ಹಾಕಿ. 
  6. ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  8. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಇಂಗು (ಅಥವಾ ಜಜ್ಜಿದ ಬೆಳ್ಳುಳ್ಳಿ) ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  9. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಆಗಸ್ಟ್ 25, 2017

kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

Kadlebele cucumber kosambari recipe in kannada

Kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಚಮಚ ಕಡ್ಲೆಬೇಳೆ
  2. 1/2 ಸಣ್ಣಗೆ ಕೊಚ್ಚಿದ ಸೌತೆಕಾಯಿ
  3. 2 ಟೇಬಲ್ ಚಮಚ ತೆಂಗಿನ ತುರಿ
  4. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  5. 1/2 ಹಸಿಮೆಣಸಿನಕಾಯಿ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಮಾಡುವ ವಿಧಾನ:

  1. ಕಡ್ಲೆಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ನೆನೆಸುವಾಗ ೧/೪ ಚಮಚದಷ್ಟು ಉಪ್ಪು ಹಾಕಿ ನೆನೆಸಿ. 
  2. ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಟ್ಟುಕೊಳ್ಳಿ.
  3. ಒಂದು ಬಟ್ಟಲಿನಲ್ಲಿ ನೆನೆಸಿದ ಕಡ್ಲೆಬೇಳೆ, ಕೊಚ್ಚಿದ ಸೌತೆಕಾಯಿ ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  4. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.
Related Posts Plugin for WordPress, Blogger...