ಭಾನುವಾರ, ಮೇ 16, 2021

How to clean stove burner in Kannada | ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ

  

How to clean stove burner in Kannada

How to clean stove burner in Kannada | ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ

ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. ಅಗತ್ಯವಿದ್ದಷ್ಟು ಬಿಸಿ ನೀರು
  2. ಅರ್ಧ ನಿಂಬೆ ಹಣ್ಣು
  3. ಒಂದು ಸಣ್ಣ ಪ್ಯಾಕ್ ಇನೋ 
  4. ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
  5. ಒಂದು ಬ್ರಷ್ ಅಥವಾ ಸ್ಕ್ರಬ್ಬರ್

ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಕಪ್ ಬಿಸಿ ನೀರು
  2. ಅರ್ಧ ಕಪ್ ವಿನೆಗರ್
  3. ಎರಡು ಚಮಚ ಅಡುಗೆ ಸೋಡಾ
  4. ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
  5. ಒಂದು ಬ್ರಷ್ ಅಥವಾ ಸ್ಕ್ರಬ್ಬರ್

ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ:

  1. ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ಅರ್ಧ ನಿಂಬೆ ಹಣ್ಣು ಮತ್ತು ಒಂದು ಸಣ್ಣ ಪ್ಯಾಕ್ ಇನೋ ಫ್ರೂಟ್ ಸಾಲ್ಟ್ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ. 
  2. ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ವಿನೆಗರ್ ಮತ್ತು ಅಡುಗೆ ಸೋಡಾ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ. 
  3. ಇನೋ ಫ್ರೂಟ್ ಸಾಲ್ಟ್ ಅಥವಾ ವಿನೆಗರ್ ಇಲ್ಲವಾದಲ್ಲಿ, ಬಿಸಿ ನೀರು ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್) ನಲ್ಲಿ ನೆನೆಸಿಡಿ. 
  4. ನೆನೆಸಿದ ನಂತರ ಬ್ರಷ್ (ಅಥವಾ ಸ್ಕ್ರಬ್ಬರ್) ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಚೆನ್ನಾಗಿ ತಿಕ್ಕಿ. 
  5. ಜಾಸ್ತಿ ಹೊಳತೆ ಬೇಕಾದಲ್ಲಿ ಸ್ಟೀಲ್ ಸ್ಕ್ರಬ್ಬರ್ ನಲ್ಲಿ ಮೆತ್ತಗೆ ತಿಕ್ಕಿ. 
  6. ಚೆನ್ನಾಗಿ ತೊಳೆದು, ನೀರಾರಲು ಬಿಡಿ. 

ಗುರುವಾರ, ಮೇ 13, 2021

Akki kadubu and saaru recipe in Kannada | ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ

 

Aki kadubu and saaru recipe in Kannada

Akki kadubu and saaru recipe in Kannada | ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ 

ಅಕ್ಕಿ ಕಡುಬು ಮತ್ತು ಸಾರು ವಿಡಿಯೋ

ಅಕ್ಕಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 2.5 ಕಪ್ ನೀರು 
  3. ಉಪ್ಪು ರುಚಿಗೆ ತಕ್ಕಷ್ಟು

ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಟೊಮ್ಯಾಟೊ
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. 1 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
  4. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. 1 ಹಸಿರು ಮೆಣಸಿನಕಾಯಿ
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣಮೆಣಸಿನಕಾಯಿ
  2. 1/2 ಚಮಚ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಇಂಗು ಒಂದು ಚಿಟಿಕೆ
  5. 5 - 6 ಕರಿಬೇವಿನ ಎಲೆ
  6. 2 ಟೀಸ್ಪೂನ್ ಅಡುಗೆ ಎಣ್ಣೆ

ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  4. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  5. ಮಧ್ಯಮ ಉರಿಯಲ್ಲಿ ತೆಳು ಪೇಸ್ಟ್ ಆಗುವವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ತುಂಬ ಕಡಿಮೆ ಸಮಯ ಸಾಕಾಗುತ್ತದೆ. 
  6. ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ. 
  7. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
  8. ಸಾರು ಮಾಡಲು ಟೊಮ್ಯಾಟೊವನ್ನು ದೊಡ್ಡದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
  9. ಅರೆದ ಟೊಮ್ಯಾಟೊವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಅರಿಶಿನ ಪುಡಿ ಹಾಕಿ ಕುದಿಯಲು ಇಡಿ. 
  10. ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. ಕುದಿಯುವುದನ್ನು ಮುಂದುವರೆಸಿ. 
  11. ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಮಂದ ಉರಿಯಲ್ಲಿ ಕುದಿಯಲು ಬಿಡಿ.
  12. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  13.  ಒಂದು ಚಮಚ ಸಾರಿನ ಪುಡಿ ಹಾಕಿ ಕುದಿಸಿ. ಸ್ಟವ್ ಆಫ್  ಮಾಡಿ 
  14. ಎಣ್ಣೆ, ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ,  ಇಂಗು ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  15. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಕಡುಬಿನೊಂದಿಗೆ ಬಡಿಸಿ.

ಸೋಮವಾರ, ಮೇ 10, 2021

Protein dose recipe in kannada | ಬೇಳೆ ದೋಸೆ ಮಾಡುವ ವಿಧಾನ

 

Protein dose recipe in kannada

Protein dose recipe in kannada | ಬೇಳೆ ದೋಸೆ ಮಾಡುವ ವಿಧಾನ

ಬೇಳೆ ದೋಸೆ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ದೋಸೆ ಅಕ್ಕಿ
  2. 1/4 ಕಪ್ ಹೆಸರುಕಾಳು
  3. 2 ಟೇಬಲ್ ಚಮಚ ಉದ್ದಿನ ಬೇಳೆ
  4. 2 ಟೇಬಲ್ ಚಮಚ ತೊಗರಿ ಬೇಳೆ 
  5. 2 ಟೇಬಲ್ ಚಮಚ ಕಡ್ಲೇ ಬೇಳೆ 
  6. 2 ಟೇಬಲ್ ಚಮಚ ಮಸೂರ್ ಬೇಳೆ 
  7. 1 ಟೇಬಲ್ ಚಮಚ ಶೇಂಗಾ
  8. 1 ಟೇಬಲ್ ಚಮಚ ಬಾದಾಮಿ
  9. 3 - 5 ಒಣ ಮೆಣಸಿನಕಾಯಿ
  10. ಸಣ್ಣ ತುಂಡು ಶುಂಠಿ 
  11. 1 ಟೀಸ್ಪೂನ್ ಜೀರಿಗೆ 
  12. ಉಪ್ಪು ರುಚಿಗೆ ತಕ್ಕಷ್ಟು.

ಬೇಳೆ ದೋಸೆ ಮಾಡುವ ವಿಧಾನ:

  1. ಅಕ್ಕಿ, ಬೇಳೆ ಮತ್ತು ಕಾಳುಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  3. ಎರಡನೇ ಸಲ ಅರೆಯುವಾಗ ಒಣಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ ಅರೆಯಿರಿ. 
  4. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
  6. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 
  7. ಸಮಯವಿದ್ದಲ್ಲಿ ಕೆಲವು ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಟ್ಟು ನಂತರ ದೋಸೆ ಮಾಡಿದರೆ ಆಗಲೂ ದೋಸೆ ಚೆನ್ನಾಗಿ ಬರುತ್ತದೆ. ನಿಮ್ಮ ರುಚಿ ಪ್ರಕಾರ ಮಾಡಿ ಆನಂದಿಸಿ.

Related Posts Plugin for WordPress, Blogger...