ಸೋಮವಾರ, ಡಿಸೆಂಬರ್ 30, 2019

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?

How to store green peas in kannada

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?


ಹಸಿಬಟಾಣಿಯನ್ನು ಶೇಖರಿಸುವ ವಿಡಿಯೋ

ಹಸಿಬಟಾಣಿಯನ್ನು ಶೇಖರಿಸುವ ಸಲಹೆಗಳು:

  1. ಅಗತ್ಯವಿದ್ದಷ್ಟು ಹಸಿಬಟಾಣಿಯನ್ನು ಸುಲಿದು ತೆಗೆದುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. 
  3. ಕುದಿಯಲು ಶುರು ಆದ ಮೇಲೆ  ಸುಲಿದ ಬಟಾಣಿ ಹಾಕಿ.
  4. ಒಂದು ನಿಮಿಷ ಅಥವಾ ಬಟಾಣಿ ಎಲ್ಲ ಮೇಲೆ ಬರುವವರೆಗೆ ಕುದಿಸಿ, ಕೂಡಲೇ ಸ್ಟವ್ ಆಫ್ ಮಾಡಿ. 
  5. ನಂತ್ರ  ನೀರನ್ನು ಬಗ್ಗಿಸಿ. 
  6. ಮೇಲಿನಿಂದ ಸ್ವಲ್ಪ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಜಾಸ್ತಿ ಬೇಯಿಸುವುದನ್ನು ತಪ್ಪಿಸಬಹುದು. 
  7. ಆಮೇಲೆ ಒಂದು ಬಟ್ಟೆಯ ಮೇಲೆ ಹರಡಿ. 
  8. ಬಿಸಿ ಆರಿದ ಮೇಲೆ ಬಾಕ್ಸ್ ಅಥವಾ ಜಿಪ್ ಲಾಕ್ ಕವರ್ ನಲ್ಲಿ ಹಾಕಿ ಫ್ರೀಜರ್ನಲ್ಲಿಡಿ (ಫ್ರಿಡ್ಜ್ ನ ಮೇಲ್ಭಾಗ).  
  9. ಒಂದು ವರ್ಷದವರೆಗೆ ಹಾಳಾಗುವುದಿಲ್ಲ. ಅಗತ್ಯವಿದ್ದಾಗ ಬಳಸಿ. 

ಶುಕ್ರವಾರ, ಡಿಸೆಂಬರ್ 20, 2019

Bili sagu recipe or white kurma in Kannada | ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ

Bili sagu recipe or white kurma in Kannada

Bili sagu recipe or white kurma in Kannada | ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ 


 ಬಿಳಿ ಸಾಗು ಅಥವಾ ಕೂರ್ಮ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡಕ್ಯಾರೆಟ್
  2. 1 ಆಲೂಗಡ್ಡೆ
  3. 10-15 ಬೀನ್ಸ್
  4. 1/2 ಕಪ್ ಹಸಿ ಬಟಾಣಿ
  5. 1 ಈರುಳ್ಳಿ
  6. 1 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಪುಲಾವ್ ಎಲೆ
  8. 2 ಸೆಮೀ ಚಕ್ಕೆ
  9. 4 - 5 ಲವಂಗ
  10. 4 - 5 ಕರಿಬೇವಿನ ಎಲೆ
  11. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 3/4 ಕಪ್ ತೆಂಗಿನತುರಿ
  2. 12 - 15 ಗೋಡಂಬಿ
  3. 1 ಟೀಸ್ಪೂನ್ ಗಸಗಸೆ
  4. 1/2 ಟೀಸ್ಪೂನ್ ಸೋಂಪು
  5. 1 - 2 ಹಸಿರುಮೆಣಸಿನಕಾಯಿ
  6. 1 ಟೀಸ್ಪೂನ್ ಎಣ್ಣೆ

ಬಿಳಿ ಸಾಗು ಅಥವಾ ಕೂರ್ಮ ಮಾಡುವ ವಿಧಾನ:

  1. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಬೀನ್ಸ್ ಮತ್ತು ಬಟಾಣಿಯನ್ನು ಕುಕ್ಕರ್ಗೆ ಹಾಕಿ. 
  2. ಉಪ್ಪು ಮತ್ತು ಚಿಟಿಕೆ ಸಕ್ಕರೆ (ಬೇಕಾದಲ್ಲಿ) ಹಾಕಿ ಬೇಯಿಸಿಕೊಳ್ಳಿ. 
  3. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ತೆಂಗಿನತುರಿ ಹೊರತುಪಡಿಸಿ) ಹಾಕಿ ಗಸಗಸೆ ಚಟಪಟ ಅನ್ನುವವರೆಗೆ ಹುರಿಯಿರಿ. 
  4. ತೆಂಗಿನತುರಿ ಸೇರಿಸಿ, ಸ್ವಲ್ಪ ಹುರಿದು, ಸ್ಟವ್ ಆಫ್ ಮಾಡಿ. 
  5. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಕೊಳ್ಳಿ.
  6. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. 
  7. ಪುಲಾವ್ ಎಲೆ, ಚಕ್ಕೆ ಮತ್ತು ಲವಂಗ ಹಾಕಿ. 
  8. ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  9. ಈರುಳ್ಳಿ ಮೆತ್ತಗಾದ ಕೂಡಲೇ ಬೇಯಿಸಿದ ತರಕಾರಿಗಳನ್ನು ಹಾಕಿ. 
  10. ಆಮೇಲೆ ಅರೆದ ಮಸಾಲೆ ಹಾಕಿ. 
  11. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  12. ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕರಿಬೇವು ಹಾಕಿ ಕುದಿಸಿ.  ಸ್ಟವ್ ಆಫ್ ಮಾಡಿ. 
  13. ಪೂರಿ, ದೋಸೆ, ಚಪಾತಿ ಮತ್ತು ರೊಟ್ಟಿ ಜೊತೆ ಬಡಿಸಿ. 

ಮಂಗಳವಾರ, ಡಿಸೆಂಬರ್ 17, 2019

Lemon rasam recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ

Nimbe hannina saaru recipe in Kannada

Lemon rasam recipe in Kannada | ನಿಂಬೆಹಣ್ಣಿನ ಸಾರು ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ (ಅಥವಾ ಹೆಸರುಬೇಳೆ)
  2. 1 ಟೀಸ್ಪೂನ್ ಜೀರಿಗೆ 
  3. 1 ಟೊಮೇಟೊ
  4. 2 ಕಪ್ ನೀರು
  5. 4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
  6. 1/4 ಚಮಚ ಅರಶಿನ ಪುಡಿ
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ತೆಂಗಿನತುರಿ
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. 4 - 5 ಜಜ್ಜಿದ ಬೆಳ್ಳುಳ್ಳಿ
  4. 7 - 8 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ನಿಂಬೆಹಣ್ಣಿನ ಸಾರು ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು ಒಂದು ಕಪ್ ನೀರು, ಜೀರಿಗೆ, ಕತ್ತರಿಸಿದ ಟೊಮೇಟೊ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಬೇಯಿಸಿದ ಬೆಳೆಯನ್ನು ಸೌಟಿನ ಹಿಂಭಾಗದಿಂದ ಚೆನ್ನಾಗಿ ಮಸಿದುಕೊಳ್ಳಿ. 
  3. ಮಸಿದ ಬೇಳೆಗೆ ಇನ್ನೊಂದು ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. 
  4. ಕುದಿಯುವಾಗ ಎಣ್ಣೆ, ಸಾಸಿವೆ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಕುದಿಯುವುದನ್ನು ಮುಂದುವರೆಸಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನತುರಿ ಸೇರಿಸಿ. 
  6. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  7. ಸ್ಟವ್ ಆಫ್ ಮಾಡಿದ ಕೂಡಲೇ ಲಿಂಬೆ ಹಣ್ಣಿನ ರಸ ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. 

Related Posts Plugin for WordPress, Blogger...